ಕೊಪ್ಪಳ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ವರದಿಯಾಗಿದೆ. ಅಕ್ಕಿ ಸಾಗಿಸ್ತಿದ್ದ 4 ಲಾರಿಗಳನ್ನು ಜಪ್ತಿ ಮಾಡಲಾಗಿದೆ.
DCವಿಕಾಸ್ ಕಿಶೋರ್ ಹಾಗೂ SP ಟಿ.ಶ್ರೀಧರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಜೊತೆಗೆ, ಅಧಿಕಾರಿಗಳಿಗೆ ಕೆಲವೆಡೆ ಅನಧಿಕೃತವಾಗಿ ಅನ್ನಭಾಗ್ಯದ ಅಕ್ಕಿ ಸಂಗ್ರಹವಾಗಿರುವ ಮಾಹಿತಿ ಸಹ ದೊರೆತಿತ್ತು. ಹಾಗಾಗಿ, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಅಕ್ಕಿ ಸಂಗ್ರಹಿಸಿಟ್ಟಿದ್ದ ಖಾಸಗಿ ಗೋದಾಮಿನ ಮೇಲೂ ದಾಳಿ ನಡೆಸಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆ ಆರೋಪ: ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್