Bullying ಸಹಪಾಠಿಗಳ ಮೇಲೆ ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ!

|

Updated on: Feb 13, 2021 | 10:00 PM

Bullying: ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವ ಪ್ರಸಂಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ನಿಲ್ದಾಣದಲ್ಲಿ ಇತರೆ ವಿದ್ಯಾರ್ಥಿಗಳ ಮೇಲೆ ಈತ ಪುಂಡಾಟಿಕೆ ಮಾಡ್ತಿದ್ದ.

Bullying ಸಹಪಾಠಿಗಳ ಮೇಲೆ ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ!
ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ
Follow us on

ಗದಗ: ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವ ಪ್ರಸಂಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ನಿಲ್ದಾಣದಲ್ಲಿ ಇತರೆ ವಿದ್ಯಾರ್ಥಿಗಳ ಮೇಲೆ ಈತ ಪುಂಡಾಟಿಕೆ ಮಾಡ್ತಿದ್ದ. ಇದಲ್ಲದೆ, ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಪುಂಡ ಹಲ್ಲೆ ಸಹ ನಡೆಸಿದ್ದ.

ಇದನ್ನು ಗಮನಿಸಿ ಪ್ರಶ್ನೆ ಮಾಡಿದ್ದ ಸಾರಿಗೆ ಸಂಸ್ಥೆ ನೌಕರರಿಗೆ ಆವಾಜ್ ಸಹ ಹಾಕಿದ್ದ. ಈ ವೇಳೆ, ಗದ್ದಲ ಗಮನಿಸಿ ಸ್ಥಳಕ್ಕೆ ಬಂದ ಪೊಲೀಸರು ಪುಂಡನಿಗೆ ಸರಿಯಾಗಿ ಕಪಾಳಮೋಕ್ಷ ಮಾಡಿದರು. ಕೆನ್ನೆಗೆ ಏಟು ಬೀಳುತ್ತಿದ್ದಂತೆ ಪುಂಡ ವಿದ್ಯಾರ್ಥಿ ಕೂಡಲೇ ಅಲ್ಲಿಂದ ಎಸ್ಕೇಪ್​!

ಕುಡಿದ ಅಮಲಿನಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ
ಇತ್ತ, ಕುಡಿದ ಅಮಲಿನಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಾಚನಹಳ್ಳಿಯಲ್ಲಿ ನಡೆದಿದೆ. ಗಲಾಟೆಯಲ್ಲಿ ನಾಲ್ವರಿಗೆ ಗಾಯಗಳಾಗಿದೆ.

ಗಲಾಟೆಯಲ್ಲಿ ನವೀನ್‌, ಮುನಿರಾಜು, ಲಕ್ಷ್ಮೀನರಸಮ್ಮ ಮತ್ತು ರವಿಕುಮಾರ್‌ಗೆ ಗಾಯಗಳಾಗಿದೆ. ಎಲ್ಲರಿಗೂ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಎಲ್ಲಿ ಕುಡೀತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು -ಕಾಶಪ್ಪನವರ್​ ಕೌಂಟರ್​