AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್, ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಪರಿಶೀಲನೆ ವೇಳೆ ಕೀ ಕೊಡೆದ ಪೊಲೀಸರ ಜೊತೆ ಯುವಕ ವಾಗ್ವಾದ ಮಾಡಿದ್ದು ಈ ವೇಳೆ ಯುವಕನಿಗೆ ಪೊಲೀಸರಿಂದ ಕಪಾಳಮೋಕ್ಷವಾಗಿದೆ.

ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್, ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್
ಫುಡ್ ಡೆಲಿವರಿ ಬಾಯ್ಸ್​ಗೆ ಖಡಕ್ ವಾರ್ನಿಂಗ್
ಆಯೇಷಾ ಬಾನು
|

Updated on: May 11, 2021 | 12:20 PM

Share

ಚಿಕ್ಕಬಳ್ಳಾಪುರ: ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನ ಚೈನ್ ಲಿಂಕ್ ಮುರಿಯಲು ಸರ್ಕಾರ ಕರ್ನಾಟಕ ರಾಜ್ಯದಲ್ಲಿ 14 ದಿನಗಳ ಕಠಿಣ ಲಾಕ್ಡೌನ್ ವಿಧಿಸಿದೆ. ಇಂದು ಅದರ ಎರಡನೇ ದಿನವಾಗಿದ್ದೂ ಇಂದೂ ಕೂಡ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಪರಿಶೀಲನೆ ವೇಳೆ ಕೀ ಕೊಡೆದ ಪೊಲೀಸರ ಜೊತೆ ಯುವಕ ವಾಗ್ವಾದ ಮಾಡಿದ್ದು ಈ ವೇಳೆ ಯುವಕನಿಗೆ ಪೊಲೀಸರಿಂದ ಕಪಾಳಮೋಕ್ಷವಾಗಿದೆ.

ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿ ಬೈಕ್ ಸೀಜ್ ಮಾಡಿದ್ದಾರೆ. ನಾವು ಬಡವರು ಸಾರ್ ಕೆಲಸಕ್ಕೆ ಹೋಗಬೇಕು ಬಿಡಿ ಎಂದು ಮನವಿ ಮಾಡಿದ್ರೂ ಪೊಲೀಸರು ಕೇಳದೆ ಬೈಕ್ ಸೀಜ್ ಮಾಡಿರುವ ಘಟನೆ ನಡೆದಿದೆ.

ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್ ಇನ್ನು ಬೆಂಗಳೂರಿನಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡ್ತಿದ್ದ ಡೆಲಿವರಿ ಬಾಯ್ಸ್ಗೆ ಯಲಹಂಕ ಟ್ರಾಫಿಕ್ ಇನ್ಸ್ ಪೆಕ್ಟರ್ ಮಂಜೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಯಲಹಂಕ ಸುತ್ತಾಮುತ್ತಾ ಸರಿಯಾಗಿ ಫೇಸ್ ಮಾಸ್ಕ್ ಧರಿಸದೇ ಅಡ್ಡಾಡ್ತಿದ್ದ ಫುಡ್ ಡೆಲಿವರಿ ಬಾಯ್ಸ್ನನ್ನು ನಿಲ್ಲಿಸಿ ವಾರ್ನ್ ಮಾಡಿ ಕಳಿಸಿದ್ದಾರೆ.

ಡೆಲಿವರಿ ಬಾಯ್ಸ್ ಫೇಸ್ ಮಾಸ್ಕ್ ಸರಿಯಾಗಿ ಧರಿಸಿರಬೇಕು. ಫುಡ್ ಡೆಲಿವರಿ ಆರ್ಡರ್ ಇರದೇ, ಅಥವಾ ಫುಡ್ ಕಿಟ್ ಬ್ಯಾಗ್ ಇಲ್ದಿರೋ ಬೈಕಲ್ಲಿ ಬಂದ್ರೆ ಬೈಕ್ ಸೀಜ್ ಮಾಡ್ತೀವಿ. ಸುಮ್ಮನೇ ಡೆಲಿವರಿ ಬಾಯ್ಸ್ ಅಂತ ಟೀ ಶರ್ಟ್ ಹಾಕ್ಕೊಂಡ್ ಅಡ್ಡಾಡ್ತಿರೋದ್ ಗಮನಕ್ಕೆ ಬಂದಿದೆ. ಡೆಲಿವರಿ ಕೊಡೋ ಟೈಮಲ್ಲಿ ಮಾಸ್ಕ್ ಫೇಸ್ ಶೀಲ್ಡ್ ಸ್ಯಾನಿಟೈಸರ್ ನಿಮ್ಮತ್ರ ಇರ್ಲೇಬೇಕು. ಮಾಸ್ಕ್ ಫೇಸ್ ಶೀಲ್ಡ್ ಇಲ್ದೆ ಓಡಾಡೋದ್ ಗೊತ್ತಾದ್ರೆ ಪಿಪಿಇ ಕಿಟ್ ಹಾಕಿ ಕಳಿಸ್ತೀವಿ. ಹೇಳಿ ನಿಮ್ಮ ಕಂಪನಿಗೆ ಸರಿಯಾಗಿ ಕೊರೊನಾ ರೂಲ್ಸ್ ಫಾಲೋ ಮಾಡೋಕ್.

ನೀವು ಒಬ್ಬೊಬ್ರು ದಿನಕ್ಕೆ ನೂರು ಮನೆಗೆ ಫುಡ್ ಡೆಲಿವರಿ ಕೊಡ್ತೀರಾ. ನಿಮ್ಮ ಅಜಾಗರೂಕತೆಯಿಂದ ಒಬ್ಬ ಸೋಂಕಿತ ನಿಮ್ಮ ಸಂಪರ್ಕಕ್ಕೆ ಬಂದ್ರು ಉಳಿದ 99 ಮನೆಯವರಿಗೆ ತೊಂದರೆಯಾಗತ್ತೆ. ಇದೇ ಲಾಸ್ಟ್ ವಾರ್ನಿಂಗ್ ನಿಮ್ಗೆಲ್ಲ ಇನ್ಮುಂದೆ ಒಂದ್ ಸಣ್ ರೂಲ್ಸ್ ಬ್ರೇಕ್ ಮಾಡಿದ್ರು ಕೇಸ್ ಹಾಕ್ದೆ ಬಿಡೊಲ್ಲ ಎಂದು ಖಡಕ್ ಆಗಿ ಫುಡ್ ಡೆಲಿವರಿ ಬಾಯ್ಸ್ ಗೆ ಯಲಹಂಕ ಟ್ರಾಫಿಕ್ ಇನ್ಸ್ ಪೆಕ್ಟರ್ ಮಂಜೇಗೌಡರಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಕಥೆ ಬರಹಗಾರ ಮಾಡಂಪು ಕುಂಜುಕುಟ್ಟನ್​ ಕೊರೊನಾದಿಂದ ನಿಧನ