ಸರ್ಕಾರದ ವಿರುದ್ಧ ಧರಣಿಗೆ ಕುಳಿತಿದ್ದ ಯಡಿಯೂರಪ್ಪ ಹಾಗೂ ಇತರ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Updated on: Apr 03, 2025 | 3:26 PM

ಪೊಲೀಸರು ತಮ್ಮನ್ನೂ ವಶಕ್ಕೆ ಪಡೆಯಲೆಂದು ಬಿಜೆಪಿ ನಾಯಕರಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಸೋಜಿಗ ಮೂಡಿಸಿತು. ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಎಂಪಿ ರೇಣುಕಾಚಾರ್ಯ ಮತ್ತು ಇನ್ನಿತರ ನಾಯಕರು ಬಸ್ ಹತ್ತಲು ಆತುರ ಪಡುವುದನ್ನು ನೋಡಬಹುದು. ಬಸ್ಸಲ್ಲಿ ಯಡಿಯೂರಪ್ಪ, ಬಿವೈ ವಿಜಯೇಂದ್ರ, ನಾರಾಯಣಸ್ವಾಮಿ ಚಲವಾದಿ ಮೊದಲಾದವರು ಕಂಡರು.

ಬೆಂಗಳೂರು, ಏಪ್ರಿಲ್ 3: ನಗರದ ಫ್ರೀಡಂ ಪಾರ್ಕ್​ನಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಅನೇಕ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಇವತ್ತು ಧರಣಿಗೆ ಅಗಮಿಸಿದ್ದ ಹಿರಿಯ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಸೇರಿದಂತೆ ಬಿಜೆಪಿರ ಪ್ರಮುಖ ನಾಯಕರನ್ನೆಲ್ಲ ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್​ಗಳಲ್ಲಿ ಅವರನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು. ಬಸ್ಸಲ್ಲಿ ಕುಳಿತಿದ್ದ ಯಡಿಯೂರಪ್ಪ ಜೊತೆ ಮಾತಾಡುವ ಪ್ರಯತ್ನವನ್ನು ನಮ್ಮ ವರದಿಗಾರ ಮಾಡಿದರು. ಆದರೆ ಮಾಜಿ ಸಿಎಂ ಮಾತಾಡಲಿಲ್ಲ.

ಇದನ್ನೂ ಓದಿ:  ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ: ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಕಹಳೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ