ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ: ಸ್ಪಷ್ಟನೆ ನೀಡಿದ ರಮೇಶ್ ಕುಮಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 08, 2020 | 8:43 PM

ಸರ್ಕಾರಿ ಸೇವೆಯಲ್ಲಿದ್ದಿದ್ದರೆ ವಿಆರ್‌ಎಸ್ ತೆಗೆದುಕೊಳ್ಳಬಹುದಿತ್ತು. ಆದರೆ ಸಾರ್ವಜನಿಕ ರಂಗ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ: ಸ್ಪಷ್ಟನೆ ನೀಡಿದ ರಮೇಶ್ ಕುಮಾರ್
ಮಾಜಿ ಸಭಾಪತಿ ರಮೇಶ್ ಕುಮಾರ್
Follow us on

ಕೋಲಾರ: ಇತ್ತೀಚಿಗಷ್ಟೇ ಸುದ್ದಿಯಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಿವೃತ್ತಿಯ ಕುರಿತು ಸ್ವತಃ ರಮೇಶ್ ಕುಮಾರ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ’ ಎಂದು ಹೇಳಿಕೆ ನೀಡುವ ಮೂಲಕ ಹಿರಿಯ ಶಾಸಕ, ಮಾಜಿ ಸ್ಪೀಕರ್ ತಮ್ಮ ರಾಜಕೀಯ ನಿವೃತ್ತಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ ನಿವೃತ್ತಿಯ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ. ಸಾರ್ವಜನಿಕ ರಂಗದಲ್ಲಿರುವ ಕಾರಣ ನಿವೃತ್ತಿಯ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಈ ಸ್ಥಾನದವರೆಗೆ ಬೆಳೆಸಿದ ಜನರು ನನ್ನ ನಿವೃತ್ತಿಯ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ಜನರ ಪ್ರೀತಿಯ ಬಂಧನದಲ್ಲಿರುವೆ..
ಜನರ ಪ್ರೀತಿ ದೊರಕಿದ ಕಾರಣ ಈ ಸ್ಥಾನದಲ್ಲಿದ್ದೇನೆ. ಜನರ ಪ್ರೀತಿ ಸಿಗದಿದ್ದರೆ ಈ ಸಾಧನೆ ಮಾಡಲು ಆಗುತ್ತಿರಲಿಲ್ಲ ಎಂದ ಅವರು, ಸರ್ಕಾರಿ ಸೇವೆಯಲ್ಲಿದ್ದಿದ್ದರೆ ವಿಆರ್‌ಎಸ್ ತೆಗೆದುಕೊಳ್ಳಬಹುದಿತ್ತು. ಆದರೆ ಸಾರ್ವಜನಿಕ ರಂಗ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕೊರೊನಾಗಿಂತ ಹೆಚ್ಚು ಕ್ರೌರ್ಯ ಮನುಷ್ಯನಲ್ಲಿದೆ: ಮಾಜಿ ಸ್ಪೀಕರ್‌ ರಮೇಶ್​ಕುಮಾರ್‌

 

Published On - 8:42 pm, Tue, 8 December 20