ಕೊರೊನಾ ಸೋಂಕಿನ ಸ್ಫೋಟದ ನಡುವೆಯೂ ಬಳ್ಳಾರಿ ಮತ್ತು ವಿಜಯನಗರದ 330 ಗ್ರಾಮಗಳು ಸೇಫ್

ಯಾರನ್ನೂ ಕೇರ್ ಮಾಡದ.. ಸೂಚನೆಯನ್ನೇ ಕೊಡದ.. ಯಾರ ಅಂದಾಜಿಗೂ ಸಿಗದ ಕೊರೊನಾ ಹಳ್ಳಿಗಳಲ್ಲಿ ಸವಾರಿ ಮಾಡ್ತಿದೆ. ಸಿಕ್ಕ ಸಿಕ್ಕವರ ಮೈ ಹೊಕ್ಕಿ ಕೇಕೆ ಹಾಕುತ್ತಿದೆ. ಅದೆಷ್ಟೋ ಜೀವಗಳನ್ನ ಹಿಂಡಿ ಹಾಕಿದೆ. ಮಾರಿಯ ಅಟ್ಟಹಾಸಕ್ಕೆ ಹಾದಿ ಬೀದಿಯಲ್ಲಿ ರೋಗಿಗಳು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಹೀಗೆ ಜನ ಒದ್ದಾಡ್ತಿದ್ರೂ ಬಳ್ಳಾರಿ ಜಿಲ್ಲೆಯ ಕೆಲ ಗ್ರಾಮಗಳಿಗೆ ಕೊರೊನಾ ಎಂಟ್ರಿಯೇ ಕೊಟ್ಟಿಲ್ಲ ಅನ್ನೋದೇ ಅಚ್ಚರಿ.

ಕೊರೊನಾ ಸೋಂಕಿನ ಸ್ಫೋಟದ ನಡುವೆಯೂ ಬಳ್ಳಾರಿ ಮತ್ತು ವಿಜಯನಗರದ 330 ಗ್ರಾಮಗಳು ಸೇಫ್
ಬಳ್ಳಾರಿ ಮತ್ತು ವಿಜಯನಗರದ 330 ಗ್ರಾಮಗಳು ಸೇಫ್

Updated on: May 27, 2021 | 8:57 AM

ಬಳ್ಳಾರಿ: ಬಳ್ಳಾರಿ ಮತ್ತು ನೂತನ ಜಿಲ್ಲೆಯಾದ ವಿಜಯನಗರದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಸೋಂಕಿನ ಸ್ಫೋಟವಾಗುತ್ತಿದೆ. ಹೀಗಿದ್ರೂ ಬಳ್ಳಾರಿ ಮತ್ತು ವಿಜಯನಗರದ 330 ಗ್ರಾಮಗಳು ಸೇಫ್ ಜೋನ್ನಲ್ಲಿವೆ. ಅಂದ್ರೆ, 330 ಗ್ರಾಮಗಳಿಗೆ ಇದುವರೆಗೂ ಕೊರೊನಾ ಸುಳಿದಿಲ್ಲ. ಅಂದ್ಹಾಗೆ, ಬಳ್ಳಾರಿ ಮತ್ತು ವಿಜಯನಗರದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 12,042 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 7,032 ಜನ ಸೊಂಕಿನಿಂದ ಗುಣಮುಖರಾಗಿದ್ದು, 5,010 ಸಕ್ರಿಯ ಪ್ರಕರಣಗಳಿವೆ. 147 ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಮತ್ತು 561 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಹಾಗಾದ್ರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಯಾವ ತಾಲೂಕಿನಲ್ಲಿ ಎಷ್ಟು ಹಳ್ಳಿಗಳು ಸೇಫ್ ಆಗಿವೆ ಅಂತ ನೋಡೋದಾದ್ರೆ,
ಎಷ್ಟು ಹಳ್ಳಿಗಳು ಸೇಫ್?
ಬಳ್ಳಾರಿ ತಾಲೂಕು – 22 ಹಳ್ಳಿ
ಹಡಗಲಿ ತಾಲೂಕು- 30 ಹಳ್ಳಿ
ಹಗರಿಬೊಮ್ಮನಹಳ್ಳಿ ತಾಲೂಕು- 21ಹಳ್ಳಿ
ಹರಪನಳ್ಳಿ ತಾಲೂಕು- 91ಹಳ್ಳಿ
ಹೊಸಪೇಟೆ ತಾಲೂಕು- 11ಹಳ್ಳಿ
ಕಂಪ್ಲಿ ತಾಲೂಕು- 10 ಹಳ್ಳಿ
ಕೊಟ್ಟೂರು ತಾಲೂಕು- 20 ಹಳ್ಳಿ
ಕೂಡ್ಲಿಗಿ ತಾಲೂಕು- 61 ಹಳ್ಳಿ
ಸಂಡೂರು ತಾಲೂಕು- 38 ಹಳ್ಳಿ
ಸಿರಗುಪ್ಪ ತಾಲೂಕು- 26 ಹಳ್ಳಿ

ಇನ್ನು, ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಪೋರ್ಸ್‍ಗಳನ್ನು ಫೀಲ್ಡ್ಗೆ ಇಳಿಸಲಾಗಿದೆ. ಜೊತೆಗೆ ಕುಟುಂಬ ಸಂರಕ್ಷಣಾ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಪ್ರತಿ 50 ಮನೆಗಳಿಗೆ ಒಂದರಂತೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ-ಮನೆಗೆ ಭೇಟಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಜ್ವರ, ಶೀತ, ಕೆಮ್ಮುವಿನಂತ ಲಕ್ಷಣಗಳು ಕಂಡುಬಂದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಾಗುತ್ತದೆ. ಮೂರು ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ಱಪಿಡ್ ಆಂಟಿಜೆನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೊವಿಡ್ ಕಿಟ್ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಏನೇ ಇರಲಿ, ಬಳ್ಳಾರಿಯ ನಗರದಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಆಗಿದ್ರೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಅಬ್ಬರಿಸುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೂ 330 ಹಳ್ಳಿಗಳು ಸೇಫ್ ಜೋನ್ನಲ್ಲಿವೆ ಅಂದ್ರೆ ನಿಜಕ್ಕೂ ಖುಷಿ ವಿಚಾರವೇ ಸರಿ.

ಇದನ್ನೂ ಓದಿ: ಕೊರೊನಾ ಮುಕ್ತ ಗ್ರಾಮ.. ಸಪ್ತದೇವತೆಗಳ ಕೃಪೆಯಿಂದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೊರೊನಾ ಎಂಟ್ರಿನೇ ಕೊಟ್ಟಿಲ್ಲ! ಏನದರ ಮಹಾತ್ಮೆ?