
ಬೆಂಗಳೂರು, ಸೆಪ್ಟೆಂಬರ್ 30: ಬೆಸ್ಕಾಂ (BESCOM) ಹೆಣ್ಣೂರು ಎಂಯುಎಸ್ಎಸ್-66ಕೆ.ವಿ. ಉಪ ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವುದರ ಸಲುವಾಗಿ ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರಿನ ವಿದ್ಯುತ್ ಸರಬರಾಜು ಇಲಾಖೆ ತಿಳಿಸಿದೆ.
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜು, ಕೆ. ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್ಶಿಪ್, ಮಾರುತಿ ಟೌನ್ಶಿಪ್, ನಾಗರಗಿರಿ ಟೌನ್ಶಿಪ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಗೆದ್ದಲಹಳ್ಳಿ, ಬ್ಲೆಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟಮೆಂಟ್, ಹಿರೇಮಠ ಲೇಔಟ್, ಟ್ರೆನಿಟಿ ಫಾರ್ಚುನ್, ಮೈಕಲ್ ಸ್ಕೂಲ್, ಬಿಎಚ್ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಪ್ರಕಾಶ್ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ವಿದ್ಯುತ್ ಸಂಪರ್ಕ ಸಂಬಂಧಿತ ದೂರುಗಳನ್ನು ವಾಟ್ಸ್ಆ್ಯಪ್ ಮೂಲಕವೇ ನೀಡಬಹುದು.ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳ ವಿವರವನ್ನೂ ನೀಡಿದೆ.
ಬೆಂಗಳೂರು ನಗರ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:56 am, Tue, 30 September 25