ಐದಾರು ಆಸ್ಪತ್ರೆ ಸುತ್ತಿದರೂ ಸಿಕ್ತಿಲ್ಲ ಚಿಕಿತ್ಸೆ! ನಡುರಸ್ತೆಯಲ್ಲಿ ತುಂಬು ಗರ್ಭಿಣಿ ನರಳಾಟ

|

Updated on: Jul 02, 2020 | 2:16 PM

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಕಂಗೆಟ್ಟ ವೈದ್ಯರು ಮಾನವೀಯತೆ ಮರೆತಿದ್ದಾರೆ. ತುಂಬು ಗರ್ಭಿಣಿಯ ನೋವು ಅರಿತಿದ್ದರೂ ಚಿಕಿತ್ಸೆ ನೀಡೋಕೆ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಸತತ 12 ಗಂಟೆಗಳಿಂದ ಹೊಟ್ಟೆಯಲ್ಲಿ ಮಗುವನ್ನು ಹೊತ್ತು ತುಂಬು ಗರ್ಭಿಣಿ ಆಸ್ಪತ್ರೆ ಆಸ್ಪತ್ರೆ ಅಲೆದಾಡುತ್ತಿದ್ದಾರೆ. ಆದರೆ ಕೊರೊನಾ ನೆಪ ಕೇಳಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಕೊರೊನಾ ಭಯದಿಂದ ಡೆಲಿವೆರಿ ಮಾಡಲು ಆಸ್ಪತ್ರೆಗಳು ಮುಂದಾಗುತ್ತಿಲ್ಲ. ಕೊರೊನಾ ನೆಗೆಟಿವ್ ಇದ್ದರೂ ಚಿಕಿತ್ಸೆಗೆ ನಕಾರ ಇನ್ನು ಗರ್ಭಿಣಿಗೆ ಕೊರೊನಾ ನೆಗೆಟಿವ್ ಬಂದಿದೆ. ನೆಗೆಟಿವ್ ರಿಪೋರ್ಟ್ ಇದ್ದರೂ […]

ಐದಾರು ಆಸ್ಪತ್ರೆ ಸುತ್ತಿದರೂ ಸಿಕ್ತಿಲ್ಲ ಚಿಕಿತ್ಸೆ! ನಡುರಸ್ತೆಯಲ್ಲಿ ತುಂಬು ಗರ್ಭಿಣಿ ನರಳಾಟ
Follow us on

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಕಂಗೆಟ್ಟ ವೈದ್ಯರು ಮಾನವೀಯತೆ ಮರೆತಿದ್ದಾರೆ. ತುಂಬು ಗರ್ಭಿಣಿಯ ನೋವು ಅರಿತಿದ್ದರೂ ಚಿಕಿತ್ಸೆ ನೀಡೋಕೆ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಸತತ 12 ಗಂಟೆಗಳಿಂದ ಹೊಟ್ಟೆಯಲ್ಲಿ ಮಗುವನ್ನು ಹೊತ್ತು ತುಂಬು ಗರ್ಭಿಣಿ ಆಸ್ಪತ್ರೆ ಆಸ್ಪತ್ರೆ ಅಲೆದಾಡುತ್ತಿದ್ದಾರೆ. ಆದರೆ ಕೊರೊನಾ ನೆಪ ಕೇಳಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಕೊರೊನಾ ಭಯದಿಂದ ಡೆಲಿವೆರಿ ಮಾಡಲು ಆಸ್ಪತ್ರೆಗಳು ಮುಂದಾಗುತ್ತಿಲ್ಲ.

ಕೊರೊನಾ ನೆಗೆಟಿವ್ ಇದ್ದರೂ ಚಿಕಿತ್ಸೆಗೆ ನಕಾರ
ಇನ್ನು ಗರ್ಭಿಣಿಗೆ ಕೊರೊನಾ ನೆಗೆಟಿವ್ ಬಂದಿದೆ. ನೆಗೆಟಿವ್ ರಿಪೋರ್ಟ್ ಇದ್ದರೂ ವೈದ್ಯರು ಚಿಕಿತ್ಸೆ ಕೊಡ್ತಿಲ್ಲ. ಮೈಸೂರು ರಸ್ತೆಯಲ್ಲಿರುವ ಭೀಮನಕುಪ್ಪೆಯ ನಿವಾಸಿ ಗರ್ಭಿಣಿ ಮಮತಾ ಪ್ರತಿ ತಿಂಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸುತ್ತಿದ್ದರು. ಇಂದು ಅವರಿಗೆ ಡೆಲಿವರಿ ಡೇಟ್ ನೀಡಲಾಗಿದೆ.

ನಿನ್ನೆ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಕುಟುಂಬಸ್ಥರು ನಿನ್ನೆ ರಾತ್ರಿ 12 ಗಂಟೆಗೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯರು ಇಲ್ಲಿ ನಮಗೆ ಸಮಸ್ಯೆ ಆಗುತ್ತದೆ. ನೀವು ವಾಣಿ ವಿಲಾಸಕ್ಕೆ ಕರೆದುಕೊಂಡು ಹೋಗಿ ಅಂತ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ವಾಣಿ ವಿಲಾಸ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಕೂಡ ಇದೇ ರೀತಿಯ ಉತ್ತರ ಸಿಕ್ಕಿದೆ. ಇಲ್ಲಿ ಕೊರೊನಾ ರೋಗಿಗಳು ಇದ್ದಾರೆ. ನಿಮಗೆ ಚಿಕಿತ್ಸೆ ಕೊಡಲು ಆಗೋದಿಲ್ಲ, ನೀವು ಕಿಮ್ಸ್​ಗೆ ಹೋಗಿ ಎಂದು ಸೂಚಿಸಿದ್ದಾರೆ. ಅಲ್ಲಿಗೆ ಹೋದ್ರೆ ಕೊರೊನಾ ರೋಗಿಗಳ ಜೊತೆಯಲ್ಲಿ ಇವರಿಗೂ ಚಿಕಿತ್ಸೆ ಕೊಡ್ತಿವಿ ಸರಿ ನಾ? ಆ ಮೇಲೆ ಅವಳಿಗೆ ಕೊರೊನಾ ಬಂದರೆ ನಮಗೆ ಕೇಳುವ ಹಾಗಿಲ್ಲ ಅಂತ ಹೇಳಿ ವಾಪಸ್ ಕಳುಹಿಸಿದ್ದಾರೆ.

ನಂತರ ಗೋವಿಂದರಾಜ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಅವರೂ ಕೂಡ ಚಿಕಿತ್ಸೆ ಕೊಡಲಿಲ್ಲ. ಸದ್ಯ ವಾರ್ಡ್ 127 ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆ ಆಸ್ಪತ್ರೆಯವರು ಹೆರಿಗೆ ಮಾಡ್ತಿವಿ. ಆದರೆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಮಗುವನ್ನು ಬೇರೆ ಕಡೆ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ.

Published On - 1:39 pm, Thu, 2 July 20