ಕೈದಿಗಳನ್ನೂ ಕಾಡಿದೆ ಕ್ರೂರಿ ಕೊರೊನಾ.. ಪರಪ್ಪನ ಅಗ್ರಹಾರಕ್ಕೂ ಎಂಟ್ರಿ ಕೊಟ್ಟಿದೆ
ಬೆಂಗಳೂರು: ಎದುರಿಗೆ ಸಿಕ್ಕವರನ್ನೆಲ್ಲಾ ಬಗ್ಗು ಬಡಿಯುತ್ತಿರುವ ಕ್ರೂರಿ ಕೊರೊನಾ ಈಗ ಪರಪ್ಪನ ಅಗ್ರಹಾರ ಜೈಲಿನೊಳಗೂ ನುಗ್ಗಿದೆ. ಕಾರಾಗೃಹದಲ್ಲಿ ಇದೀಗ 26 ಜನರಿಗೆ ಸೋಂಕು ದೃಢವಾಗಿದೆ. ಅದರಲ್ಲಿ 20 ವಿಚಾರಣಾಧೀನ ಕೈದಿಗಳಿದ್ದರೆ ಉಳಿದ ಆರು ಜನ ಕಾರಾಗೃಹದ ಸಿಬ್ಬಂದಿ. ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕೈದಿಗಳಿದ್ದಾರೆ. ಜೊತೆಗೆ ಇತ್ತೀಚೆಗೆ ಕಾರಾಗೃಹಕ್ಕೆ ಹೊಸದಾಗಿ 450 ಕೈದಿಗಳನ್ನು ದಾಖಲಿಸಲಾಗಿತ್ತು. ಇದೀಗ ಆ 450 ಜನರ ಪೈಕಿ ಕೆಲವರು ಜೈಲಿಗೆ ಬಂದು 21 ದಿನ ಕಳೆದಿದ್ದರಿಂದ 3 […]
ಬೆಂಗಳೂರು: ಎದುರಿಗೆ ಸಿಕ್ಕವರನ್ನೆಲ್ಲಾ ಬಗ್ಗು ಬಡಿಯುತ್ತಿರುವ ಕ್ರೂರಿ ಕೊರೊನಾ ಈಗ ಪರಪ್ಪನ ಅಗ್ರಹಾರ ಜೈಲಿನೊಳಗೂ ನುಗ್ಗಿದೆ. ಕಾರಾಗೃಹದಲ್ಲಿ ಇದೀಗ 26 ಜನರಿಗೆ ಸೋಂಕು ದೃಢವಾಗಿದೆ. ಅದರಲ್ಲಿ 20 ವಿಚಾರಣಾಧೀನ ಕೈದಿಗಳಿದ್ದರೆ ಉಳಿದ ಆರು ಜನ ಕಾರಾಗೃಹದ ಸಿಬ್ಬಂದಿ.
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕೈದಿಗಳಿದ್ದಾರೆ. ಜೊತೆಗೆ ಇತ್ತೀಚೆಗೆ ಕಾರಾಗೃಹಕ್ಕೆ ಹೊಸದಾಗಿ 450 ಕೈದಿಗಳನ್ನು ದಾಖಲಿಸಲಾಗಿತ್ತು. ಇದೀಗ ಆ 450 ಜನರ ಪೈಕಿ ಕೆಲವರು ಜೈಲಿಗೆ ಬಂದು 21 ದಿನ ಕಳೆದಿದ್ದರಿಂದ 3 ದಿನಗಳ ಹಿಂದೆ ಸಿಬ್ಬಂದಿ ಸೇರಿ 150 ಜನರ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್ಗೆ ಕಳಿಸಲಾಗಿತ್ತು. ನಿನ್ನೆ ಬಂದ ವರದಿಯಲ್ಲಿ 20 ಕೈದಿಗಳು ಮತ್ತು 6 ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕಾರಾಗೃಹದಲ್ಲಿ ಶುರುವಾಯ್ತು ಆತಂಕ..! ಇದೀಗ ಕೊರೊನಾ ದೃಢವಾಗಿರುವ ಕೈದಿಗಳನ್ನ ಥಣಿಸಂದ್ರ ಬಳಿ ಇರುವ ಹಜ್ ಭವನದಲ್ಲಿ ಇರಿಸಲಾಗಿದೆ. ಜೊತೆಗೆ ಕಾರಾಗೃಹದ ಇತರೆ ಕೈದಿ ಹಾಗೂ ಸಿಬ್ಬಂದಿ ಈ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದು ಎನ್ನಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರ ಕಾರಾಗೃಹದ ಸಿಬ್ಬಂದಿ ಮತ್ತು ಕೈದಿಗಳಲ್ಲಿ ಮನಸ್ಸಿನಲ್ಲಿ ಆತಂಕ ಮನೆಮಾಡಿದೆ.
Published On - 1:40 pm, Thu, 2 July 20