ಸರ್ಕಾರ ಮನೆ ಖಾಲಿ ಮಾಡಿಸಿತು! ಪ್ರಿಯಾಂಕಾ ವಾದ್ರಾ ಈಗ ಎಲ್ಲಿಗೆ ಹೋಗ್ತಾರೆ ಗೊತ್ತಾ?

ದೆಹಲಿ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ನೀಡಿದ್ದ ವಿಶಿಷ್ಟ SPG (ಸ್ಪೆಷಲ್ ಪ್ರೊಟೆಕ್ಷನ್​ ಗ್ರೂಪ್​) ಭದ್ರತೆಯನ್ನ ವಾಪಸ್​ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್​ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ತಾವು ವಾಸವಾಗಿದ್ದ ಸರ್ಕಾರಿ ಬಂಗಲೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡಲು ಅವರಿಗೆ ಸೂಚಿಸಿದೆ. ನಿಯಮಗಳ ಪ್ರಕಾರ SPG ಭದ್ರತೆಯನ್ನು ಹಿಂಪಡೆದಿರುವ ಕಾರಣ ಸರ್ಕಾರಿ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ ವಾಸ್ತವ್ಯ ಹೂಡುವಂತಿಲ್ಲ. ಹಾಗಾಗಿ, ಪ್ರಿಯಾಂಕಾಗೆ ತಮ್ಮ ನಿವಾಸವನ್ನು ಖಾಲಿ ಮಾಡಲು ಸೂಚಿಸಲಾಗಿದೆ […]

ಸರ್ಕಾರ ಮನೆ ಖಾಲಿ ಮಾಡಿಸಿತು! ಪ್ರಿಯಾಂಕಾ ವಾದ್ರಾ ಈಗ ಎಲ್ಲಿಗೆ ಹೋಗ್ತಾರೆ ಗೊತ್ತಾ?
ಪ್ರಿಯಾಂಕಾ ಗಾಂಧಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 02, 2020 | 2:19 PM

ದೆಹಲಿ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ನೀಡಿದ್ದ ವಿಶಿಷ್ಟ SPG (ಸ್ಪೆಷಲ್ ಪ್ರೊಟೆಕ್ಷನ್​ ಗ್ರೂಪ್​) ಭದ್ರತೆಯನ್ನ ವಾಪಸ್​ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್​ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ತಾವು ವಾಸವಾಗಿದ್ದ ಸರ್ಕಾರಿ ಬಂಗಲೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡಲು ಅವರಿಗೆ ಸೂಚಿಸಿದೆ.

ನಿಯಮಗಳ ಪ್ರಕಾರ SPG ಭದ್ರತೆಯನ್ನು ಹಿಂಪಡೆದಿರುವ ಕಾರಣ ಸರ್ಕಾರಿ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ ವಾಸ್ತವ್ಯ ಹೂಡುವಂತಿಲ್ಲ. ಹಾಗಾಗಿ, ಪ್ರಿಯಾಂಕಾಗೆ ತಮ್ಮ ನಿವಾಸವನ್ನು ಖಾಲಿ ಮಾಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಹಾಗಾದ್ರೆ ಪ್ರಿಯಾಂಕಾ ಎಲ್ಲಿ ವಾಸ್ತವ್ಯ ಹೂಡಲಿದ್ದಾರೆ..? ಮೂಲಗಳ ಪ್ರಕಾರ ಪ್ರಿಯಾಂಕಾ, ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ಶಿಫ್ಟ್ ಆಗಲಿದ್ದಾರೆ. ಅಲ್ಲಿ ದೊಡ್ಡ ಬಂಗಲೆಯೊಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಲಾಗ್ತಿದೆ. ಲಕ್ನೋದ ಗೋಖಲೆ ಮಾರ್ಗದಲ್ಲಿರುವ ಈ ನಿವಾಸ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ತಿರದ ಸಂಬಂಧಿಯಾಗಿದ್ದ ಮಾಜಿ ಕೇಂದ್ರ ಸಚಿವೆ ಶೀಲಾ ಕೌಲ್​ಗೆ ಸೇರಿದ್ದು. ಹೀಗಾಗಿ ಇದೇ ಬಂಗಲೆಯಲ್ಲಿ ವಾಸವಿರಲು ಪ್ರಿಯಾಂಕಾ ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.

ಜೊತೆಗೆ ಪಕ್ಷದ ಕಡೆಯಿಂದ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾಗೆ 2022ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತಷ್ಟು ನೆರವಾಗುತ್ತದೆ ಎಂಬ ಮಾಹಿತಿ ಇದೆ. ಆದರೆ, ಸದ್ಯಕ್ಕೆ ಅವರಿಗೆ Z+ ಕೆಟಗರಿ ಭದ್ರತೆ ನೀಡಿರುವ ಹಿನ್ನೆಲೆಯಲ್ಲಿ ಈ ನಿವಾಸವನ್ನ ಆಯ್ಕೆ ಮಾಡಲು SPG ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಭದ್ರತಾ ಸಂಸ್ಥೆಯಿಂದ ಅನುಮತಿ ಸಿಕ್ಕ ನಂತರ ಅವರು ಅಲ್ಲಿಗೆ ಶಿಫ್ಟ್​ ಆಗ್ತಾರೆ ಎಂದು ಹೇಳಲಾಗಿದೆ.

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್