ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರ ಪರದಾಟ; ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಒತ್ತಾಯ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ತಿಂಗಳಿಂದ ವೈದ್ಯರಿಲ್ಲದೆ ಗರ್ಭಿಣಿಯರು, ರೋಗಿಗಳು ಪರದಾಟ ಪಡುವಂತಾಗಿದೆ. ಇರುವ ನಾಲ್ವರು ನರ್ಸ್ಗಳು ವ್ಯಾಕ್ಸಿನ್, ಕೊವಿಡ್ ಟೆಸ್ಟ್ ಜೊತೆಗೆ ಗರ್ಬಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಚಿಕಿತ್ಸೆ ಜೊತೆಗೆ ಎಮರ್ಜೆನ್ಸಿ ಹೆರಿಗೆಗೆ ಬರುವವರಿಗೆ ಹೆರಿಗೆ ಮಾಡಿಸಲಾಗುತ್ತಿಲ್ಲ ಅಂತ ನರ್ಸ್ ಕಣ್ಣೀರು ಹಾಕಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರ ಪರದಾಟ; ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಒತ್ತಾಯ
ಗರ್ಭಿಣಿ ಮಹಿಳೆಯರು

Updated on: May 13, 2021 | 2:40 PM

ದೇವನಹಳ್ಳಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರು ಪರದಾಡುತ್ತಿದ್ದಾರೆ. ಪ್ರತಿನಿತ್ಯ ಹತ್ತಾರು ಹಳ್ಳಿಗಳಿಂದ ಆರೋಗ್ಯ ಕೇಂದ್ರದ ಬರುವ ರೋಗಿಗಳು ವೈದ್ಯರಿಲ್ಲದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾಲ್ಕು ದಾದಿಯರು ಸದ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಎಲ್ಲಾ ಕೆಲಸವನ್ನು ದಾದಿಯರು ನಿಭಾಯಿಸಲಾಗದೆ ನರಳಾಟ ಅನುಭವಿಸುತ್ತಿದ್ದಾರೆ.

ಬೆಟ್ಟಹಲಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ತಿಂಗಳಿಂದ ವೈದ್ಯರಿಲ್ಲದೆ ಗರ್ಭಿಣಿಯರು, ರೋಗಿಗಳು ಪರದಾಟ ಪಡುವಂತಾಗಿದೆ. ಇರುವ ನಾಲ್ವರು ನರ್ಸ್ಗಳು ವ್ಯಾಕ್ಸಿನ್, ಕೊವಿಡ್ ಟೆಸ್ಟ್ ಜೊತೆಗೆ ಗರ್ಬಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಚಿಕಿತ್ಸೆ ಜೊತೆಗೆ ಎಮರ್ಜೆನ್ಸಿ ಹೆರಿಗೆಗೆ ಬರುವವರಿಗೆ ಹೆರಿಗೆ ಮಾಡಿಸಲಾಗುತ್ತಿಲ್ಲ ಅಂತ ನರ್ಸ್ ಕಣ್ಣೀರು ಹಾಕಿದ್ದಾರೆ.

ಕಳೆದ ರಾತ್ರಿ ಪಾಸಿಟಿವ್ ಬಂದ ಗರ್ಭಿಣಿಗೆ ಹೆರಿಗೆ ಮಾಡಿಸಲು ಪರದಾಡಿದ್ದೇವೆ. ಆಸ್ಪತ್ರೆ ವೈದ್ಯ ಸಾವನ್ನಪ್ಪಿದ ನಂತರ ಯಾವೊಬ್ಬ ವೈದ್ಯರನ್ನು ನೇಮಕ ಮಾಡಿಲ್ಲ. ದಿನದ 24 ಗಂಟೆ ನಾವೆ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲು ಹಲವರಿಗೆ ಪಾಸಿಟಿವ್ ಬಂದಿದೆ ಅಂತ ನರ್ಸ್​ಗಳು ಅಸಮಾಧಾನ ಹೊರಹಾಕಿದ್ದರೆ, ಕೊರೊನಾ ಸಂಕಷ್ಟದ ನಡುವೆ ಗ್ರಾಮಸ್ಥರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡುವಂತೆ ಆಸ್ಪತ್ರೆ ಬಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ

ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

(Pregnant women without a doctor at the primary care center are suffering in devanahalli)