ಕೊವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ
Madhya Pradesh: ಈ ಕೊವಿಡ್ ಸಾಂಕ್ರಾಮಿಕ ರೋಗದಲ್ಲಿ ಪೋಷಕರು / ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ತಿಂಗಳಿಗೆ 5000 ರೂ. ಪಿಂಚಣಿ ನೀಡುತ್ತೇವೆ. ಈ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಸಹ ನಾವು ವ್ಯವಸ್ಥೆಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಭೋಪಾಲ್: ಮಧ್ಯಪ್ರದೇಶದಲ್ಲಿ ಪೋಷಕರು ಕೊವಿಡ್ 19 ನಿಂದ ಮೃತಪಟ್ಟರೆ ಆ ಕುಟುಂಬದ ಮಕ್ಕಳಿಗೆ ಪ್ರತಿ ತಿಂಗಳು ₹5,000 ಪಿಂಚಣಿ ನೀಡಲಾಗುವುದು. ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಘೋಷಿಸಿದ್ದಾರೆ.
ಈ ಕೊವಿಡ್ ಸಾಂಕ್ರಾಮಿಕ ರೋಗದಲ್ಲಿ ಪೋಷಕರು / ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ತಿಂಗಳಿಗೆ 5000 ರೂ. ಪಿಂಚಣಿ ನೀಡುತ್ತೇವೆ. ಈ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಸಹ ನಾವು ವ್ಯವಸ್ಥೆಗೊಳಿಸುತ್ತೇವೆ ಎಂದು ಅವರು ಹೇಳಿದರು.
कोरोना महामारी ने कई परिवारों को तोड़ कर रख दिया है, कुछ ने अपने बुढ़ापे की सहारे की लाठी खोई है, कुछ ने पालकों की छाया खोई है। इसलिए, हमने तय किया है कि ऐसे परिवारों को जिनके घर में आजीविकोपार्जन करने वाला कोई नहीं बचा उन्हे 5,000 रुपये प्रति माह पेंशन शासन द्वारा दी जाएगी: CM pic.twitter.com/MJZUjrMNSE
— CMO Madhya Pradesh (@CMMadhyaPradesh) May 13, 2021
ಕೆಲಸ ಮಾಡಲು ಬಯಸುವ ಜನರಿಗೆ ರಾಜ್ಯ ಸರ್ಕಾರವು ಸರ್ಕಾರದ ಖಾತರಿಯ ಮೇರೆಗೆ ಸಾಲವನ್ನು ನೀಡುತ್ತದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ ಎಂದು ಚೌಹಾಣ್ ಹೇಳಿದ್ದಾರೆ.
#COVID19 से अनेक परिवारों में कोई भी कमाने वाला और पालन-पोषण करने वाला सदस्य जीवित नहीं बचा है। ऐसे परिवारों के सामने जीवन यापन का संकट पैदा हो गया है। जीविकोपार्जन का सहारा छिन चुके ऐसे परिवारों को प्रदेश सरकार द्वारा ₹5,000 प्रतिमाह पेंशन दी जायेगी: CM श्री @ChouhanShivraj pic.twitter.com/u3SUbwUL8w
— CMO Madhya Pradesh (@CMMadhyaPradesh) May 13, 2021
ऐसे बच्चों की शिक्षा का निशुल्क प्रबंध किया जाएगा। इन परिवारों को पात्रता न होने पर भी राशन उपलब्ध करवाया जाएगा। ऐसे परिवारों के सदस्यों को सरकार की गारंटी पर बिना ब्याज के काम-धंधे के लिए ऋण उपलब्ध करवाया जाएगा। ऐसे बच्चों और परिवारों का सहारा हम हैं, हमारी सरकार है: CM
— CMO Madhya Pradesh (@CMMadhyaPradesh) May 13, 2021
ರಾಜ್ಯದಲ್ಲಿ ಬುಧವಾರ 8,970 ಹೊಸ ಪ್ರಕರಣಗಳು ಮತ್ತು 84 ಸಾವು ವರದಿಯಾಗಿದೆ. ಈವರೆಗೆ ಒಟ್ಟು 6,679 ಮಂದಿ ಮೃತಪಟ್ಟಿದ್ದಾರೆ. ಕೊವಿಡ್ -19 ಉಲ್ಬಣವನ್ನು ನಿಯಂತ್ರಿಸಲು ಸರ್ಕಾರವು ಮೇ 15 ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್ಡೌನ್ ವಿಸ್ತರಣೆ; ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
Published On - 2:13 pm, Thu, 13 May 21