Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaccine Shortage: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ, ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನಕ್ಕೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್‌ ಕಾರ್ಯಕ್ರಮದ ರೀತಿಯೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ 2 ದಿನಗಳಲ್ಲಿ ವ್ಯಾಕ್ಸಿನೇಷನ್‌ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.

Vaccine Shortage: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ, ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್​
Follow us
ಆಯೇಷಾ ಬಾನು
|

Updated on:May 13, 2021 | 12:14 PM

ಬೆಂಗಳೂರು: ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ 2ನೇ ಹಂತದ ವ್ಯಾಕ್ಸಿನ್ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 31 ಲಕ್ಷ ಜನರಿಗೆ ವ್ಯಾಕ್ಸಿನ್ ಯಾವಾಗ ಒದಗಿಸುತ್ತೀರಾ ಹೇಳಿ. ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೆ ಹೇಳಿ. ನಾವು ನಿಮ್ಮಿಂದ ಸಾಧ್ಯವಿಲ್ಲ ಎಂದೇ ಆದೇಶದಲ್ಲಿ ದಾಖಲಿಸ್ತೇವೆ ಎಂದು ಸರ್ಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿದೆ.

ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನಕ್ಕೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್‌ ಕಾರ್ಯಕ್ರಮದ ರೀತಿಯೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ 2 ದಿನಗಳಲ್ಲಿ ವ್ಯಾಕ್ಸಿನೇಷನ್‌ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರದಿಂದಲೂ ಮಾಹಿತಿ ಕೇಳಿದ ಹೈಕೋರ್ಟ್ 1ನೇ ಡೋಸ್ ತೆಗೆದುಕೊಂಡವರಿಗೆ 2 ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಗ್ಯಾಪ್ ಅನ್ನು ಹೇಗೆ ಸರಿಪಡಿಸುತ್ತೀರಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ 1 ನೇ ಡೋಸ್ ವ್ಯರ್ಥವಾಗಲ್ಲ. ಕೊವ್ಯಾಕ್ಸಿನ್ 2ನೇ ಡೋಸ್ಗೆ 6 ವಾರ ಕಾಲಾವಕಾಶವಿದೆ. ಕೊವಿಶೀಲ್ಡ್​ಗೆ  8 ವಾರ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ 2 ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್​ಗೆ ಬಳಸುವಂತೆ ಮಾರ್ಗಸೂಚಿ ನೀಡಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್​ಗೆ ಕೇಂದ್ರದ ASG ಐಶ್ವರ್ಯಾ ಭಾಟಿ ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ನಿಯಮ ಪಾಲಿಸದಿದ್ದರೆ ಜನರೇನು ಮಾಡಬೇಕು. 2ನೇ ವ್ಯಾಕ್ಸಿನ್ ಸಿಗದ ಜನರದ್ದೇನು ತಪ್ಪಿದೆ. ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಬಯಸುತ್ತೀರಾ ಎಂದು ಮತ್ತೆ ಕೇಂದ್ರ ಸರ್ಕಾರದ ಎಎಸ್​​ಜಿಗೆ ಹೈಕೋರ್ಟ್ ಪ್ರಶ್ನಿಸಿದೆ. ಎಲ್ಲರೂ ಇದೀಗ ಕಷ್ಟಕರ ಸ್ಥಿತಿ ಎದುರಿಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರವನ್ನು ದೂರಲು ಬಯಸುವುದಿಲ್ಲ. ನಾಳೆ ವ್ಯಾಕ್ಸಿನೇಷನ್‌ ಹಂಚಿಕೆ ನಿಗದಿಯಾಗಿದೆ. ಈ ವೇಳೆ ವ್ಯಾಕ್ಸಿನ್ ಕೊರತೆ ಬಗ್ಗೆಯೂ ಗಮನಹರಿಸಲಾಗುವುದು. ಕರ್ನಾಟಕ ವ್ಯಾಕ್ಸಿನೇಷನ್‌ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಿದ್ದಾರೆ.

ಇನ್ನು ಮುಂದುವರೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವ್ಯಾಕ್ಸಿನೇಷನ್‌ ಬಗ್ಗೆ ಮಾರ್ಗಸೂಚಿ ನೀಡಿತ್ತೇ ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ವರೆಗೆ ಮೂರು ಬಾರಿ ಮಾರ್ಗಸೂಚಿ ನೀಡಲಾಗಿದೆ. ಏಪ್ರಿಲ್ 16ರಂದೇ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಹೈಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ರಾಜ್ಯ ಸರ್ಕಾರ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೇಕೆ? ಕೇಂದ್ರದ ಸಲಹೆ ಪಾಲಿಸಿದ್ದರೆ 2ನೇ ಡೋಸ್ ಸಮಸ್ಯೆಯಾಗ್ತಿರಲಿಲ್ಲ. ಶೇ.70 ರಷ್ಟನ್ನು 2ನೇ ಡೋಸ್​ಗೆ ಏಕೆ ಮೀಸಲಿಡಲಿಲ್ಲ. ಇದು ರಾಜ್ಯ ಸರ್ಕಾರದ ಗಂಭೀರ ಉಲ್ಲಂಘನೆಯಾಗಿದೆ. ಮೂರು ಪತ್ರಗಳನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದು ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ‘ಕೊರೊನಾ 3 ನೇ ಅಲೆ ಎದುರಿಸಲು ಸಿದ್ಧತೆ ನಡೆಸಿ’ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಖಡಕ್‌ ವಾರ್ನಿಂಗ್

Published On - 12:01 pm, Thu, 13 May 21