ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

Maharashtra Extends Lockdown: ದೀಗ ವಿಸ್ತರಣೆ ಆಗಿರುವ ಲಾಕ್ ಡೌನ್ ಜೂನ್ 1 ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಲಿದೆ. ಯಾವುದೇ ಸಾರಿಗೆ ವಿಧಾನದ ಮೂಲಕ ರಾಜ್ಯಕ್ಕೆ ಪ್ರವೇಶಿಸಲು ಆರ್‌ಟಿ-ಪಿಸಿಆರ್ ನೆಗಟಿವ್ ವರದಿ ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಮಹಾರಾಷ್ಟ್ರದಲ್ಲಿ ಲಾಕ್ಡೌ​ನ್
Follow us
ರಶ್ಮಿ ಕಲ್ಲಕಟ್ಟ
|

Updated on:May 13, 2021 | 1:39 PM

ಮುಂಬೈ: ಕೊವಿಡ್ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ಜೂನ್ 1ರವರಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಬ್ರೇಕ್ ದಿ ಚೈನ್ ಅಭಿಯಾನಕ್ಕೆ ಕರೆ ನೀಡಿ ಈ ಹಿಂದೆ ಘೋಷಿಸಿದ್ದ ಲಾಕ್​ಡೌನ್ ಮೇ 15ರಂದು ಮುಗಿಯಲಿದೆ. ಇದೀಗ ವಿಸ್ತರಣೆ ಆಗಿರುವ ಲಾಕ್​ಡೌನ್ ಜೂನ್ 1 ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಲಿದೆ. ಯಾವುದೇ ಸಾರಿಗೆ ವಿಧಾನದ ಮೂಲಕ ರಾಜ್ಯಕ್ಕೆ ಪ್ರವೇಶಿಸಲು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಹೊಸ ಕೊವಿಡ್ -19 ಸೋಂಕು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಬುಧವಾರ 30,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳ ಕುಸಿತ ಕಂಡು ಬಂದಿದೆ. ರಾಜ್ಯದ ಪ್ರತಿ ದಿನದ ಬೆಳವಣಿಗೆಯ ದರ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಅರ್ಧದಷ್ಟು ಇದ್ದು, ಅದು ಶೇಕಡಾ 0.8 ರಷ್ಟಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಕೋವಿಡ್ -19 ಬೆಳವಣಿಗೆಯ ದರವು ದೇಶದ ದೈನಂದಿನ ಬೆಳವಣಿಗೆಯ ದರದಲ್ಲಿ ಕೇವಲ ಅರ್ಧದಷ್ಟಿದೆ. ದೇಶದ ದಿನನಿತ್ಯದ ಬೆಳವಣಿಗೆಯ ದರವು ಶೇಕಡಾ 1.4 ರಷ್ಟಿದ್ದರೆ, ರಾಜ್ಯದ ದೈನಂದಿನ ಬೆಳವಣಿಗೆಯ ದರವು ಶೇಕಡಾ 0.8 ರಷ್ಟಿದೆ. ರಾಜ್ಯವು ಪ್ರತಿದಿನ ಎರಡು ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದೆ ಇದು ನಮಗೆ ಉತ್ತಮ ಸಂಕೇತವಾಗಿದೆ ಎಂದು ಟೋಪೆ ಮಾತು ಉಲ್ಲೇಖಿಸಿ ಪಿಟಿಐ ವರದಿಮಾಡಿದೆ.

ರಾಜ್ಯದಲ್ಲಿ ಕೊವಿಡ್ -19 ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ‘ಬ್ರೇಕ್ ದಿ ಚೈನ್’ ಅಭಿಯಾನದ ಯಶಸ್ಸಿನ ಕುರಿತು ಮಾತನಾಡಿದ ಟೊಪೆ, ಈ ಉಪಕ್ರಮದ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಖಂಡಿತವಾಗಿಯೂ ಕೊವಿಡ್ -19 ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ. ಸುಮಾರು 12-45 ಜಿಲ್ಲೆಗಳಲ್ಲಿ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಪ್ರವೃತ್ತಿ ಕಾಣುತ್ತಿದೆ ಎಂದಿದ್ದಾರೆ.

ಆದಾಗ್ಯೂ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯು ಕಳವಳಕ್ಕೆ ಕಾರಣವಾಗಿದೆ ಎಂದು ಟೋಪೆ ಹೇಳಿದರು. ರಾಜ್ಯದ ಈ ಭಾಗಗಳಲ್ಲಿನ ಪಾಸಿಟಿವಿಟಿ ಪ್ರಮಾಣವು ಕುಸಿದಿಲ್ಲ ಮತ್ತು ಇನ್ನೂ ಶೇಕಡಾ 10 ಕ್ಕಿಂತಲೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 46,781 ಜನರು ಸೋಂಕಿಗೊಳಗಾಗಿದ್ದು 816 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ. ರಾಜ್ಯದ ಕೊವಿಡ್ -19 ಪ್ರಕರಣಗಳ ಸಂಖ್ಯೆ 5,226,710 ಕ್ಕೆ ತಲುಪಿದೆ. ಬುಧವಾರ ಹೊಸ ಪ್ರಕರಣಗಳನ್ನು ಸೇರಿಸಿದ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 546,000 ಕ್ಕಿಂತ ಹೆಚ್ಚಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 78,007 ತಲುಪಿದೆ ಎಂದು ರಾಜ್ಯದ ಆರೋಗ್ಯ ಬುಲೆಟಿನ್ ನಲ್ಲಿ ಹೇಳಿದೆ.

ಇದನ್ನೂ ಓದಿ: ನಮಗೆ ಕೊವಿನ್ ಆ್ಯಪ್​ ಬೇಡ.. ಪ್ರತ್ಯೇಕ ಆ್ಯಪ್​ ಬಳಕೆಗೆ ಅನುಮತಿ ನೀಡಿ’-ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ

Published On - 1:38 pm, Thu, 13 May 21