Unnao: ಉತ್ತರ ಪ್ರದೇಶದ ಉನ್ನಾವ್​ನ ಗಂಗಾ ನದಿ ತೀರದಲ್ಲಿ ಹೂತಿಟ್ಟ ಮೃತದೇಹಗಳು ಪತ್ತೆ

Uttar Pradesh: ಉನ್ನಾವ್ ಸೇರಿದಂತೆ ಮೂರು ಜಿಲ್ಲೆಗಳಿಗೆ ಕನಿಷ್ಠ ಒಂದು ಸ್ಥಳದಲ್ಲಿ ಮಾತ್ರ ಸ್ಮಶಾನವಿದೆ. ಈ ಶವಗಳು ಕೊವಿಡ್ ರೋಗಿಗಳದ್ದೆಂದು ಯಾವುದೇ ದೃಢಪಟ್ಟಿಲ್ಲ ಎಂದು ಉನ್ನಾವ್​ನ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.

Unnao: ಉತ್ತರ ಪ್ರದೇಶದ ಉನ್ನಾವ್​ನ ಗಂಗಾ ನದಿ ತೀರದಲ್ಲಿ ಹೂತಿಟ್ಟ ಮೃತದೇಹಗಳು ಪತ್ತೆ
ಉನ್ನಾವ್​ನಲ್ಲಿ ಹೂತಿಟ್ಟ ಮೃತದೇಹ
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:May 13, 2021 | 11:56 AM

ಲಕ್ನೊ: ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಹರಿಯುವ ಗಂಗಾ ನದಿಯಲ್ಲಿ ಕೊವಿಡ್ ರೋಗಿಗಳ ಮೃತದೇಹಗಳು ಎಂದು ಶಂಕಿಸಲಾಗುವ ಸುಮಾರು ನೂರರಷ್ಟು ಮೃತದೇಹಗಳು ತೇಲಿ ಬಂದಿತ್ತು. ಇದೀಗ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಗಂಗಾ ನದಿ ತಟದಲ್ಲಿ ಮೃತದೇಹಗಳು ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉನ್ನಾವ್​ನ ಎರಡು ಪ್ರದೇಶಗಳಲ್ಲಿ ಈ ರೀತಿ ಮೃತದೇಹಗಳು ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೊಬೈಲ್ ಫೋನ್​ನಲ್ಲಿ ಚಿತ್ರಿತವಾಗಿರುವ ವಿಡಿಯೊ ದೃಶ್ಯಗಳನ್ನು ನೋಡಿದರೆ ಹಲವಾರು ಮೃತದೇಹಗಳು ಕಾವಿಬಟ್ಟೆಯಲ್ಲಿ ಸುತ್ತಿಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಉನ್ನಾವ್ ಸೇರಿದಂತೆ ಮೂರು ಜಿಲ್ಲೆಗಳಿಗೆ ಕನಿಷ್ಠ ಒಂದು ಸ್ಥಳದಲ್ಲಿ ಮಾತ್ರ ಸ್ಮಶಾನವಿದೆ. ಈ ಶವಗಳು ಕೊವಿಡ್ ರೋಗಿಗಳದ್ದೆಂದು ಯಾವುದೇ ದೃಢಪಟ್ಟಿಲ್ಲ ಎಂದು ಉನ್ನಾವ್​ನ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.

ಕೆಲವರು ಶವಗಳನ್ನು ಸುಡುವುದಿಲ್ಲ ಆದರೆ ನದಿಯಲ್ಲಿ ಮರಳಿನಲ್ಲಿ ಹೂತುಹಾಕುತ್ತಾರೆ. ನನಗೆ ಮಾಹಿತಿ ದೊರೆತ ನಂತರ ನಾನು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದೆ. ವಿಚಾರಣೆ ನಡೆಸಲು ನಾನು ಅವರಿಗೆ ಹೇಳಿದ್ದೇನೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿದ್ದಾರೆ.

ಈ ದೇಹಗಳು ಸುತ್ತಮುತ್ತಲಿನ ಕೊವಿಡ್ ರೋಗಿಗಳದ್ದೇ ಎಂದು ಕೇಳಿದಾಗ, ಇದುವರೆಗಿನ ಮಾಹಿತಿಯ ಪ್ರಕಾರ ಈ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ ಎಂದು ಅಧಿಕಾರಿ ಹೇಳಿದರು. ಇಂದು ಬೆಳಿಗ್ಗೆ ಅಧಿಕಾರಿಗಳ ತಂಡವು ಸ್ಥಳವನ್ನು ತಲುಪಿ ಹೆಚ್ಚು ಆಳವಾದ ಹೊಂಡಗಳನ್ನು ಅಗೆದು ಶವಗಳನ್ನು ಮತ್ತೆ ಅದೇ ಸ್ಥಳದಲ್ಲಿ ಹೂತುಹಾಕಿತು.

ಉತ್ತರ ಪ್ರದೇಶದ ಗಾಜೀಪುರ್​ನಲ್ಲಿ ಹಲವಾರು ಮೃತದೇಹಗಳು ಮಂಗಳವಾರ ಗಂಗಾ ನದಿಯ ತೀರದಲ್ಲಿ ಕಾಣಿಸಿತ್ತು. ನಮಗೆ ಮಾಹಿತಿ ಸಿಕ್ಕಿದೆ. ನಮ್ಮ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ ಮತ್ತು ತನಿಖೆ ನಡೆಯುತ್ತಿದೆ. ಆ ಮೃತದೇಹಗಳು ಎಲ್ಲಿಂದ ಬಂತು ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಗಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಪಿ.ಸಿಂಗ್ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹಿಂದೂಗಳು ಗಂಗಾ ನದಿಯನ್ನು ಪವಿತ್ರವೆಂದು ಪೂಜಿಸುತ್ತಾರೆ ಆದರೆ ಮೃತದೇಹಗಳನ್ನು ಗಂಗಾ ನಂದಿಗೆ ಎಸೆಯುವುದು ಹಿಂದೂ ಧರ್ಮ ಸೇರಿದಂತೆ ಯಾವುದೇ ಧರ್ಮದ ಸಂಪ್ರದಾಯಗಳ ಭಾಗವಲ್ಲ.

ಮೃತದೇಹಗಳನ್ನು ಸುಡುವುದಕ್ಕೆ ಕಟ್ಟಿಗೆಯ ಕೊರತೆಯೂ ಈ ರೀತಿ ಮೃತದೇಹಗಳನ್ನು ನದಿಯಲ್ಲಿ ಬಿಸಾಡಲು ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.  ಅಧಿಕಾರಿಗಳು ಕೊನೆಯ ವಿಧಿಗಳಿಗೆ ಯಾವುದೇ ವ್ಯವಸ್ಥೆಗಳನ್ನು ಮಾಡುತ್ತಿಲ್ಲ. ದುರ್ವಾಸನೆಯು ಅವರನ್ನು ಕಾಡುತ್ತಲೇ ಇದೆ. ಇದು ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ರೀತಿಯ ಮೃತದೇಹಗಳನ್ನು ಕೊವಿಡ್ ಸಾವುಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕೆಲವರು ಹೇಳಿದ್ದು, ಇದು ಕೊವಿಡ್ ರೋಗಿಗಳ ಮೃತದೇಹ ಎಂಬುದು ಇಲ್ಲಿಯವರೆಗೆ ದೃಢಪಟ್ಟಿಲ್ಲ.

ಇದನ್ನೂ ಓದಿ: ಗಂಗಾ ನದಿಯಲ್ಲಿ ತೇಲಿ ಬಂತು 96 ಮೃತದೇಹ; ಬಿಹಾರ, ಉತ್ತರ ಪ್ರದೇಶದಲ್ಲಿ ಹೆಚ್ಚಿದ ಆತಂಕ

40 ಕೊರೊನಾ ಸೋಂಕಿತರ ಮೃತದೇಹಗಳು ಗಂಗಾ ನದಿಯಲ್ಲಿ ತೇಲುತ್ತಿರುವುದು ಕಾಣಿಸಿವೆ

Published On - 11:51 am, Thu, 13 May 21