ನಮಗೆ ಕೊವಿನ್ ಆ್ಯಪ್​ ಬೇಡ.. ಪ್ರತ್ಯೇಕ ಆ್ಯಪ್​ ಬಳಕೆಗೆ ಅನುಮತಿ ನೀಡಿ’-ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ

CoWIN ಆ್ಯಪ್​ನಲ್ಲಿ ದೋಷಗಳಿವೆ. ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ನಾವು ನಮ್ಮ ರಾಜ್ಯದಲ್ಲಿ ಬೇರೆ ಆ್ಯಪ್​​ನ್ನು ಜನರಿಗೆ ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಉದ್ಧವ್​ ಠಾಕ್ರೆ ಹೇಳಿದ್ದಾರೆ.

ನಮಗೆ ಕೊವಿನ್ ಆ್ಯಪ್​ ಬೇಡ.. ಪ್ರತ್ಯೇಕ ಆ್ಯಪ್​ ಬಳಕೆಗೆ ಅನುಮತಿ ನೀಡಿ’-ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
Follow us
Lakshmi Hegde
|

Updated on: May 08, 2021 | 2:19 PM

ಕೊರೊನಾ ಲಸಿಕೆ ಹಂಚಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ CoWIN ಆ್ಯಪ್​ ಪರಿಚಯಿಸಿದೆ. CoWIN ಮತ್ತು ಆರೋಗ್ಯ ಸೇತು ಆ್ಯಪ್​ನಲ್ಲಿ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬೇಕು ಎಂದು ಹೇಳಿದೆ. ಹಾಗೇ, ದೇಶದ ಜನರು ಇದೆರಡು ಆ್ಯಪ್​ಗಳ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು CoWIN ಆ್ಯಪ್​ ಮೂಲಕ ನೋಂದಣಿ ಮಾಡಲು ಮುಂದಾಗುತ್ತಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಮಗೆ ಲಸಿಕೆ ವಿತರಣೆಗೆ ಸಂಬಂಧಪಟ್ಟಂತೆ ಪ್ರತ್ಯೇಕ ಆ್ಯಪ್​ ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೇಂದ್ರಸರ್ಕಾರವನ್ನು ಕೇಳಿದ್ದಾರೆ.

CoWIN ಆ್ಯಪ್​ನಲ್ಲಿ ದೋಷಗಳಿವೆ. ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ನಾವು ನಮ್ಮ ರಾಜ್ಯದಲ್ಲಿ ಬೇರೆ ಆ್ಯಪ್​​ನ್ನು ಜನರಿಗೆ ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಉದ್ಧವ್​ ಠಾಕ್ರೆ ಹೇಳಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಮುಖ್ಯಮಂತ್ರಿಯ ದೂರಲ್ಲ. ಇದನ್ನು ಡೌನ್​ಲೋಡ್ ಮಾಡಿಕೊಂಡು ಲಸಿಕೆಗಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಮುಂದಾದ ಅನೇಕ ಬಳಕೆದಾರರು ಆ್ಯಪ್​​ನಲ್ಲಿ ಸಮಸ್ಯೆ ಇದೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ನಾವು ಹೆಸರು ರಿಜಿಸ್ಟರ್ ಮಾಡಿರುತ್ತೇವೆ. ಆದರೆ ನಮ್ಮ ಅಪಾಯಿಂಟ್​ಮೆಂಟ್ ಮಿಸ್ ಆಗಿರುತ್ತದೆ. ಆದಾಗ್ಯೂ ನೀವು ಲಸಿಕೆ ಪಡೆದಿದ್ದೀರಿ ಎಂದು ನೋಟಿಫಿಕೇಶನ್ ಬರುತ್ತದೆ ಎಂದು ಹಲವರು ಹೇಳಿದ್ದಾರೆ. ಹಲವು ದೂರುಗಳು ಬಂದ ಬಳಿಕ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ 4 ಡಿಜಿಟ್​ಗಳ ಒಂದು ಸೆಕ್ಯೂರಿಟಿ ಕೋಡ್​ನ ಫೀಚರ್​​ನ್ನು ಕೊವಿನ್​ ಪೋರ್ಟಲ್​​ನಲ್ಲಿ ಅಳವಡಿಸಿದೆ. ಹಾಗೇ ಈ ಸೆಕ್ಯೂರಿಟಿ ಕೋಡ್​ನಿಂದಾಗಿ ಆನ್​ಲೈನ್​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ, ಅಪಾಯಿಂಟ್​ಮೆಂಟ್ ಪಡೆಯುವ ವಿಧಾನಗಳಲ್ಲಿ ದೋಷ ಕಂಡುಬರುವ ಪ್ರಮಾಣ ತುಂಬ ಕಡಿಮೆ ಆಗಲಿದೆ ಎಂದೂ ಹೇಳಿಕೊಂಡಿದೆ.

ಸದ್ಯ ದೇಶದ ಎಲ್ಲ ಕಡೆಗಳಲ್ಲೂ ಅನ್ವಯ ಆಗುವಂತೆ ಕೇಂದ್ರ ಸರ್ಕಾರ ಒಂದೇ ಆ್ಯಪ್​ನ್ನು ಬಳಕೆಗೆ ನೀಡಿದ್ದು, ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ತಾವು ಪ್ರತ್ಯೇಕ ಆ್ಯಪ್ ಬಳಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿಹೆಚ್ಚಾಗಿದ್ದು, ದೇಶದಲ್ಲಿ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶೇ.71.81ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ.

ಇದನ್ನೂ ಓದಿ: ಅಮೇರಿಕಾದ ಹ್ಯಾರಿಸ್​ಬರ್ಗ್ ವಿಶ್ವವಿದ್ಯಾಲಯ ಜತೆ ಕರ್ನಾಟಕ ವಿಶ್ವವಿದ್ಯಾಲಯದ ಒಪ್ಪಂದ; ವರ್ಚುವಲ್ ಮೂಲಕ ಸಹಿ

‘ಇನ್ನು 3-4ತಿಂಗಳಲ್ಲಿ ಎಲ್ಲ ನಾಗರಿಕರಿಗೂ ಲಸಿಕೆ ಕೊಟ್ಟು ಮುಗಿಯಬೇಕು.. ’-ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ