Amit Shah Missing ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್; ಹುಡುಕಿಕೊಡಿ ಎಂದು ದೆಹಲಿ ಪೊಲೀಸರಿಗೆ ಎನ್ಎಸ್ಯುಐನಿಂದ ದೂರು
ಬಿಜೆಪಿ ಮತ್ತು ಆಡಳಿತ ಪಕ್ಷದ ನಾಯಕರಷ್ಟೇ ಕೆಲಸ ಮಾಡಬೇಕು ಎಂದೇನೂ ಇಲ್ಲ. ದೇಶಕ್ಕೆ ಒದಗಿದ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಕೈಲಾದ ಕೆಲಸ ಮಾಡಬೇಕು ಎಂದು ನಾಗೇಶ್ ಕರಿಯಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನವದೆಹಲಿ: ಅಮಿತ್ ಶಾ ಅವರು ಕಾಣೆಯಾಗಿದ್ದಾರೆ (Amit Shah Missing) ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಇಂದು ಬೆಳಗ್ಗೆಯಿಂದ ಈ ಹ್ಯಾಷ್ಟ್ಯಾಗ್ನಡಿ ಸುಮಾರು 5000 ಟ್ವೀಟ್ಗಳನ್ನು ಮಾಡಲಾಗಿದೆ. ಅಷ್ಟಕ್ಕೂ ಈ ಹ್ಯಾಷ್ಟ್ಯಾಗ್ನಡಿ ಮೊದಲು ಟ್ವೀಟ್ ಮಾಡಿದ್ದು, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI).
ಹೀಗೆ ಟ್ವಿಟರ್ನಲ್ಲಿ ಅಮಿತ್ ಶಾ ಕಾಣೆಯಾಗಿದ್ದಾರೆ ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುವುದಕ್ಕೂ ಮೊದಲು ಅಂದರೆ, ಬುಧವಾರ ಸಂಜೆ ಎನ್ಎಸ್ಯುಐದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ನಾಗೇಶ್ ಕರಿಯಪ್ಪ, ದೆಹಲಿಯ ಪಾರ್ಲಿಮೆಂಟ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಈ ಮಿಸ್ಸಿಂಗ್ ದೂರು ದಾಖಲು ಮಾಡಿದ್ದಾರೆ. ಇಡೀ ರಾಷ್ಟ್ರ ಕೊವಿಡ್ 19 ಬಿಕ್ಕಟ್ಟು ಎದುರಿಸುತ್ತಿರುವಾಗ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಿಯೂ ಕಾಣುತ್ತಿಲ್ಲ. ಅವರೇನು ಮಾಡುತ್ತಿದ್ದಾರೆ..ಎಲ್ಲಿದ್ದಾರೆ ಎಂಬುದೂ ಗೊತ್ತಾಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಹಾಗೇ, ರಾಜಕಾರಣಿಗಳು, ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಎಂದಿಗೂ ಎಂಥದ್ದೇ ಸಂದರ್ಭ ಬಂದರೂ ನುಣುಚಿಕೊಳ್ಳಬಾರದು ಎಂದೂ ಹೇಳಿದ್ದರು.
ಬಿಜೆಪಿ ಮತ್ತು ಆಡಳಿತ ಪಕ್ಷದ ನಾಯಕರಷ್ಟೇ ಕೆಲಸ ಮಾಡಬೇಕು ಎಂದೇನೂ ಇಲ್ಲ. ದೇಶಕ್ಕೆ ಒದಗಿದ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಕೈಲಾದ ಕೆಲಸ ಮಾಡಬೇಕು ಎಂದು ನಾಗೇಶ್ ಕರಿಯಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇನ್ನು ಅಮಿತ್ ಶಾ ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ನಮಗೆ ಕೇಂದ್ರ ಸರ್ಕಾರ ತತ್ಕ್ಷಣವೇ ತಿಳಿಸಬೇಕು ಎಂದು ಕೂಡ ಕರಿಯಪ್ಪ ಒತ್ತಾಯಿಸಿದ್ದಾರೆ.
2013ರವರೆಗೆ ರಾಜಕಾರಣಿಗಳು, ಕೇಂದ್ರ ಸರ್ಕಾರ ಎಲ್ಲವೂ ಜನರ ಪರವಾಗಿಯೇ ಇದ್ದರು. ಆದರೆ 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಡೀ ರಾಜಕೀಯ ಚಿತ್ರಣ ಬದಲಾಗಿದೆ ಎಂದು ಎನ್ಎಸ್ಯುಐದ ಸಂವಹನ ವಿಭಾಗ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಲೋಕೇಶ್ ಚಗ್ ಆರೋಪಿಸಿದ್ದಾರೆ.
Name : Amit shah Designation : Home Minster of India Last seen : During Bengal election campaigns. Missing Complaint registered with @DelhiPolice #AmitShahMissing pic.twitter.com/nX7mKP3nLB
— Nagesh Kariyappa (@Nagesh_nsui6) May 12, 2021
Missing! Missing! Missing!#AmitShahMissing pic.twitter.com/AJvBXqH6jQ
— अनुशेष_शर्मा (@anushesh_sharma) May 12, 2021
Election is over Corona is at its peak Meanwhile HM : Ab underground hone ka wakt aa gaya hai.#AmitShahMissing
— Shrikant Pawar (@P_shri14) May 12, 2021
After Trending #AmitShahMissing
Amit Shah To Bharat wasi : pic.twitter.com/uBWAFLdpUl
— MoHaMMaD JuNaiD (@mohd_junaid00) May 12, 2021
Amit shah pic.twitter.com/TsbX81oGZ7
— अज्ञानी Engineer (@aagyaniengineer) May 12, 2021
ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾರಿಗೆ ಸೌಲಭ್ಯ, ಸಮುದಾಯ ಭೋಜನ ಶಾಲೆ ಒದಗಿಸಲು ಸುಪ್ರೀಂ ಸೂಚನೆ
ICC Test Rankings: ನಂಬರ್ 1 ಪಟ್ಟ ಉಳಿಸಿಕೊಂಡ ಟೀಂ ಇಂಡಿಯಾ! ವೆಸ್ಟ್ ಇಂಡೀಸ್ ಗಮನಾರ್ಹ ಸಾಧನೆ
Published On - 3:34 pm, Thu, 13 May 21