ಕೊರೊನಾ ನಂತರ ಮೊದಲ ಬಾರಿ ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಮದುವೆಗೆ ಸಿದ್ಧತೆ

|

Updated on: Mar 12, 2021 | 12:55 PM

ಕೊರೊನಾ ನಂತರ ಮೊದಲ ಬಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೊರೊನಾ ನಂತರ ಮೊದಲ ಬಾರಿ ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಮದುವೆಗೆ ಸಿದ್ಧತೆ
ಮೈಸೂರು ಚಾಮುಂಡಿ ಬೆಟ್ಟ (ಸಂಗ್ರಹ ಚಿತ್ರ)
Follow us on

ಮೈಸೂರು: ಕೊರೊನಾ ನಂತರ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರದಂದು ನಡೆಯಲಿರುವ ಸಾಮೂಹಿಕ ಮದುವೆಗೆ ಬೃಹತ್ ವೇದಿಕೆ ಸಜ್ಜುಗೊಳ್ಳುತ್ತಿದೆ. ಬೆಟ್ಟದ ಆವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷವೂ ಚಾಮುಂಡಿ ಬೆಟ್ಟದದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಅಂತೆಯೇ ಈ ವರ್ಷವೂ ಕಾರ್ಯಕ್ರಮ ನಡೆಯಲಿದೆ. ಸದ್ಯ ಇಲ್ಲಿಯವರೆಗೆ 11 ಜೋಡಿ ಅರ್ಜಿ ಸಲ್ಲಿಸಿದ್ದಾರೆ. ನಂಜನಗೂಡಿನ ದೇವಸ್ಥಾನದ ಕಡೆಯಿಂದ 5 ಜೋಡಿ ನೋಂದಣಿ ಮಾಡಿಸಿದ್ದಾರೆ.

ಈವರೆಗೆ ಕೇವಲ 5 ಮಂದಿ ಮಾತ್ರ ನೋಂದಣಿ ಮಾಡಿಕೊಂಡಿರುವ ಹಿನ್ನೆಲೆ ಚಾಮುಂಡಿ ಬೆಟ್ಟದ 11 ಜೋಡಿ ಜೊತೆಗೆ ನಂಜನಗೂಡಿನಲ್ಲಿ ನೋಂದಣಿಯಾಗಿರುವ 5 ಜೋಡಿಗಳಿಗೂ ಸೇರಿ ಒಟ್ಟು 16ಮಂದಿಗೆ ಸಾಮೂಹಿಕ ಮದುವೆ ನಡೆಯಲಿದೆ. ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಶಾಸಕ ಎಸ್​.ಟಿ. ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗುವ ಸಾಧ್ಯತೆ ಇದೆ.

mysuru hill mass wedding

ಸಾಮೂಹಿಕ ಮದುವೆಗೆ ಸಕಲ ಸಿದ್ಧತೆ

ಸಾಮೂಹಿಕ ಮದುವೆಗೆ ಸಜ್ಜಾಗುತ್ತಿರುವ ವೇದಿಕೆ

ಇದನ್ನೂ ಓದಿ: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ.. ಸಾಮೂಹಿಕ ವಿವಾಹದ ದಿನಾಂಕ ಪ್ರಕಟ

ಇದನ್ನೂ ಓದಿ: ಕೊರೊನಾದಿಂದ ಮುಂದೂಡಲಾಗಿದ್ದ ಸಪ್ತಪದಿ ವಿವಾಹ ಯೋಜನೆಗೆ ಮರುಚಾಲನೆ