ಮಡಿಕೇರಿ: ನಗರದಲ್ಲಿ ಇದೇ ಶನಿವಾರದಂದು ಯಾರೂ ಮನೆಗಳಿಂದ ಹೊರಗೆ ಬರುವಂತಿಲ್ಲ. ಅಂಗಡಿ ಬಾಗಿಲು ತೆರೆಯುವಂತಿಲ್ಲ, ರಸ್ತೆಗಳ ಮೇಲೆ ಜನ ಓಡಾಡುವಂತಿಲ್ಲ. ಪ್ರಾಣಿಗಳು ಕಾಣಿಸಿಕೊಳ್ಳುವಂತಿಲ್ಲ. ಕಟ್ಟುನಿಟ್ಟಿನ ನಿಗಾ ಇಟ್ಟಿರಬೇಕು ಎಂದು ನಗರಸಭೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಹೌದು, ಫೆಬ್ರವರಿ 6ರಂದು ಕೊಡಗು ಜಿಲ್ಲೆ ಮಡಿಕೇರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕಟ್ಟಾಜ್ಞೆ ಜಾರಿಯಾಗಿದೆ. ರಾಷ್ಟ್ರಪತಿ ಕೋವಿಂದ್ ಭೇಟಿ ನಿಮಿತ್ತ ಅಂದು ನಗರದಲ್ಲಿ ಯಾವುದೇ ಅಂಗಡಿ ಬಾಗಿಲು ತೆರೆಯುವಂತಿಲ್ಲ. ಮನೆಯಿಂದಲೂ ಯಾರೂ ಹೊರಗೆ ಬರುವಂತಿಲ್ಲ. ಬೀದಿಯಲ್ಲಿ ಜನ ಓಡಾಡುವಂತಿಲ್ಲ. ಈ ಬಗ್ಗೆ ನಿಗಾ ಇಡಲು ನಗರಸಭೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇದೇ ವೇಳೆ, ರಾಷ್ಟ್ರಪತಿ ಸಂಚರಿಸುವ ನಾಲ್ಕು ಮಾರ್ಗಗಳನ್ನು ಕೊಡಗು ಜಿಲ್ಲಾಡಳಿತ ಗುರುತಿಸಿದೆ. ರಾಷ್ಟ್ರಪತಿ ಸಂಚರಿಸುವ ಮಾರ್ಗದಲ್ಲಿ ಸ್ಟ್ರಿಕ್ಟ್ ರೂಲ್ಸ್ ಅನುಸರಿಸಬೇಕು. ರಸ್ತೆಬದಿಯ ಮನೆ, ಅಂಗಡಿ, ಮಳಿಗೆಗಳಿಗೆ ಖಡಕ್ ಸೂಚನೆ ನೀಡಿರಬೇಕು ಎಂದು ಆದೇಶ ಹೊರಡಿಸಿದೆ. ಮಡಿಕೇರಿಗೆ ರಾಷ್ಟ್ರಪತಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ಭರದಿಂದ ನಡೆಯುತ್ತಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಾರ್ಯಕ್ರಮ ವಿವರ President of india ram nath kovind visit to madikeri:
ಅಂದಹಾಗೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ (General Thimayya War Memorial Museum Coorg) ಉದ್ಘಾಟನೆಗಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಫೆ. 6ರಂದು ಬೆಳಗ್ಗೆ 11 ಗಂಟೆಗೆ ತಲಕಾವೇರಿಗೆ ಭೇಟಿ ನೀಡಲಿದ್ದಾರೆ.
12 ಗಂಟೆಗೆ ಮಡಿಕೇರಿಯ ಹೆಲಿಪ್ಯಾಡ್‌ಗೆ ಆಗಮನವಾಗಲಿದೆ. ಬಳಿಕ ಸರ್ಕಾರಿ ಅತಿಥಿ ಗೃಹದಲ್ಲಿ ರಾಷ್ಟ್ರಪತಿ ವಿಶ್ರಾಂತಿ ಪಡೆಯಲಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಮಧ್ಯಾಹ್ನ 3 ಗಂಟೆಗೆ ಸನ್ನಿ ಸೈಡ್ ಉದ್ಘಾಟಿಸಲಿದ್ದಾರೆ. 35 ನಿಮಿಷ ಕಾಲ ಸನ್ನಿ ಸೈಡ್ ವೀಕ್ಷಿಸಲಿದ್ದಾರೆ.
ಜಿಲ್ಲಾಡಳಿತ ಕ್ರಮಕ್ಕೆ ತೀವ್ರ ಆಕ್ರೋಶ
ಆದರೆ ಜಿಲ್ಲಾಡಳಿತದ ಈ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.