ಬೆಂಗಳೂರು: ಅಂಬರೀಶ್ ಅಭಿಮಾನಿಗಳು ನೊಂದುಕೊಳ್ಳುವುದು ಸಹಜ ಎಂದು ರಾಜಭವನದಲ್ಲಿ ಹೇಳಿಕೆ ನೀಡಿದ ಮಂಡ್ಯ ಸಂಸದೆ ಸುಮಲತಾ, ನಾವು ಅಡ್ಡದಾರಿಯಲ್ಲಿ ಹೋಗುವುದು ಬೇಡ. ನಮ್ಮ ನೋವನ್ನು ಶಾಂತಿಯುತವಾಗಿ ಹೇಳೋಣ. ನಾನು ಅವರ ವಿರುದ್ಧ ಹೋರಾಟ ಮಾಡಿಲ್ಲ. ನನ್ನ ಹೋರಾಟ ಅಕ್ರಮ ಗಣಿಗಾರಿಕೆ ವಿರುದ್ಧ ಅಷ್ಟೆ. ನಾನು ಯಾರನ್ನೂ ಟಾರ್ಗೆಟ್ ಮಾಡಿ ಪಾಲಿಟಿಕ್ಸ್ ಮಾಡಿಲ್ಲ. ಈಗಾಗಲೇ 2 ಬಾರಿ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ್ದೇನೆ. ಇನ್ನುಮುಂದೆ ಮತ್ತಷ್ಟು ಹೆಚ್ಚಾಗಿ ವಿಚಾರ ಪ್ರಸ್ತಾಪಿಸುತ್ತೇನೆಂದು ಹೇಳಿದರು.
ಮೂರ್ನಾಲ್ಕು ದಿನಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಭೇಟಿಗೆ ಅವಕಾಶ ನೀಡಲಿದ್ದಾರೆ. ದಾಖಲೆ ಕೊಡಬೇಕಾಗಿರುವುದು ನಾನಲ್ಲ, ಅಧಿಕಾರಿಗಳು. ಕಠಿಣ ಕ್ರಮಕೈಗೊಳ್ಳಲು ನಾನು ಮನವಿ ಮಾಡುತ್ತೇನೆ ಅಷ್ಟೆ ಎಂದು ಮಾತನಾಡಿದ ಸಂಸದೆ, ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ ಎಂಬುದು ಗೊತ್ತಿದೆ. ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಇರುವಾಗ ಮಂಡ್ಯದಲ್ಲಿ ಇರಲ್ಲ ಎಂದು ಟ್ರೋಲ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ನನ್ನ ಟ್ರೋಲ್ ಮಾಡಿದ್ರೆ ಜನ ನಂಬಲ್ಲ. ಜನರಿಗೂ ಗೊತ್ತಿದೆ. ಸಂಸತ್ ನಡೆಯುವುದರಿಂದ ನಾನು ಅಲ್ಲಿ ಇರುತ್ತೀನಿ. ಜನರಿಗೂ ಇದು ಗೊತ್ತಾಗುತ್ತೆ ಅಂತಾ ಹೇಳಿದರು. ಕುಮಾರಸ್ವಾಮಿ ಕದನ ವಿರಾಮ ಬಗ್ಗೆ ನನ್ನ ಗಮನ ಇಲ್ಲ. ನನ್ನ ಗಮನ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು. ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ನಡೆಯುತ್ತಿರುವ ವಿಚಾರದ ಬಗ್ಗೆ ಬೆಳಗ್ಗೆ ಟ್ವೀಟ್ ಮಾಡಿದ್ದೇನೆ. ಈಗ ನಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಸಾರ್ವಜನಿಕ ವಲಯದಲ್ಲಿ ಇದ್ದಾಗ ಯಾವ ರೀತಿ ಇರಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಮಾರ್ಗದರ್ಶನದಲ್ಲಿ ನಾವು ಹೋಗಬೇಕು. 3 ವಾರಗಳ ಹಿಂದೆ ಕೆಆರ್ಎಸ್ ಡ್ಯಾಮ್ ಉಳಿಸಬೇಕು. ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ನಿರಂತರವಾಗಿ ನಮ್ಮ ಹೋರಾಟ ಇರುತ್ತದೆ. ಯಾರು ಪ್ರತಿಭಟನೆಯನ್ನು ಮುಂದುವರಿಸಬಾರದು ಎಂದು ಅಂಬರೀಶ್ ಅಭಿಮಾನಿಗಳಲ್ಲಿ ಸುಮಲತಾ ಮನವಿ ಮಾಡಿದರು.
ಇದನ್ನೂ ಓದಿ
ಸುಮಲತಾ, ಕುಮಾರಸ್ವಾಮಿ ವಾಕ್ ಸಮರ; ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ
ನಾವು ಬೇರೆಯವರಿಗೆ ಕೆಸರನ್ನು ಹಚ್ಚಲು ಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ: ಮಂಡ್ಯ ಸಂಸದೆ ಸುಮಲತಾ ಟ್ವೀಟ್
Preventing illegal mining is difficult but we will continue our fight said Sumalatha Ambareesh
Published On - 12:14 pm, Sun, 11 July 21