ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ರಸ್ತೆ ಅಪಘಾತ; ಬೆಳಗಾವಿ ಮೂಲದ ಯೋಧ ಹುತಾತ್ಮ
ನಾಳೆ ಬೆಳಗ್ಗೆ ಗೋವಾ ಮಾರ್ಗವಾಗಿ ಗೋಕಾಕ್‌ಗೆ ಮಂಜುನಾಥ ಅವರ ಪಾರ್ಥಿವ ಶರೀರ ಆಗಮಿಸಲಿದೆ. ನಾಳೆ ಸಂಜೆ (ಜುಲೈ 12) 6ಗಂಟೆಗೆ ಹುಟ್ಟೂರಲ್ಲಿ ಯೋಧ ಮಂಜುನಾಥ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧಾರಿಸಿದ್ದಾರೆ.
ಬೆಳಗಾವಿ: ನಾಗಲ್ಯಾಂಡ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡನ್ನವರ(38) ಮೃತ ದುರ್ದೈವಿ. 18 ವರ್ಷದಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮಂಜುನಾಥ ಅವರು ಕರ್ತವ್ಯದಲ್ಲಿದ್ದ ವೇಳೆ ಗಸ್ತು ತಿರುಗುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ.
ಮದ್ರಾಸ್ ಇಂಜನಿಯರಿಂಗ್ ಗ್ರೂಪ್ನಲ್ಲಿ ಯೋಧನಾಗಿ ನೇಮಕಗೊಂಡಿದ್ದ ಮಂಜುನಾಥ ಅವರು, ನಾಗಲ್ಯಾಂಡ್ ಗಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ನಾಳೆ ಬೆಳಗ್ಗೆ ಗೋವಾ ಮಾರ್ಗವಾಗಿ ಗೋಕಾಕ್‌ಗೆ ಮಂಜುನಾಥ ಅವರ ಪಾರ್ಥಿವ ಶರೀರ ಆಗಮಿಸಲಿದೆ. ನಾಳೆ ಸಂಜೆ (ಜುಲೈ 12) 6ಗಂಟೆಗೆ ಹುಟ್ಟೂರಲ್ಲಿ ಯೋಧ ಮಂಜುನಾಥ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧಾರಿಸಿದ್ದಾರೆ.
ಬೀದರ್ನ ಬಿಎಸ್ಎಫ್ ಯೋಧ ಹುತಾತ್ಮ ಉಗ್ರರ ದಾಳಿಯಲ್ಲಿ ಬೀದರ್ ಜಿಲ್ಲೆಯ ಯೋಧ ಹುತಾತ್ಮರಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಆಲೂರು ಗ್ರಾಮದ BSF ಯೋಧ ಬಸವರಾಜ್(28) ಹುತಾತ್ಮರಾದವರು. ಪಂಜಾಬ್ ಗಡಿಯಲ್ಲಿ ಜುಲೈ 6 ರ ಸಂಜೆ ಉಗ್ರರ ಜೊತೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಮತ್ತು ಬಿಎಸ್ಎಫ್ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ. ಈ ಬಗ್ಗೆ ಯೋಧನ ಪತ್ನಿ ಮಂಜುಳಾಗೆ ಬಿಎಸ್ಎಫ್ನಿಂದ ಮಾಹಿತಿ ಸಿಕ್ಕಿದೆ.
ಕಳೆದ ಎಂಟು ವರ್ಷದ ಹಿಂದೆಯಷ್ಟೇ ಬಿಎಸ್ಎಫ್ ಸೇರಿದ್ದ ಬಸವರಾಜ್, ಐದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಬಾಳಿ ಬದುಕಬೇಕಿದ್ದ ಯೋಧ ವೀರ ಮರಣ ಹೊಂದಿದ್ದಾರೆ. ಪಂಜಾಬ್ನಿಂದ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಬಂದಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆದಿದೆ. ಆದರೆ ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಉಗ್ರರ ಜೊತೆ ಗುಂಡಿನ ಚಕಮಕಿ; ಬೀದರ್ನ ಬಿಎಸ್ಎಫ್ ಯೋಧ ಹುತಾತ್ಮ
ಫಿಲಿಪೈನ್ಸ್ ಸೇನಾ ವಿಮಾನ ಅಪಘಾತ; 17 ಯೋಧರ ಮರಣ, 40 ಮಂದಿಯ ರಕ್ಷಣೆ-ಸಾವಿನ ಸಂಖ್ಯೆ ಏರುವ ಸಾಧ್ಯತೆ
Published On - 11:59 am, Sun, 11 July 21