Narendra Modi: ಪ್ರಧಾನಿ ನರೇಂದ್ರ ಮೋದಿ ಕಟೌಟ್​ಗೆ ಚಪ್ಪಲಿ ಏಟು ಹಾಕಿ ವಿಡಿಯೋ ವೈರಲ್ ಮಾಡಿದ ಹಾಸನದ ಯುವಕ

| Updated By: Digi Tech Desk

Updated on: May 21, 2021 | 11:35 PM

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಬಾಣಾವರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Narendra Modi: ಪ್ರಧಾನಿ ನರೇಂದ್ರ ಮೋದಿ ಕಟೌಟ್​ಗೆ ಚಪ್ಪಲಿ ಏಟು ಹಾಕಿ ವಿಡಿಯೋ ವೈರಲ್ ಮಾಡಿದ ಹಾಸನದ ಯುವಕ
ವಿಡಿಯೋದ ಸ್ಕ್ರೀನ್​ಶಾಟ್​
Follow us on

ಹಾಸನ: ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್​ಗೆ ಚಪ್ಪಲಿಯಿಂದ ಹೊಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವಿಡಿಯೋ ಒಂದು ವೈರಲ್ ಆಗಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಪುರಲೇಹಳ್ಳಿ ಗ್ರಾಮದಲ್ಲಿ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್​ಗೆ ಚಪ್ಪಲಿಯಲ್ಲಿ ಹೊಡೆದು ವಿಡಿಯೋ ಮಾಡಿದ್ದಾನೆ. ಆದರೆ ವಿಡಿಯೋ ಮಾಡಿದ ಮುಂದಿನ ಪರಿಣಾಮಗಳನ್ನು ಯುವಕ ಸದ್ಯ ಅನುಭವಿಸುತ್ತಿದ್ದಾನೆ.

ಮಾಸ್ಕ್ ಹಾಕಿಲ್ಲ, ಮೇಲಕ್ಕೆ ಹೋಗಲು ತೋರಿಸ್ತೀಯಾ? ಎಂದು ನಿಂದಿಸಿ ಪ್ರಧಾನಿ ಮೋದಿ ಚಿತ್ರಕ್ಕೆ ಚಪ್ಪಲಿ ಏಟು ಹಾಕಿದ್ದಾನೆ ಯುವಕ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಬಾಣಾವರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ

Megha Shetty: ಲಾಕ್​ಡೌನ್​ನಲ್ಲಿ ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ದಿನಚರಿ ಏನು? ಮನೆಯಲ್ಲಿದ್ದು ಏನ್​ ಮಾಡ್ತಿದ್ದಾರೆ ಕರಾವಳಿ ಬೆಡಗಿ?
(Prime Minister Narendra Modi cutout slammed by slippers video goes Viral in Hassan)

Published On - 10:57 pm, Fri, 21 May 21