ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ವರ್ಗಾವಣೆ

ರಾಘವೇಂದ್ರ ಸುಹಾಸ್ ಇದೀಗ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಹೊಂದಿದ್ದಾರೆ. 4.9 ಕೆಜಿ ಚಿನ್ನ ಸಾಗಾಟ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ವರ್ಗಾವಣೆ
ಐಜಿಪಿ ರಾಘವೇಂದ್ರ ಸುಹಾಸ್
Follow us
TV9 Web
| Updated By: ganapathi bhat

Updated on:Aug 21, 2021 | 10:06 AM

ಬೆಂಗಳೂರು: ಟಿವಿ9 ಬಯಲಿಗೆಳೆದಿದ್ದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಎತ್ತಂಗಡಿ ಮಾಡಲಾಗಿದೆ. ಟಿವಿ9 ನಿನ್ನೆ ಸಂಜೆ ಖಾಕಿ ಕಳ್ಳಾಟ ವರದಿ ಪ್ರಸಾರ ಮಾಡಿತ್ತು. ಬಳಿಕ, ನಿನ್ನೆ ರಾತ್ರಿ ಮೂವರು ಅಧಿಕಾರಿಗಳ ವರ್ಗಾವಣೆಯಾಗಿತ್ತು. ಗೋಕಾಕ್ ಉಪ ವಿಭಾಗ ಡಿವೈಎಸ್​ಪಿ ಜಾವೀದ್ ಇನಾಂದಾರ್, ಪಿಐ ಗುರುರಾಜ್ ಮತ್ತು ಪಿಎಸ್​ಐ ರಮೇಶ್ ಪಾಟೀಲ್​ರನ್ನು ನಿನ್ನೆ ಎತ್ತಗಂಡಿ ಮಾಡಲಾಗಿತ್ತು. ಈಗ ಐಜಿಪಿ ರಾಘವೇಂದ್ರ ಸುಹಾಸ್ ಎತ್ತಂಗಡಿಗೆ ಆದೇಶ ಮಾಡಲಾಗಿದೆ.

ರಾಘವೇಂದ್ರ ಸುಹಾಸ್ ಇದೀಗ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಹೊಂದಿದ್ದಾರೆ. 4.9 ಕೆಜಿ ಚಿನ್ನ ಸಾಗಾಟ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.

ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶ ಬೆಂಗಳೂರು ಕೇಂದ್ರ ಕಚೇರಿಯಿಂದ ಫಾರೆಸ್ಟ್ ಸೆಲ್ ಐಜಿಪಿಯಾಗಿ ಕೆ.ವಿ.ಶರತ್ ಚಂದ್ರ, ಬಳ್ಳಾರಿ ವಲಯದಿಂದ ಕಾರಾಗೃಹ ಐಜಿಪಿಯಾಗಿ ಎಂ.ನಂಜುಂಡಸ್ವಾಮಿ, ಈಶಾನ್ಯ ವಲಯದಿಂದ ಬಳ್ಳಾರಿ ವಲಯ ಐಜಿಪಿಯಾಗಿ ಮನೀಶ್ ಕರ್ಬಿಕರ್, ಕಲಬುರಗಿ ಕಮಿಷನರ್​ನಿಂದ ಉತ್ತರ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್, ಉತ್ತರ ವಲಯದಿಂದ ಆಂತರಿಕ ಭದ್ರತಾ ದಳ ಐಜಿಪಿಯಾಗಿ ರಾಘವೇಂದ್ರ ಸುಹಾಸ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಚಿನ್ನ ಕಳ್ಳ ಸಾಗಣಿಕೆಗೆ ಸಹಾಯ ಮಾಡಿದ ಮೂವರು ಪೊಲೀಸ್ ಅಧಿಕಾರಿಗಳನ್ನು ಬೇರೆಕಡೆಗೆ ವರ್ಗಾಯಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಕಳ್ಳರನ್ನ ಹಿಡಿಯಬೇಕಾದವರೇ ಕಳ್ಳಾಟಕ್ಕೆ ಇಳಿದಿದ್ದು, ರಕ್ಷಣೆ ಕೊಡಬೇಕಾದವರೇ ಇಲ್ಲಿ ಭಕ್ಷಕರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಚಿನ್ನವನ್ನು ಹೊತ್ತೋಯ್ಯುತ್ತಿದ್ದ ಕಳ್ಳರನ್ನು ಜೈಲಿಗೆ ಅಟ್ಟಬೇಕಾದ ಅಧಿಕಾರಿಗಳು ಕಳ್ಳರ ಜತೆಗೆ ಸೇರಿ ಕಾನೂನುಬಾಹಿರ ಚುವಟಿಕೆಯಲ್ಲಿ ತೊಡಗಿದ್ದರು. ಸದ್ಯ ಈ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಕಳ್ಳಾಟ ಬಯಲಾಗಿತ್ತು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದ ಅದೊಂದು ಘಟನೆಗೆ ಇದೀಗ ಮೂವರ ತಲೆ ದಂಡವಾಗಿತ್ತು. ಗೋಕಾಕ್ ಡಿವೈಎಸ್‌ಪಿ ಜಾವೇದ್ ಇನಾಮದಾರ್, ಸಿಪಿಐ ಕಲ್ಯಾಣ್ ಶೆಟ್ಟಿ, ಪಿಎಸ್ಐ ರಮೇಶ್ ಪಾಟೀಲ್‌ಗೆ ಸರ್ಕಾರ ವರ್ಗಾವಣೆ ಮಾಡಿದ್ದು, ಮೂವರನ್ನೂ ಮೂರು ದಿಕ್ಕಿಗೆ ಕಳುಹಿಸಿಲಾಗಿತ್ತು.

ಇದನ್ನೂ ಓದಿ: ಕಳ್ಳರಿಗೆ ಸಹಾಯ ಮಾಡಲು ಹೋಗಿ ಕಳ್ಳತನಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು; ಎಸ್‌ಪಿ ತನಿಖೆಯಲ್ಲಿ ಬಯಲಾಯ್ತು ಸತ್ಯ

Published On - 9:08 pm, Fri, 21 May 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM