ಮೌರ್ಯ ಸರ್ಕಲ್​ನಲ್ಲಿ ಖಾಸಗಿ ಶಾಲಾ ವಾಹನ ಚಾಲಕರ ಪ್ರತಿಭಟನೆ.. ಬೇಡಿಕೆಗಳು ಹೀಗಿವೆ

| Updated By: ಸಾಧು ಶ್ರೀನಾಥ್​

Updated on: Mar 06, 2021 | 12:31 PM

ಒಂದು ವರ್ಷದಿಂದ ಕೆಲಸವಿಲ್ಲದೆ ಕಂಗಾಲಾಗಿರುವ ಖಾಸಗಿ ಶಾಲಾ ವಾಹನ ಚಾಲಕರು ಕರ್ನಾಟಕ ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಖಾಸಗಿ ಶಾಲಾ ವಾಹನಗಳ ಚಾಲಕರು ಭಾಗಿಯಾಗಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ಮೌರ್ಯ ಸರ್ಕಲ್​ನಲ್ಲಿ ಖಾಸಗಿ ಶಾಲಾ ವಾಹನ ಚಾಲಕರ ಪ್ರತಿಭಟನೆ.. ಬೇಡಿಕೆಗಳು ಹೀಗಿವೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಪೋಷಕರದ್ದಾಯ್ತು, ಖಾಸಗಿ ಶಾಲಾ ಒಕ್ಕೂಟವಾಯ್ತು, ಈಗ ಖಾಸಗಿ ಶಾಲಾ ವಾಹನ ಚಾಲಕರಿಂದಲೂ ಪ್ರತಿಭಟನೆ ನಡಯುತ್ತಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ವಾಹನ ಚಾಲಕರು ಮೌರ್ಯ ಸರ್ಕಲ್​ನಲ್ಲಿ ಧರಣಿ ಮಾಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೆ ಕಂಗಾಲಾಗಿರುವ ಖಾಸಗಿ ಶಾಲಾ ವಾಹನ ಚಾಲಕರು ಕರ್ನಾಟಕ ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಖಾಸಗಿ ಶಾಲಾ ವಾಹನಗಳ ಚಾಲಕರು ಭಾಗಿಯಾಗಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮೆರವಣಿಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಶಾಲಾ ವಾಹನ ಚಾಲಕರ ಬೇಡಿಕೆಗಳೇನು?
1. ಖಾಸಗಿ ಶಾಲಾ ವಾಹನಗಳಿಗೆ ಪರ್ಮಿಟ್ ನೀಡಬೇಕು.
2. ಪೂರ್ಣ ಪ್ರಮಾಣದಲ್ಲಿ ಶಾಲಾ ಆರಂಭಿಸಬೇಕು.
3. ಶಾಲಾ ವಾಹನದ ತೆರಿಗೆಯನ್ನು ಮಾರ್ಚ್ 2020 ರಿಂದ ಮಾರ್ಚ್ 2021ರ ವರೆಗೆ ಮುನ್ನ ಮಾಡಬೇಕು.
4. ಶಾಲಾ ವಾಹನಗಳಿಗೆ ಶಾಲೆಗಳ ಬಳಿ ನಿಲ್ದಾಣ ಮಾಡಬೇಕು.
5. ಶಾಲಾ ವಾಹನ ಚಾಲಕರಿಗೆ ವಸತಿ/ನಿವೇಶನ ನೀಡುವುದು.
6. ಶಾಲಾ ವಾಹನಗಳಿಗೆ ಇನ್ಶುರೆನ್ಸ್ ರಿಯಾಯಿತಿ ನೀಡುವುದು
7. ಚಾಲಕರ ದಿನಾಚರಣೆಯನ್ನ ಸರ್ಕಾರ ಘೋಷಣೆ ಮಾಡಬೇಕು.
8. ಖಾಸಗಿ ಶಾಲಾ ವಾಹನಗಳಿಗೆ ಆಯಾ ಶಾಲೆಗಳ ಹತ್ತಿರ ಶಾಲೆಯ ಸಮಯದಲ್ಲಿ ನಿಲ್ದಾಣ ನೀಡುವುದು.
9. ಖಾಸಗಿ ಫೈನಾನ್ಸ್​ನಿಂದ ಅಧಿಕ ಬಡ್ಡಿ ಮತ್ತು ದೌರ್ಜನ್ಯವನ್ನ ತಡೆಗಟ್ಟುವುದು.
10. ಕೋವಿಡ್ 19ರಿಂದ ಚಾಲಕರ ಆದಾಯಕ್ಕೆ ನಷ್ಟವಾಗಿರುವುದರಿಂದ 15 ವರ್ಷದ ಹಳೆಯ ವಾಹನಗಳಿಗೆ ಎಫ್​ಸಿ ಮಾಡುವುದು.
11. ಅಸಂಘಟಿತ ವಾಣಿಜ್ಯ ವಾಹನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದು.

ಖಾಸಗಿ ಶಾಲೆಗಳ ಬೇಡಿಕೆಗಳೇನು?
ರಾಜ್ಯ ಸರ್ಕಾರ ಶೇ.30 ರಷ್ಟು ಶುಲ್ಕ ಕಡಿತದ ಆದೇಶವನ್ನು ಪುನರ್ ಪರಿಶೀಲನೆ‌ ಮಾಡಬೇಕು. ರಾಜ್ಯ ಸರ್ಕಾರ ಶೇ.30 ರಷ್ಟು ಕಡಿತ ಅಂತ ಹೇಳಿದೆ, ಆದ್ರೆ ಆದೇಶದ ಪ್ರಕಾರ ಶೇ.55 ರಿಂದ 65 ರಷ್ಟು ಶುಲ್ಕ ಕಡಿತವಾಗ್ತಿದೆ. ಹಾಗೇ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಬೇಕು ಹಾಗೇಕಟ್ಟಡ ಸುರಕ್ಷತೆ ಪ್ರಮಾಣ ಪತ್ರ ಹಳೆಯ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯಿಸಿವೆ. 1 ರಿಂದ 5 ನೇ ತರಗತಿಯನ್ನ ಆದಷ್ಟು ಬೇಗ ಆರಂಭ ಮಾಡಬೇಕು. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಇದನ್ನೂ ಓದಿ

ಇಂದು ಖಾಸಗಿ ಶಾಲಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.. ಶೇ.30ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಹೋರಾಟ

ಶಾಲೆಗಳಿಗೆ ಸರ್ಕಾರ ಅನುದಾನ ನೀಡದಿದ್ದಕ್ಕೆ ಗರಂ.. ಕಲ್ಯಾಣ ಕರ್ನಾಟಕ ಭಾಗದ 1500 ಖಾಸಗಿ ಶಾಲೆಗಳು ಇಂದು ಬಂದ್‌ಗೆ ನಿರ್ಧಾರ