25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿ?
ಇಂದು ಖಾಸಗಿ ಶಾಲೆಗಳ ಆನ್ ಲೈನ್ ಕ್ಲಾಸ್ ಬಂದ್ ಮಾಡಲಿದ್ದು, ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಖಾಸಗಿ ಶಾಲೆಗಳ ಬೇಡಿಕೆಗಳೇನು?
ರಾಜ್ಯ ಸರ್ಕಾರ ಶೇ.30 ರಷ್ಟು ಶುಲ್ಕ ಕಡಿತದ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು. ರಾಜ್ಯ ಸರ್ಕಾರ ಶೇ.30 ರಷ್ಟು ಕಡಿತ ಅಂತ ಹೇಳಿದೆ, ಆದ್ರೆ ಆದೇಶದ ಪ್ರಕಾರ ಶೇ.55 ರಿಂದ 65 ರಷ್ಟು ಶುಲ್ಕ ಕಡಿತವಾಗ್ತಿದೆ. ಹಾಗೇ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಬೇಕು ಹಾಗೇಕಟ್ಟಡ ಸುರಕ್ಷತೆ ಪ್ರಮಾಣ ಪತ್ರ ಹಳೆಯ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯಿಸಿವೆ. 1 ರಿಂದ 5 ನೇ ತರಗತಿಯನ್ನ ಆದಷ್ಟು ಬೇಗ ಆರಂಭ ಮಾಡಬೇಕು. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಒಟ್ಟಾರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತೊಮ್ಮೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇಂದು ರೆಡಿಯಾಗಿವೆ. ಆದ್ರೆ ಖಾಸಗಿ ರಣಕಹಳೆಗೆ ಸರ್ಕಾರ ಮಣಿಯುತ್ತಾ? ಶುಲ್ಕ ಕಡಿತದ ಆದೇಶ ವಾಪಾಸ್ ಪಡೆಯುತ್ತಾ? ಅಂತ ಕಾದು ನೋಡ್ಬೇಕಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳು ಸೋಮವಾರದಿಂದ ಬಂದ್: ಪ್ರತಿಭಟನೆಗೆ ಮುಂದಾದ ಖಾಸಗಿ ಶಾಲಾ ಒಕ್ಕೂಟ