ಶಾಲಾ ಫೀಸ್ ಕಡಿತ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಸಿದ್ಧತೆ
ಸರ್ಕಾರದ ಆದೇಶ ಖಾಸಗಿ ಶಾಲೆಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಒಪ್ಪುವಂತದಲ್ಲ. ಖಾಸಗಿ ಶಾಲೆಗಳ ಶುಲ್ಕವನ್ನು 30% ರಷ್ಟು ಕಡಿಮೆ ಮಾಡಿರುವು ಒಪ್ಪವುವಂತದಲ್ಲ.
ಬೆಂಗಳೂರು: ಸರ್ಕಾರದಿಂದ ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಿದ ಬೆನ್ನಲ್ಲೇ, ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟಗಳು ಅಸಮಾಧಾನ ಹೊರಹಾಕಿವೆ.
ನೆನ್ನೆ ಖಾಸಗಿ ಶಾಲೆಗಳ ಶುಲ್ಕ ನಿಗಧಿಯ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿಧಾನಸೌದದಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಲಾ ಶುಲ್ಕವನ್ನ ಶೇ.30ರಷ್ಟು ಕಡಿಮೆ ಮಾಡಿದ್ದರು. ಈ ನಿರ್ಧಾರದ ಬಗ್ಗೆ ಆಕ್ರೋಶಗೊಂಡಿರುವ ಖಾಸಗಿ ಶಾಲೆಗಳ ಒಕ್ಕೂಟ, ಸರ್ಕಾರದ ಆದೇಶ ಖಾಸಗಿ ಶಾಲೆಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಒಪ್ಪುವಂತದಲ್ಲ. ಖಾಸಗಿ ಶಾಲೆಗಳ ಶುಲ್ಕವನ್ನು 30% ರಷ್ಟು ಕಡಿಮೆ ಮಾಡಿರುವು ಒಪ್ಪವುವಂತದಲ್ಲ.
ಬೇಕಿದ್ದರೆ 15 ರಿಂದ 20, 25 % ಟರ್ಮ್ ಶುಲ್ಕ ಸ್ಪೆಷಲ್ ಶುಲ್ಕದಲ್ಲಿ, ಡೆವಲಪ್ಮೆಂಟ್ ಶುಲ್ಕದಲ್ಲಿ ಇತರೆ ಕಂಪ್ಯೂಟರ್, ಟ್ರಾನ್ಪೋರ್ಟ್ ಚಾರ್ಜ್ನಲ್ಲಿ ತಗಲುವ ವೆಚ್ಚದಲ್ಲಿ ಕಡಿಮೆ ಮಾಡಲು ಶಿಫಾರಸು ಮಾಡಬಹುದಿತ್ತು. ಆದರೆ ಏಕರೂಪದಲ್ಲಿ ಒಟ್ಟಾರೆ ಕಡಿತ ಮಾಡಿರುವುದು 30%. ಅದು 40 ರಿಂದ 50% ರಷ್ಟು ಆಗುತ್ತದೆ. ಟೆಕ್ನಿಕಲ್ ಆಗಿ ಈ ಅಂಶಗಳು ಈಗಾಗಲೇ ಶಿಕ್ಷಣ ಮಂತ್ರಿಗಳಿಗೆ, ಪ್ರಧಾನ ಕಾರ್ಯದರ್ಶಿ, ಹಾಗೂ ಅಯುಕ್ತರಿಗೆ ಗೊತ್ತಿತ್ತು. ಆದರೂ ಸ್ಪಷ್ಟೀಕರಣ ಕೊಡದೆ ಏಕಾಏಕಿ ಕಡಿತ ಮಾಡಿದೆ.
ಹಾಗಾದ್ರೆ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಕೇವಲ 70% ರಷ್ಟು ಮಾತ್ರ ಸಂಬಳ ಕೊಡಬೇಕಾ..? ಇದಕ್ಕೆ ಶಿಕ್ಷಣ ಸಚಿವರು ಏನು ಉತ್ತರ ಕೊಡ್ತಾರೆ..? ಕಳೆದ ವರ್ಷ ಶುಲ್ಕವನ್ನೇ ಪಾವತಿ ಮಾಡಿಲ್ಲ. ಈ ವರ್ಷದ ದಾಖಲಾತಿ ಮಾಡಿಲ್ಲ. ಈ ಧೋರಣೆಯನ್ನು ಸಂಪೂರ್ಣವಾಗಿ ಒಪ್ಪುವಂತದಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಪೋಷಕರಿಂದ 70 % ಮಾತ್ರವೇ ಶುಲ್ಕ ಪಡೆಯುತ್ತೇವೆ.. ಸರ್ಕಾರದ ನಿರ್ಧಾರ ಸ್ವಾಗತಿಸಿದ ರೂಪ್ಸಾ