AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂದಾಯ ಸಚಿವ ಆರ್​. ಅಶೋಕ್ PA ಗಂಗಾಧರ್ ವಿರುದ್ಧ ಕೊನೆಗೂ ದಾಖಲಾಯ್ತು FIR

ಶೃಂಗೇರಿ ರಿಜಿಸ್ಟ್ರಾರ್ H.S.ಚೆಲುವರಾಜು, ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು.

ಕಂದಾಯ ಸಚಿವ ಆರ್​. ಅಶೋಕ್ PA ಗಂಗಾಧರ್ ವಿರುದ್ಧ ಕೊನೆಗೂ ದಾಖಲಾಯ್ತು FIR
ಸಚಿವ ಅಶೋಕ್ PA ಗಂಗಾಧರ್​ (ಎಡ); ಸಬ್​ ರೆಜಿಸ್ಟ್ರಾರ್​ ಚೆಲುವರಾಜ್​ (ಬಲ)
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on: Jan 30, 2021 | 11:21 AM

Share

ಚಿಕ್ಕಮಗಳೂರು: ಲಂಚ ಕೇಳಿದ ಆರೋಪದಡಿ ಕಂದಾಯ ಸಚಿವ R. ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶೃಂಗೇರಿ ಸಬ್​ ರಿಜಿಸ್ಟ್ರಾರ್ H.S. ಚೆಲುವರಾಜು ಅವರು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು.

ಘಟನೆಯ ಹಿನ್ನೆಲೆ ಜನವರಿ 24ರಂದು ಸಚಿವ ಆರ್ ಅಶೋಕ್ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಚಿವ ಆರ್ ಅಶೋಕ್ ಪಿಎ ಗಂಗಾಧರ್, ಶೃಂಗೇರಿ ಸಬ್​ ರಿಜಿಸ್ಟ್ರಾರ್ H.S. ಚೆಲುವರಾಜು ಅವರಿಗೆ ಕರೆ ಮಾಡಿ ಸಚಿವರು ಶೃಂಗೇರಿಗೆ ಬರ್ತಿದ್ದಾರೆ. ನೀವು ತರ್ತೀರಾ ಎಂದು ಕೇಳಿದ್ದಾರೆ. ಆ ನಂತರ, ಅದೇ ದಿನ ರೂಮ್​ಗೆ ಕರೆಯಿಸಿಕೊಂಡು ಕೊಡಿ ಕೊಡಿ ಎಂದು ಪೀಡಿಸಿದ್ದಾರಂತೆ. ಏನು ತಂದಿದ್ದೀರಾ ಅದನ್ನು ಕೊಡಿ ಅಂತಾನೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಚೆಲುವರಾಜು ಆರೋಪ ಮಾಡಿದ್ದರು. ಹಾಗೂ ಈ ಬಗ್ಗೆ ದೂರು ದಾಖಲಿಸಿದ್ದರು. ಹಾಗಾಗಿ ಸಚಿವ ಆರ್. ಅಶೋಕ್ ತಮ್ಮ ಪಿಎ ಗಂಗಾಧರ್​ನನ್ನು ಮಾತೃ‌ ಇಲಾಖೆಗೆ ಕಳುಹಿಸಿದ್ದರು.

ಲಂಚ ಆರೋಪ; ಮಾತೃ ಇಲಾಖೆಗೆ ಪಿಎ ಗಂಗಾಧರ್, ಸಚಿವ ಆರ್.ಅಶೋಕ್ ನಿರ್ಧಾರ

ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್​ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.