ವಿವಾದಿತ ಸ್ಥಳ ದತ್ತಪೀಠದಲ್ಲಿ ಕಾನೂನು ಉಲ್ಲಂಘನೆ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ, ಪ್ರಮೋದ್ ಮುತಾಲಿಕ್ ಆಕ್ರೋಶ

ದತ್ತಪೀಠದಲ್ಲಿ ಕಾನೂನು ಉಲ್ಲಂಘಿಸಿ ಮಾಂಸಹಾರ ಸೇವನೆ ಮಾಡಿರುವ ವಿಚಾರ ಹಿಂದೂ ಸಂಘನೆಗಳನ್ನು ಕೆರಳಿಸಿದ್ದು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ.

ವಿವಾದಿತ ಸ್ಥಳ ದತ್ತಪೀಠದಲ್ಲಿ ಕಾನೂನು ಉಲ್ಲಂಘನೆ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ, ಪ್ರಮೋದ್ ಮುತಾಲಿಕ್ ಆಕ್ರೋಶ
ದತ್ತಪೀಠದಲ್ಲಿ ಮಾಂಸಹಾರ ಸೇವನೆ
Updated By: Rakesh Nayak Manchi

Updated on: May 16, 2022 | 4:11 PM

ಚಿಕ್ಕಮಗಳೂರು: ವಿವಾದಿತ ಸ್ಥಳ ದತ್ತಪೀಠ (ಇನಾಂ ದತ್ತಾತ್ರೇಯ ಪೀಠ)ದಲ್ಲಿ ಕಾನೂನು ಉಲ್ಲಂಘನೆ (Violation of the law) ಪ್ರಕರಣ ಸಂಬಂಧ ವಿವಿಧ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ತೀವ್ರವಾಗಿ ಖಂಡಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿರುವ ಈ ವಿವಾದಿತ ಸ್ಥಳದಲ್ಲಿರುವ ತಾತ್ಕಾಲಿಕ ಶೆಡ್​ನಲ್ಲಿ ಮಾಂಸದೂಟ ಮಾಡಿದ ವಿಚಾರವನ್ನು ಖಂಡಿಸಿ ದತ್ತಪೀಠ(Dattapeth)ದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ(Protest) ನಡೆದಿದೆ. ಇದೇ ವೇಳೆ ಪ್ರತಿಭಟನಾಕಾರರು, ವಿವಾದಿತ ಜಾಗದ ಗೋರಿಗಳಿಗೆ ಪೂಜೆ ಮಾಡಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಜಿಲ್ಲಾಡಳಿತದ ವಿರುದ್ದ ದತ್ತಪೀಠದ ಮುಂಭಾಗದಲ್ಲಿ ಸಂಘಪರಿವಾರದ ಕಾರ್ಯಕರ್ತರು ಧರಣಿ ಕುಳಿತಿದ್ದಾರೆ.

ಇನ್ಮೇಲೆ ಮುಸ್ಲಿಂರನ್ನು ದತ್ತಪೀಠದೊಳಗೆ ಬಿಡೋದಿಲ್ಲ

ಬಾಗಲಕೋಟೆ: ಚಿಕ್ಕಮಗಳೂರು ದತ್ತಪೀಠದ ಪವಿತ್ರ ಕ್ಷೇತ್ರದಲ್ಲಿ ಮಾಂಸಾಹಾರ ಮಾಡಿದ ವಿಚಾರ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇನ್ನು ಮುಂದೆ ದತ್ತಪೀಠದ ಒಳಗೆ ಮುಸ್ಲಿಮರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಜಿಲ್ಲೆಯ ಜಮಖಂಡಿಯಲ್ಲಿ ಹೇಳಿಕೆ ನೀಡಿದ ಅವರು, ಪವಿತ್ರ ಕ್ಷೇತ್ರ ದತ್ತಪೀಠವನ್ನು ಅಪವಿತ್ರ ಮಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಏನು ಕತ್ತೆ ಕಾಯ್ತಾ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಂಸದ ಊಟ ನಿಷಿದ್ಧ ಇದ್ದರೂ ಅಲ್ಲಿ ಮಾಂಸದ ಊಟ ಮಾಡ್ತಾರೆ, ಗೊಮಾಂಸದೂಟ ಮಾಡ್ತಾರೆ. ಹೋಮಹವನ ಮಾಡುವಂತ ಪವಿತ್ರ ಕ್ಷೇತ್ರದಲ್ಲಿ ಗಲೀಜು ಮಾಡಲಾಗಿದೆ. ಇದು ಅಕ್ಷಮ್ಯ ಅಪರಾಧ. ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಯವರು ಕೂಡಲೆ ತನಿಖೆ ನಡೆಸಬೇಕು. ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಮುಸ್ಲಿಮರನ್ನು ಮೇಲೆ ಹೋಗಲು ಬಿಡುವುದಿಲ್ಲ. ದತ್ತಪೀಠ ಪ್ರವೇಶ ಮಾಡಲು ಬಿಡುವುದಿಲ್ಲ ಎಂದರು.

ಇದು ಹುಡುಗಾಟಿಕೆ ಅಲ್ಲ. ಅಕ್ಷಮ್ಯ ಅಪರಾಧ ಮಾಡಿದಂತ ಮುಸ್ಲಿಂರ ಮೇಲೂ ಕ್ರಮ ಕೈಗೊಳ್ಳಬೇಕು. ಅಲ್ಲಿರುವಂತಹ ಮೌಲ್ವಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ನೀವು ಕ್ರಮ ತೆಗೆದುಕೊಂಡರೆ ಸರಿ. ಇಲ್ಲದಿದ್ದರೆ ಶ್ರೀರಾಮಸೇನೆಯಿಂದ ಕೇಸ್ ಹಾಕಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಅಲ್ಲಿ ಮಾಂಸದ ಊಟ ನಿಷೇಧ ಇದೆ. ಅಲ್ಲಿ ಹೇಗೆ ಇಂಥ ಅಪರಾಧ ನಡೆಯಿತು ಅಂತ ಗೊತ್ತಿಲ್ಲ. ಶ್ರೀರಾಮಸೇನೆ ಸಂಘಟನೆಯಿಂದ ಆ ಜಾಗವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಲಾಗುವುದು ಎಂದರು.

Published On - 4:11 pm, Mon, 16 May 22