ಕೊಪ್ಪಳ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರಿಂದ ಧರಣಿ ನಡೆಯಿತು. ಪ್ರತಿಭಟನಾಕಾರರು ಶಾಸಕ ಯತ್ನಾಳ್ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.
ಕನ್ನಡ ಪರ ಹೋರಾಟಗಾರರನ್ನು ರೋಲ್ಕಾಲ್ ಹೋರಾಟಗಾರರೆಂದು ಶಾಸಕರು ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ಯತ್ನಾಳ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇದಲ್ಲದೆ, ಪ್ರತಿಭಟನಾಕಾರರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರ ಅಣಕು ಶವಯಾತ್ರೆ ಸಹ ನಡೆಸಿದರು. ಅಣಕು ಶವಯಾತ್ರೆ ವೇಳೆ ಸತ್ತಪೋ ಸತ್ತ ಯತ್ನಾಳ ಸತ್ತ ಎಂದು ಗೋಳಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಶೇಷ ಚೇತನ ವ್ಯಕ್ತಿಯ ಪ್ರತಿಭಟನೆ
Published On - 7:28 am, Sat, 5 December 20