Belagavi session: ಬೆಳಗಾವಿ ಅಧಿವೇಶನಕ್ಕೆ ಮೂರನೇ ದಿನವೂ ಪ್ರತಿಭಟನೆ ಕಾವು, ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ

ಬೆಳಗಾವಿ ಅಧಿವೇಶನ 2023: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ದಿನೇ ದಿನೇ ಉಭಯ ಸದನದಲ್ಲಿ ರಂಗೇರುತ್ತಿದೆ. ಅತ್ತ ಸುವರ್ಣ ವಿಧಾನ ಸೌಧದ ಹೊರಗೆ ಮೂರನೇ ದಿನವು 8 ಸಂಘಟನೆಗಳ ನಡೆಸಿದ ಪ್ರತಿಭಟನೆ ಕಾವು ಜೋರಾಗಿತ್ತು. ಅದರಲ್ಲೂ ರೈತರ ಹೋರಾಟವಂತೂ ಉತ್ತರ ಕರ್ನಾಟಕ ಅನ್ನದಾತರ ಸಂಕಷ್ಟವನ್ನ ಅನಾವರಣಗೊಳಿಸಿದೆ.

Belagavi session: ಬೆಳಗಾವಿ ಅಧಿವೇಶನಕ್ಕೆ ಮೂರನೇ ದಿನವೂ ಪ್ರತಿಭಟನೆ ಕಾವು, ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ
ಬೆಳಗಾವಿ ಅಧಿವೇಶನ
Follow us
Sahadev Mane
| Updated By: Ganapathi Sharma

Updated on: Dec 06, 2023 | 8:34 PM

ಬೆಳಗಾವಿ, ಡಿಸೆಂಬರ್ 6: ಉತ್ತರ ಕರ್ನಾಟಕ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha) ಚಳಿಗಾಲದ ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬರದಿಂದ ತತ್ತರಿಸಿರೋ ರೈತರ ಸಾಲಮನ್ನಾ (Loan Waiver), ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತ ಚಳವಳಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರೆ, ಆತ್ಮಹತ್ಯೆ ಮಾಡಿಕೊಂಡ 47 ನೇಕಾರರ ಕುಟುಂಬಕ್ಕೆ ಪರಿಹಾರ ನೀಡುವಂತೆ ನಡೆದ ಹೋರಾಟ ಸರ್ಕಾರದ ಗಮನ ಸೆಳೆಯಿತು. ಅತ್ತ ಸಚಿವ ಎಚ್.ಕೆ.ಪಾಟೀಲ್ ರೈತ ಹೋರಾಟಗಾರ ಮನವಿ ಸ್ವೀಕರಿಸಿ, ಸರ್ಕಾರ ಸ್ಪಂದಿಸುವ ಭರವಸೆ ನೀಡಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ದಿನೇ ದಿನೇ ಉಭಯ ಸದನದಲ್ಲಿ ರಂಗೇರುತ್ತಿದೆ. ಅತ್ತ ಸುವರ್ಣ ವಿಧಾನ ಸೌಧದ ಹೊರಗೆ ಮೂರನೇ ದಿನವು 8 ಸಂಘಟನೆಗಳ ನಡೆಸಿದ ಪ್ರತಿಭಟನೆ ಕಾವು ಜೋರಾಗಿತ್ತು. ಅದರಲ್ಲೂ ರೈತರ ಹೋರಾಟವಂತೂ ಉತ್ತರ ಕರ್ನಾಟಕ ಅನ್ನದಾತರ ಸಂಕಷ್ಟವನ್ನ ಅನಾವರಣಗೊಳಿಸಿದೆ. ಅಖಿಲ ಕರ್ನಾಟಕ ರೈತ ಸಂಘಟನೆ ಮತ್ತು ಭಾರತೀಯ ಕಿಸಾನ್ ಸಂಘದ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಆಕ್ರೋಶ ಹೊರಹಾಕಿದ್ರು. ಬರದಿಂದ ರಾಜ್ಯದ ರೈತರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕು. ನರೇಗಾ ಯೋಜನೆಯಡಿ ಹೆಚ್ಚಿನ ದಿನಗಳ ಉದ್ಯೋಗ ಮತ್ತು ಕೂಲಿ ಕೊಡಬೇಕು. ಖಾನಾಪುರ ತಾಲೂಕಿನ ರೈತರಿಗೆ ಮಲಪ್ರಭಾ ನದಿ ನೀರು ಒದಗಿಸುವಂತೆ ಅಖಿಲ ಕರ್ನಾಟಕ ರೈತ ಸಂಘ ಆಗ್ರಹಿಸಿತು.

ಎಕರೆಗೆ 25 ಸಾವಿರ ಪರಿಹಾರಕ್ಕೆ ಆಗ್ರಹ

ಭಾರತೀಯ ಕಿಸಾನ್ ಸಂಘವು ಬೆಳೆ ಹಾನಿಯಾದ ರೈತರ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಆಲಮಟ್ಟಿ ಜಲಾಶಯದ ಎತ್ತರವನ್ನ ಹೆಚ್ಚಿಸಬೇಕು. ಮಹದಾಯಿ, ಸಿಂಗಟಾಲೂರು ಸೇರಿದಂತೆ ದಶಕಗಳಿಂದ ನೆನೆಗುದಿಗೆ ಬಿದ್ದಿರೋ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು.

ನೇಕಾರರ ವಿದ್ಯುತ್ ಬಿಲ್ ಭರಿಸಲು ಆಗ್ರಹ

ರೈತ ಹೋರಾಟದ ಜೊತೆಗೆ ಉಳಿದ 6 ಸಂಘಟನೆಗಳ ವಿವಿಧ ಬೇಡಿಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಗಳು ಸರ್ಕಾರದ ಗಮನ ಸೆಳೆದಿದೆ. ಅದರಲ್ಲೂ ರಾಜ್ಯದಲ್ಲಿ ಸಂಕಷ್ಟದಲ್ಲಿ ಇರೋ ನೇಕಾರರ 40 ಕೋಟಿ ವಿದ್ಯುತ್ ಬಿಲ್ ಸರ್ಕಾರವೇ ಭರಿಸಬೇಕು. ಇದರೊಂದಿಗೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ 47 ನೇಕಾರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ನೂರಾರು ನೇಕಾರರು ಪ್ರತಿಭಟನೆ ನಡೆಸಿದರು.

ಅತ್ತ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಯೋಜನೆ ಅನುದಾನ ಬಳಸಬಾರದು ಮತ್ತು ಕನ್ನಡ ಸರ್ಕಾರಿ ಶಾಲೆ ಗಳನ್ನು ಮುಚ್ಚಬಾರದೆಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖಾಸಗಿ ಐಟಿಐ ಕಾಲೇಜಿನ‌ ಸಿಬ್ಬಂದಿಗೆ ಸರ್ಕಾರದ ವೇತನ ಅನುದಾನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ಖಾಸಗಿ ಐಟಿಐ ಶಿಕ್ಷಕರು ಹೋರಾಟ ನಡೆಸಿದರು. ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರು ರಾಜ್ಯದ ಎಲ್ಲಾ ಜಿಲ್ಲೆ ‌ನಕಲಿ ಕಾರ್ಮಿಕ ಕಾರ್ಡಗಳ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸಿದ್ರು. ಇತ್ತ ಸಾಲು ಸಾಲು ಪ್ರತಿಭಟನಾಕಾರರು ಅಳಲು ಆಲಿಸಿದ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿ ಗಮನಕ್ಕೆ ತಂದು ಸಮಸ್ಯೆಗಳನ್ನ ಪರಿಹರಿಸುವ ಭರವಸೆ ನೀಡಿದರು.

ಇದನ್ನೂ ಓದಿ: ಸದನದಲ್ಲಿ ಗದ್ದಲಕ್ಕೆ ಕಾರಣವಾಯ್ತು ಮುಸ್ಲಿಮರ ಬಜೆಟ್ ಹೆಚ್ಚಳ ಕುರಿತ ಸಿದ್ದರಾಮಯ್ಯ ಹೇಳಿಕೆ

ಒಟ್ಟಿನಲ್ಲಿ ಚಳಿಗಾಲದ ಅಧಿವೇಶನದ ಮೂರನೇ ದಿನವು ಪ್ರತಿಭಟನೆಗಳ ಕಾವು ಜೋರಾಗಿತ್ತು. ಸಚಿವರು, ಅಧಿಕಾರಿಗಳು ಪ್ರತಿಭಟನಾಕಾರರ ಅಳಲು ಆಲಿಸಿ ಸಿಎಂ ಗಮನಕ್ಕೆ ತಂದು ಪರಿಹರಿಸುವ ಭರವಸೆ ಕೊಟ್ಟಿದ್ದಾರೆ. ಇತ್ತ ನಾಳೆಯೂ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಗ್ರಾಮದ ಬಳಿ ಪ್ರತಿಭಟನೆಗಳು ನಡೆಯಲಿದ್ದು ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ