PUC Exam : 27 ಸಾವಿರ ವಿದ್ಯಾರ್ಥಿಗಳು ಗೈರು, ಕಾಡಿತಾ ಕೊರೊನಾ ಕ್ರಿಮಿ ಭಯ!
ಬೆಂಗಳೂರು: ರಾಜ್ಯಾದ್ಯಂತ ಇಂದು ನಡೆದ ಪಿಯುಸಿ ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆಯೊಂದಿಗೆ ಈ ವರ್ಷದ ಪಿಯು ಪರೀಕ್ಷೆ ಕಾರ್ಯ ಸಂಪೂರ್ಣವಾದಂತಾಗಿದೆ. ಆದರೆ ಈ ಪರೀಕ್ಷೆಗೆ 27, 022 ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ಎದ್ದುಕಾಣುತ್ತಿದೆ. ಗಮನಾರ್ಜವೆಂದರೆ ಒಂದೊಂದು ಪ್ರಮುಖ ಪರೀಕ್ಷಾ ಕೇಂದ್ರದಿಂದಲೂ 500-1000 ವಿದ್ಯಾರ್ಥಿಗಳು ಪರೀಕ್ಷೆಗೆ ಅಬ್ಸೆಂಟ್ ಆಗಿದ್ದಾರೆ. ಕಾರಣ ತಕ್ಷಣಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ ಕೊರೊನಾ ಸೋಂಕು ತಗಲುವ ಭಯ ಕಾಡಿತ್ತಾ ಎಂದು ಅನುಮಾನಿಸಲಾಗಿದೆ. ಒಟ್ಟು 5,95, 997 ವಿದ್ಯಾರ್ಥಿಗಳ ಪೈಕಿ 5,68,975 ವಿದ್ಯಾರ್ಥಿಗಳು ಇಂದು ಇಂಗ್ಲೀಷ್ ಪರೀಕ್ಷೆಗೆ […]
Follow us on
ಬೆಂಗಳೂರು: ರಾಜ್ಯಾದ್ಯಂತ ಇಂದು ನಡೆದ ಪಿಯುಸಿ ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆಯೊಂದಿಗೆ ಈ ವರ್ಷದ ಪಿಯು ಪರೀಕ್ಷೆ ಕಾರ್ಯ ಸಂಪೂರ್ಣವಾದಂತಾಗಿದೆ. ಆದರೆ ಈ ಪರೀಕ್ಷೆಗೆ 27, 022 ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ಎದ್ದುಕಾಣುತ್ತಿದೆ.
ಗಮನಾರ್ಜವೆಂದರೆ ಒಂದೊಂದು ಪ್ರಮುಖ ಪರೀಕ್ಷಾ ಕೇಂದ್ರದಿಂದಲೂ 500-1000 ವಿದ್ಯಾರ್ಥಿಗಳು ಪರೀಕ್ಷೆಗೆ ಅಬ್ಸೆಂಟ್ ಆಗಿದ್ದಾರೆ. ಕಾರಣ ತಕ್ಷಣಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ ಕೊರೊನಾ ಸೋಂಕು ತಗಲುವ ಭಯ ಕಾಡಿತ್ತಾ ಎಂದು ಅನುಮಾನಿಸಲಾಗಿದೆ. ಒಟ್ಟು 5,95, 997 ವಿದ್ಯಾರ್ಥಿಗಳ ಪೈಕಿ 5,68,975 ವಿದ್ಯಾರ್ಥಿಗಳು ಇಂದು ಇಂಗ್ಲೀಷ್ ಪರೀಕ್ಷೆಗೆ ಹಾಜರಾಗಿದ್ದರು.