ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 27, 2022 | 3:10 PM

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಯಲ್ಲಿ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ
ಶಾಸಕ ರಘುಪತಿ ಭಟ್
Follow us on

ಉಡುಪಿ: ಕಠೋರ ಮುಸ್ಲಿಮರು ಶರಿಯತ್ ಕಾನೂನು ಪಾಲಿಸಲು ತಯಾರಿರಲಿ. ಹರ್ಷನನ್ನು ಕೊಂದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲು ಅವಕಾಶ ಕೊಡಬೇಕು. ಕೊಲೆಗಡುಕರಿಗೆ ಶರಿಯತ್ ಕಾನೂನು (Shariat Law) ಪ್ರಕಾರ ಶಿಕ್ಷೆ ನೀಡುತ್ತೀರಾ ಎಂದು ಶಾಸಕ ರಘುಪತಿ ಭಟ್ ಉಗ್ರ ಭಾಷಣ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಯಲ್ಲಿ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಇದೇ ವೇಳೆ ಉಗ್ರವಾಗಿ ಭಾಷಣ ಮಾಡಿದ ಶಾಸಕ ರಘುಪತಿ ಭಟ್,  ಶರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಾಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ ತರಗತಿಯಲ್ಲಿ ಹಿಜಬ್ ಬೇಕು ಎಂದರೆ ಅದು ಆಗೂದಿಲ್ಲ. ಭಾರತ ದೇಶದ ಗಾಳಿ, ನೀರು, ಅನ್ನ ತಿನ್ನುತ್ತಿದ್ದೀರಿ. ಹಿಜಬ್ ವಿಚಾರದ ನಿಲುವೇನು? ಹರ್ಷ ಕೊಲೆಯಲ್ಲಿ ನಿಲುವೇನು? ದುಬೈ ಸೌದಿಗಳಲ್ಲಿ ಶರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ. ಹಿಂದೂಗಳ ಕೆಲ ಪದ್ಧತಿ ಕಾಲ ಕಾಲಕ್ಕೆ ಬದಲಾವಣೆಯಾಗಿದೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದುಹಾಕಿದ್ದಾರೆ. ಶರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲೀಮರಿಗೆ ಕಡ್ಡಾಯ ಮಾಡಿ
ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲೀಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಮಲ್ಲಿ ಹಿಜಬ್ ಬೇಕು ಅನ್ನುವವರಿಗೆ ಶರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಪಲಾಯನ ಮಾಡಬೇಡಿ, ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಉಗ್ರವಾಗಿ ಭಾಷಣ ಮಾಡಿದ್ದಾರೆ.

ಹರ್ಷಾ ಮನೆಗೆ ಮಲೆನಾಡು ವೀರಶೈವ ಮಠಾಧೀಶರ ಭೇಟಿ:

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತರ ಹರ್ಷಾ ಮನೆಗೆ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ತು ಸ್ವಾಮೀಜಿಗಳು ಭೇಟಿ ನೀಡಿದರು. ಶಿವಮೊಗ್ಗದ ಬೆಕ್ಕಿನ ಕಲ್ಮಠ್ ಸ್ವಾಮೀಜಿ ನೇತೃತ್ವದಲ್ಲಿ ಮಲೆನಾಡಿನ 13 ಮಠಗಳ ಸ್ವಾಮೀಜಿಗಳು ಭೇಟಿ ನೀಡಿದ್ದು, ಹರ್ಷ ಕುಟುಂಬಕ್ಕೆ ಸಾಂತ್ವನ ಮತ್ತು ಧೈರ್ಯ ತುಂಬಿದ್ದಾರೆ. ಇದೇ ರೀತಿಯಾಗಿ ನಿನ್ನೆ ಸಂಸದ ಪ್ರತಾಪ್ ಸಿಂಹ ಕೂಡ ಹರ್ಷ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಜೊತೆಗೆ 5ಲಕ್ಷ ರೂ. ಪರಿಹಾರವನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:

ಉಕ್ರೇನ್​​ನಿಂದ ಸಾವಿರಾರು ಜನರನ್ನು ಮರಳಿ ಕರೆತರಲು ಕೇಂದ್ರ ಹಗಲಿರುಳು ಶ್ರಮಿಸುತ್ತಿದೆ: ಮೋದಿ