ಲೋಕೋಪಯೋಗಿ ಇಲಾಖೆ,ಕಾವೇರಿ ನಿಗಮದ ಅಧಿಕಾರಿಗಳು ಸಿಎಂ ಪುತ್ರ ವಿಜಯೇಂದ್ರರ ಹೆಸರನ್ನು ದುರುಪಯೋಗಪಡಿಸಿಕೊಂಡು, ಭೃಷ್ಟಾಚಾರದಲ್ಲಿ ನಿರತರಾಗಿದ್ದಾರೆ, ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಮಂಡ್ಯದ ಸಿವಿಲ್ ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿ ಮತ್ತು ಅವರ ಕಾರ್ಯದರ್ಶಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯ ಪ್ರತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ.
ಮಂಡ್ಯದ ಪಿಡಬ್ಲ್ಯುಡಿ ಗುತ್ತಿಗೆದಾರ ಮತ್ತು ರೈತರೂ ಆಗಿರುವ ಬಸವೇಗೌಡ ಮನವಿ ಪತ್ರ ನೀಡಿದವರು. ಲೋಕೋಪಯೋಗಿ ಇಲಾಖೆ, ಕಾವೇರಿ ನಿಗಮದಲ್ಲಿ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿಯಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಸುವಾಗ ಬಿಎಸ್ವೈ ಅವರ ಮಗ ವಿಜಯೇಂದ್ರ, ಮತ್ತು ಅವರ ಕುಟುಂಬದ ಆಪ್ತ ಉಮೇಶ್ ಅವರ ಹೆಸರನ್ನು ಅಧಿಕಾರಿಗಳು ಬಳಸಿಕೊಂಡು ಶೇ.8ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಬಿಲ್ ಪಾವತಿಸುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.
ಮನವಿಯಲ್ಲಿ ಯಾರ ಹೆಸರಿದೆ?
ಲೋಕೋಪಯೋಗಿ ಇಲಾಖೆಯ ಸರ್ಕಾರಿ ಕಾರ್ಯದರ್ಶಿ, ಆಂತರಿಕ ಆರ್ಥಿಕ ಸಲಹೆಗಾರ, ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ಗಳು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿ ಸುಮಾರು 60 ಅಧಿಕಾರಿಗಳು ಭೃಷ್ಟಾಚಾರದಲ್ಲಿ ತೊಡಗಿದ್ದಾರೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Published On - 7:58 pm, Sat, 21 November 20