‘ಸಂಪುಟ ವಿಸ್ತರಣೆಗೆ ಷರತ್ತು ಹಾಕಿಲ್ಲ, ಗಡುವೂ ವಿಧಿಸಿಲ್ಲ; ಅನ್ಯಾಯವಾಗದಂತೆ ನೋಡಿಕೊಳ್ಳಿ’
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪಟ್ಟಿ ಇವತ್ತಾದರೂ ಬರಬಹುದು, ಎರಡು ದಿನ ಬಿಟ್ಟಾದರೂ ಬರಬಹುದು. ಸಂಪುಟ ವಿಸ್ತರಣೆ ಶೀಘ್ರ ಆಗಬಹುದು ಎಂಬ ಆಶಾಭಾವನೆಯಲ್ಲಿ ನಾವಿದ್ದೇವೆ. ರಾಜಕೀಯದಲ್ಲಿ ಆಶಾಭಾವನೆ ಮುಖ್ಯ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಟಿವಿ9ಗೆ ಪ್ರತಿಕ್ರಿಯಿಸಿದ ಸಚಿವರು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಪಕ್ಷದ ಇತರ ವರಿಷ್ಠರನ್ನು ಭೇಟಿಯಾಗಿದ್ದು ನಿಜ ಎಂಬ ಮಾಹಿತಿ ನೀಡಿದರು. ಜೊತೆಗೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಷರತ್ತು ಹಾಕಿಲ್ಲ. ಕಾಲಮಿತಿಯನ್ನೂ […]

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪಟ್ಟಿ ಇವತ್ತಾದರೂ ಬರಬಹುದು, ಎರಡು ದಿನ ಬಿಟ್ಟಾದರೂ ಬರಬಹುದು. ಸಂಪುಟ ವಿಸ್ತರಣೆ ಶೀಘ್ರ ಆಗಬಹುದು ಎಂಬ ಆಶಾಭಾವನೆಯಲ್ಲಿ ನಾವಿದ್ದೇವೆ. ರಾಜಕೀಯದಲ್ಲಿ ಆಶಾಭಾವನೆ ಮುಖ್ಯ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಟಿವಿ9ಗೆ ಪ್ರತಿಕ್ರಿಯಿಸಿದ ಸಚಿವರು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಪಕ್ಷದ ಇತರ ವರಿಷ್ಠರನ್ನು ಭೇಟಿಯಾಗಿದ್ದು ನಿಜ ಎಂಬ ಮಾಹಿತಿ ನೀಡಿದರು. ಜೊತೆಗೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಷರತ್ತು ಹಾಕಿಲ್ಲ. ಕಾಲಮಿತಿಯನ್ನೂ ವಿಧಿಸಿಲ್ಲ. ಸಂಬಂಧಿಸಿದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದು ಹೇಳಿದರು.
ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸುವುದು ಮುಖ್ಯಮಂತ್ರಿಯ ಪರಮಾಧಿಕಾರ. ವರಿಷ್ಠರ ಸೂಚನೆ ಎಂದು ಬರಬಹುದು ಎಂಬ ಮಾಹಿತಿಯೂ ನನಗಿಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ನುಡಿದರು.
ಶಾಸಕರು ನನ್ನ ಮನೆಗೆ ಊಟದ ಸಮಯಕ್ಕೆ ಬಂದಿದ್ದರು ಅಷ್ಟೇ. ನಾನು ದೆಹಲಿ ತಲುಪಿದ ನಂತರ ಮುಖ್ಯಮಂತ್ರಿ ಆಗಮನದ ವಿಷಯ ಗೊತ್ತಾಯಿತು. ಆದರೆ ದೆಹಲಿಯಲ್ಲಿ ಯಡಿಯೂರಪ್ಪರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಫೋನ್ ಮಾಡಿ ಮಾತನಾಡಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.