ಆಲಿಂಗನ ನೆಪದಲ್ಲಿ ದಲಿತರನ್ನ ಧ್ವಂಸ ಮಾಡುವ ಹುನ್ನಾರ: ಬಿಜೆಪಿ ವಿರುದ್ಧ ಆರ್.ಧ್ರುವನಾರಾಯಣ ವಾಗ್ದಾಳಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 10, 2023 | 5:34 PM

ಬಿಜೆಪಿಯವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ, ಚುನಾವಣೆ ಬಂದಾಗ ಬಿಜೆಪಿಯವರಿಗೆ ಅಂಬೇಡ್ಕರ್​ ನೆನಪಾಗುತ್ತಾರೆ ಎಂದು ಮೈಸೂರಿನಲ್ಲಿ ಎಸ್​ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಆಲಿಂಗನ ನೆಪದಲ್ಲಿ ದಲಿತರನ್ನ ಧ್ವಂಸ ಮಾಡುವ ಹುನ್ನಾರ: ಬಿಜೆಪಿ ವಿರುದ್ಧ ಆರ್.ಧ್ರುವನಾರಾಯಣ ವಾಗ್ದಾಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ
Follow us on

ಮೈಸೂರು: ಬಿಜೆಪಿಯವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ, ಚುನಾವಣೆ ಬಂದಾಗ ಮಾತ್ರ ಅಂಬೇಡ್ಕರ್​ ನೆನಪಾಗುತ್ತಾರೆ. ದಲಿತರ ಮೇಲೆ ಧೃತರಾಷ್ಟ್ರ ಪ್ರೇಮವಿದೆ. ಆಲಿಂಗನ ನೆಪದಲ್ಲಿ ದಲಿತರನ್ನ ಧ್ವಂಸ ಮಾಡುವ ಹುನ್ನಾರ ನಡೆಸಿದ್ದಾರೆ. ಕೇಂದ್ರ ಸರ್ಕಾರ ದಲಿತ ಪರ ಕಾರ್ಯಕ್ರಮ ನೀಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ(R. Dhruvanarayana) ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ನಗರದ ಎಸ್​ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಧ್ರುವನಾರಾಯಣ, ಅಂಬೇಡ್ಕರ್​ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲವೆಂದು ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ಆರೋಪ ಮಾಡುತ್ತಾರೆ. ಕಳೆದ 40 ವರ್ಷಗಳಿಂದ ಇದನ್ನೇ ಹೇಳಿ ಸವಕಲು ನಾಣ್ಯದಂತಾಗಿದೆ. ನಾವು ರಾಷ್ಟ್ರೀಕರಣ ಮಾಡಿದೆವು, ಇವರು ಖಾಸಗೀಕರಣ ಮಾಡಿದ್ದಾರೆ ಎಂದರು.

ನಾನೊಬ್ಬ ಅಂಬೇಡ್ಕರ್​ವಾದಿ ಎಂಬ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಎಸ್​ಸಿ, ಎಸ್​ಟಿ ಸಮುದಾಯದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು..? ರಾಜ್ಯದಲ್ಲಿ 2 ಲಕ್ಷ ಹುದ್ದೆ ಖಾಲಿಯಿದ್ದರೂ ಭರ್ತಿ ಮಾಡುತ್ತಿಲ್ಲವೇಕೆ. ಎಸ್​ಸಿ, ಎಸ್​ಟಿ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಸ್ವಾಗತಿಸುತ್ತೇವೆ. ಅದನ್ನು ಶೆಡ್ಯೂಲ್​ 9ರಲ್ಲಿ ಸೇರಿಸದಿದ್ದರೆ ಚುನಾವಣಾ ಗಿಮಿಕ್ ಆಗುತ್ತದೆ. ನಮ್ಮದು ಜಾತ್ಯತೀತ ರಾಷ್ಟ್ರ ಎನ್ನುವುದನ್ನು ಸಿ.ಟಿ.ರವಿ ಒಪ್ಪಿಕೊಳ್ಳಬೇಕು. ಧರ್ಮ ಧರ್ಮಗಳ ನಡುವೆ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವ ಸಿ.ಟಿ.ರವಿಗೆ ದಲಿತರ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲವೆಂದು ಹೇಳಿದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ