ರಾಯಚೂರು: ರೋಗಿಯೊಬ್ಬರಿಗೆ ಹಾಕಿದ್ದ ಗ್ಲೂಕೋಸ್ ಮುಗಿದಿದ್ದರೂ ಡ್ರಿಪ್ಸ್ ತೆಗೆಯದೆ ರಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದೆ. ಗ್ಲುಕೋಸ್ ಮುಗಿದು ರಕ್ತ ಸುರಿಯುತ್ತಿದ್ದರು ಸಿರೆಂಜ್ ತೆಗೆಯದೆ, ರೋಗಿಯನ್ನು ಮುಟ್ಟದೆ ಆಸ್ಪತ್ರೆ ಸಿಬ್ಬಂದಿ ಯಡವಟ್ಟು ಮಾಡಿದೆ. ಕೊನೆಗೆ ಆಸ್ಪತ್ರೆ ಹೊರಗೆ ಹೋಗಿ ಬೇರೆ ವೈದ್ಯರ ಕೈ ಕಾಲು ಹಿಡಿದು ಸಂಬಂಧಿಕರು ವೈದ್ಯರನ್ನು ಕರೆತಂದು ಸಿರೆಂಜ್ ತೆಗಿಸಿದ್ದಾರೆ. ಅಷ್ಟೊತ್ತಿಗಾಗಲೇ ರಕ್ತ ಹರಿದು ನೆಲದ ಮೇಲೆ ಬಿದ್ದಿತ್ತು. ಆ ರಕ್ತವನ್ನು ಸಹ ಕ್ಲೀನ್ ಮಾಡದೇ ಸಿಬ್ಬಂದಿ ಹಿಂದೇಟು ಹಾಕಿದೆ. ರಿಮ್ಸ್ ಸಿಬ್ಬಂದಿ ಕಾರ್ಯ ವೈಖರಿಗೆ ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊವಿಡ್ ಕೆಲಸ ಮಾಡುವುದಕ್ಕೆ ವೈದ್ಯರಿಂದ ನಿರಾಸಕ್ತಿ
ಬಳ್ಳಾರಿ: ಜಿಂದಾಲ್ ತಾತ್ಕಾಲಿಕ ಆಸ್ಪತ್ರೆ ಸೇರಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೆ ವೈದ್ಯರ ನೇಮಕಾತಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಅರ್ಜಿಯನ್ನು ಸಲ್ಲಿಸದೆ ವೈದ್ಯರು ಕೊವಿಡ್ ಕೆಲಸ ಮಾಡುವುದಕ್ಕೆ ಹಿಂದೇಟು ಹಾಕಿದ್ದಾರೆ. 2.5 ಲಕ್ಷ ವೇತನ ನಿಗದಿ ಮಾಡಿದ್ದರೂ ವೈದ್ಯರು ಆರ್ಜಿ ಹಾಕಿಲ್ಲ. ಈಗ ಮತ್ತೆ ವೇತನ ಪರಿಷ್ಕರಿಸಿ ನೇಮಕಾತಿ ಮರು ಟೆಂಡರ್ ಕರೆಯಲು ಜಿಲ್ಲಾಡಳಿತ ನಿರ್ಧಾರಿಸಿದೆ. ಜಿಂದಾಲ್ನಲ್ಲಿ ಸಾವಿರ ಆಕ್ಸಿಜನ್ ಬೆಡ್ಗಳ ತಾತ್ಕಾಲಿಕ ಆಸ್ಪತ್ರೆ ಹಿನ್ನೆಲೆ ಜಿಂದಾಲ್ ಆಸ್ಪತ್ರೆಗೆ 31 ವಿಶೇಷ ವೈದ್ಯರು, 74 ವೈದ್ಯರು ಬೇಕಾಗಿದ್ದಾರೆ. ಆದರೆ ಒಬ್ಬರು ವೈದ್ಯ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ
‘ಗಂಡನ ಪ್ರಾಣ ಉಳಿಸಿದ್ರು ಸುದೀಪಣ್ಣ’; ಕಣ್ಣೀರು ಹಾಕುತ್ತ ಕಿಚ್ಚನಿಗೆ ಧನ್ಯವಾದ ತಿಳಿಸಿದ ಅಭಿಮಾನಿ ಸೌಮ್ಯ
(Raichur Rims hospital staff neglected to remove drips even though the glucose the patient had completed)