Raichur: ಶಿಕ್ಷಕಿ ನಾಪತ್ತೆ ಪ್ರಕರಣದ ಸುತ್ತ ಲವ್ ಜಿಹಾದ್ ಮತ್ತು ಮತಾಂತರ ಶಂಕೆ

| Updated By: Rakesh Nayak Manchi

Updated on: Nov 18, 2022 | 10:02 AM

ನಾಪತ್ತೆಯಾದ ಶಿಕ್ಷಕಿ ಸುಹಾಸಿನಿ ಅವರನ್ನು ಪೊಲೀಸರು ಒಂದೇ ದಿನದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಶಿಕ್ಷಕಿ ಲವ್ ಜಿಹಾದ್ ಕೊಂಚದರಲ್ಲೇ ತಪ್ಪಿಸಿಕೊಂಡಿದ್ದಾರೆ.

Raichur: ಶಿಕ್ಷಕಿ ನಾಪತ್ತೆ ಪ್ರಕರಣದ ಸುತ್ತ ಲವ್ ಜಿಹಾದ್ ಮತ್ತು ಮತಾಂತರ ಶಂಕೆ
ಶಿಕ್ಷಕಿ ನಾಪತ್ತೆ ಪ್ರಕರಣದ ಸುತ್ತ ಲವ್ ಜಿಹಾದ್ ಮತ್ತು ಮತಾಂತರ ಶಂಕೆ
Follow us on

ರಾಯಚೂರು: ಶಿಕ್ಷಕಿ ಸುಹಾಸಿನಿ ನಾಪತ್ತೆ ಪ್ರಕರಣ (Teacher missing case)ವು ಹೊಸ ತಿರುವು ಪಡೆದುಕೊಂಡಿದ್ದು, ಪೋಷಕರಿಂದ ಮತಾಂತರ (Conversion), ಲವ್ ಜಿಹಾದ್ (Love jihad) ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಟಿವಿ9 ವರದಿ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಶಿಕ್ಷಕಿಯನ್ನು ಒಂದೇ ದಿನದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಶಿಕ್ಷಿಯನ್ನು ಲವ್ ಜಿಹಾದ್ ಕುಣಿಕೆಯಿಂದ ಪಾರು ಮಾಡಿದಂತಾಗಿದೆ. ತನ್ನ ಮಗಳನ್ನು ತರಕಾರಿ ವ್ಯಾಪಾರಿ ಸಲೀಂ ಅನ್ನೋನು ಕರೆದುಕೊಂಡು ಹೋಗಿರುವುದಾಗಿ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಆಕೆಯ ಮನಸ್ಸನ್ನು ಬದಲಾಯಿಸಿ ಮತಾಂತರಕ್ಕೆ ಕರೆದೊಯ್ದಿರುವ ಆರೋಪ ಮಾಡಲಾಗಿತ್ತು. ಈ ಬಗ್ಗೆ ಭಜರಂಗದಳ ಹೋರಾಟಕ್ಕೆ ಇಳಿದಿತ್ತು. ಆರೋಪ ಸಂಬಂಧ ಸಲೀಂ ಶಿಕ್ಷಕಿಯನ್ನು ಕೊಂಡೊಯ್ದಿದ್ದು ಹೌದಾ? ಮತಾಂತರಕ್ಕೆ ಯತ್ನಿಸಿದ್ದು ನಿಜವೇ? ಸದ್ಯ ಸಲೀಂ ಎಲ್ಲಿದ್ದಾನೆ ಎಂಬಿತ್ಯಾದಿ ಮಾಹಿತಿಗಳು ತಿಳಿದುಬಂದಿಲ್ಲ.

ಸದ್ಯ ಶಿಕ್ಷಕಿಯನ್ನು ಪತ್ತೆಹಚ್ಚಿ ಕರೆತಂದ ಪೊಲೀಸರು, ಆಕೆಯನ್ನ ಗೌಪ್ಯ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕಳೆದ‌ 25 ದಿನ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಇದ್ದದ್ದಾಗಿ ಹೇಳಿಕೆ ನೀಡಿದ್ದು, ಪತಿ ಲಿಂಗರಾಜು ಬಗ್ಗೆಯೂ ಹೇಳಿಕೊಂಡಿದ್ದಾಳೆ. ಇದೇ ವೇಳೆ ಮದುವೆಯಾಗಿ ಪತ್ನಿ, ಮಗಳಿರುವ ಸಲೀಂ ಜೊತೆಗಿನ ಒಡನಾಟದ ವಿಚಾರ ಪ್ರಸ್ತಾಪ ಮಾಡಿದ್ದಾಳೆ. ಸದ್ಯ ಪೊಲೀಸರು ಶಿಕ್ಷಕಿಯ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮೂಲಕ ದಾಖಲು ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸರು ಸುಹಾಸಿನಿಯನ್ನು ಪೋಷಕರಿಗೆ ಒಪ್ಪಿಸಿದ್ದು, ಪೋಷಕರು ಮಗಳ ಮನವೊಲಿಸಿ ಮನೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡ ರಾಯಚೂರು ಜಿಲ್ಲಾ ಪೊಲೀಸರು

ಹಿಂದು ಸಂಘಟನೆ ಕಾರ್ಯಕರ್ತರ ದೌಡು

ಶಿಕ್ಷಕಿ ಪತ್ತೆಯಾಗುತ್ತಿದ್ದಂತೆಯೇ ಹಿಂದು ಸಂಘಟನೆ ಕಾರ್ಯಕರ್ತರ ಠಾಣೆಗೆ ದೌಡಾಯಿಸಿದ್ದು, ಹಿಂದೂ ಮಹಿಳೆಯರ ವೀಕ್ ಪಾಯಿಂಟ್ ಇಟ್ಟುಕೊಂಡು ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಿಂದೂ ಮಹಿಳೆಯರು ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ ಹಿಂದು ಜನ ಜಾಗೃತಿ ಸಮೀತಿ ಕಾರ್ಯಕರ್ತೆ ಸುವರ್ಣ, ಮೊಬೈಲ್, ಸ್ನೇಹದ ಮೂಲಕ ಹಿಂದೂ ಯುವತಿ, ಮಹಿಳೆಯರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಇದಕ್ಕಾಗಿಯೇ ಒಂದು ತಂಡ ಇರುತ್ತದೆ, ಈ ತಂಡವು ಮಹಿಳೆಯರ ಆರ್ಥಿಕ ಸ್ಥಿತಿಗತಿ ಇತ್ಯಾದಿ ದುರ್ಬಲತೆಗಳನ್ನು ನೋಡಿ ಲವ್ ಜಿಹಾದ್​ ಬಲೆಗೆ ಹಾಕಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Fri, 18 November 22