AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜ್ಯೋತಿಷಿ ‘ರೇವಣ್ಣ’ ತಕರಾರು: ಎಚ್​.ಡಿ.ಕುಮಾರಸ್ವಾಮಿ

ಚುನಾವಣೆ ಕಣಕ್ಕಿಳಿಯುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಸಿದ್ಧಪಡಿಸಿದೆ. ಆದರೆ ಪಟ್ಟಿ ಬಿಡುಗಡೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಕರಾರು ಎತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜ್ಯೋತಿಷಿ 'ರೇವಣ್ಣ' ತಕರಾರು: ಎಚ್​.ಡಿ.ಕುಮಾರಸ್ವಾಮಿ
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜ್ಯೋತಿಷಿ 'ರೇವಣ್ಣ' ತಕರಾರರು: ಎಚ್​.ಡಿ.ಕುಮಾರಸ್ವಾಮಿ
TV9 Web
| Updated By: Rakesh Nayak Manchi|

Updated on:Nov 18, 2022 | 10:54 AM

Share

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆ (Karnataka Election 2023)ಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ (JDS candidates list)ಯನ್ನು ಬಿಡುಗಡೆ ಮಾಡಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಮುಂದಾಗಿದ್ದಾರೆ. ಆದರೆ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಹೋದರ ಹಾಗೂ ಮಾಜಿ ಸಚಿವರೂ ಆಗಿರುವ ಪಕ್ಷದ ಜ್ಯೋತಿಷಿ ‘ಎಚ್​.ಡಿ.ರೇವಣ್ಣ’ ತಕರಾರು ಎತ್ತಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಹೇಳಿಕೆ ನೀಡಿದ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ (H.D.Revanna) ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಕರಾರು ತೆಗೆದಿದ್ದಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚುನಾವಣೆಗೆ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಸದ್ಯ ಪಟ್ಟಿ ಬಿಡುಗಡೆಗೆ ತಕರಾರರು ಬಂದ ಹಿನ್ನೆಲೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿಯೂ ಆಗಿರುವ ಪಕ್ಷದ ವರಿಷ್ಠ ಎಚ್‌.ಡಿ‌ ದೇವೇಗೌಡ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಸಮಸ್ತ ಕರ್ನಾಟಕದಲ್ಲಿ ಸುಲಭ ಗೆಲುವಿಗೆ ಚಾಮರಾಜಪೇಟೆ ಮಾತ್ರ: ಬಿಜೆಪಿ ಟಾಂಗ್

ರೇವಣ್ಣ ಅವರು ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ ದೇವಾಲಯ, ಜ್ಯೋತಿಷ್ಯ ಶಾಸ್ತ್ರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಾಮಾನ್ಯ ಜನಿರಿಗೂ ತಿಳಿದಿರುವ ವಿಷಯ. ಇನ್ನು ನಿಂಬೆಹಣ್ಣು ವಿಚಾರದಲ್ಲಂತೂ ಅವರು ಹೆಚ್ಚು ವೈರಲ್ ಆದವರಾಗಿದ್ದಾರೆ. ಮಾಟ ಮಂತ್ರ ಮಾಡುತ್ತಾರೆ ಅಲ್ವಾ, ಹೀಗಿದ್ದಾಗ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು, ಅದಕ್ಕಾಗಿ ನಾನು ಕೂಡ ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ ಎಂದು ಈ ಹಿಂದೆ ಸ್ವತಃ ಅವರೇ ಹೇಳಿಕೊಂಡಿದ್ದರು. ಇನ್ನು, ದೇವೇಗೌಡ ಅವರ ಕುಟುಂಬ ಏನೇ ಕಾರ್ಯ ಇದ್ದರೂ ದೇವಾಲಯಕ್ಕೆ ಭೇಟಿ ಕೊಟ್ಟೇ ಕೊಡುತ್ತದೆ. ಈ ಹಿಂದೆ ಸ್ವತಃ ಕುಮಾರಸ್ವಾಮಿ ಅವರೇ “ರಾಜ್ಯದಲ್ಲಿ ನಮ್ಮಷ್ಟು ದೇವಾಲಯಕ್ಕೆ ಭೇಟಿಕೊಟ್ಟು ಪೂಜೆ ಮಾಡಿದವರು ಯಾರೂ ಇಲ್ಲ” ಎಂಬ ಹೇಳಿಕೆ ನೀಡಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Fri, 18 November 22