ಕಲ್ಲಿದ್ದಲು ಕೊರತೆ; ಆರ್​ಟಿಪಿಎಸ್​ನ 3 ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ

| Updated By: preethi shettigar

Updated on: Mar 23, 2022 | 3:30 PM

ಕಲ್ಲಿದ್ದಲು ಸಂಗ್ರಹ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಕಳೆದ ಬೇಸಿಗೆಯಲ್ಲಿ 13881 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿತ್ತು. ಆದರೆ ಈ ಬಾರಿ ಮಾರ್ಚ್ ಆರಂಭದಲ್ಲೇ 14700 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ನಿಭಾಯಿಸಲು ಕೆಪಿಸಿ ಹೆಣಗಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಕೊರತೆ; ಆರ್​ಟಿಪಿಎಸ್​ನ 3 ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ
ಆರ್ಟಿಪಿಎಸ್
Follow us on

ರಾಯಚೂರು: ಕಲ್ಲಿದ್ದಲು ಕೊರತೆಯಿಂದಾಗಿ ಆರ್​ಟಿಪಿಎಸ್​ನ (RTPS )8 ವಿದ್ಯುತ್ ಉತ್ಪಾದನಾ ಘಟಕದಲ್ಲಿ 3 ವಿದ್ಯುತ್ ಉತ್ಪಾದನಾ ಘಟಕಗಳನ್ನು(power generation plant) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆ ಮೂಲಕ ಬೇಸಿಗೆ ಪ್ರಾರಂಭದಲ್ಲೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಇಡೀ ರಾಜ್ಯಕ್ಕೆ ಶೇಕಡಾ 40 ರಷ್ಟು ವಿದ್ಯುತ್ ಪೂರೈಕೆ ಮಾಡುತ್ತಿರುವ ಆರ್​ಟಿಪಿಎಸ್ ಹಾಗೂ ವೈಟಿಪಿಎಸ್​ನಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ. ಬೇಸಿಗೆ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ ಕಲ್ಲಿದ್ದಲು (coal) ಕೊರತೆಯಿಂದ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ‌ ಮಾಡಲಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಬಂದ್​ ಮಾಡಲಾಗಿದೆ.

ಸದ್ಯ ಆರ್​ಟಿಪಿಎಸ್​ನ ಕೇವಲ 5 ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಲ್ಲಿದ್ದಲು ಸಂಗ್ರಹ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಕಳೆದ ಬೇಸಿಗೆಯಲ್ಲಿ 13881 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿತ್ತು. ಆದರೆ ಈ ಬಾರಿ ಮಾರ್ಚ್ ಆರಂಭದಲ್ಲೇ 14700 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ನಿಭಾಯಿಸಲು ಕೆಪಿಸಿ ಹೆಣಗಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೊದಲು ಪ್ರತಿದಿನ 6 ರಿಂದ 8 ರೇಕು ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಈಗ ನಿತ್ಯ 2-4 ರೇಕುಗಳಲ್ಲಿ ಮಾತ್ರ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ. ಆರ್​ಟಿಪಿಎಸ್​ನ ಎಲ್ಲಾ 8 ಘಟಕಗಳು ಉತ್ಪಾದನೆ ಮಾಡಿದರೇ ನಿತ್ಯ 24 ಸಾವಿರ ಕಲ್ಲಿದ್ದಲು ಬೇಕು. ಆದ್ರೀಗ 8 ಘಟಕಗಳ ಪೈಕಿ ಮೂರು ಘಟಕಗಳು ಸ್ಥಗಿತವಾಗಿದೆ. ಹೀಗಾಗಿ ಆರ್​ಟಿಪಿಎಸ್​ನಲ್ಲಿ ಈಗ ನಿತ್ಯ 18 ಸಾವಿರ ಟನ್ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿದೆ.

ವೈಟಿಪಿಎಸ್​ನಲ್ಲಿ 17 ಸಾವಿರ ಕಲ್ಲಿದ್ದಲು ಬಳಕೆ ಮಾಡಲಾಗಿದೆ. ಆದರೆ ಸದ್ಯ ಆರ್​ಟಿಪಿಎಸ್​ನಲ್ಲಿ 50.3 ಸಾವಿರ ಟನ್ ಕಲ್ಲಿದ್ದಲು ಸ್ಟಾಕ್ ಇದೆ. ವೈಟಿಪಿಎಸ್​ನಲ್ಲಿ 52.5 ಸಾವಿರ ಟನ್ ಸ್ಟಾಕ್‌ ಇದೆ. ಕೆಲವೇ ದಿನಗಳಲ್ಲಿ ಭೀಕರ ಕಲ್ಲಿದ್ದಲು ಬರ ಎದುರಿಸುವ ಸಾಧ್ಯತೆ ಇದೆ. ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ)ಯಿಂದ ಕಲ್ಲಿದ್ದಲು ಕಂಪನಿಗಳಿಗೆ ಸಾವಿರಾರು ಕೋಟಿ ರೂ.ಬಾಕಿ ಉಳಿಸಿಕೊಂಡಿರುವ ಆರೋಪ ಇದ್ದು, ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಕರ್ನಾಟಕಕ್ಕೆ ಕಲ್ಲಿದ್ದಲು ಕೊರತೆ ಆಗದು, ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆಯಿಲ್ಲ: ಸುನಿಲ್ ಕುಮಾರ್

ಕೈ ಕಟ್ಟಿ ಕರೆದುಕೊಂಡು ಹೋಗಿ ವಿದ್ಯುತ್​ ಶಾಕ್​ ಕೊಟ್ಟರು-ಚೀನಾ ಸೈನಿಕರ ಕೃತ್ಯ ಬಿಚ್ಚಿಟ್ಟ ಅರುಣಾಚಲ ಪ್ರದೇಶದ ಹುಡುಗ

Published On - 3:26 pm, Wed, 23 March 22