ಕಲ್ಲಿದ್ದಲು ಕೊರತೆಯಿಂದ ಆರ್‌ಟಿಪಿಎಸ್‌ನ ಮತ್ತೊಂದು ಘಟಕ ಬಂದ್; 8 ನೇ ಘಟಕದಿಂದ ವಿದ್ಯುತ್ ಉತ್ಪಾದನೆ ಸ್ಥಗಿತ
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ನಾಲ್ಕು ಘಟಕಗಳು ಬಂದ್ ಆಗಿದೆ. ನಿನ್ನೆಯಿಂದ (ಅಕ್ಟೋಬರ್ 10) ಮತ್ತೊಂದು ಘಟಕ ಬಂದ್ ಆಗಿದ್ದು, ಒಟ್ಟು ಐದು ಆರ್‌ಟಿಪಿಎಸ್‌ನ ಘಟಕ ಈಗ ಸ್ಥಗಿತವಾಗಿದೆ. ಸದ್ಯ ಕೇವಲ ಮೂರು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ರಾಯಚೂರು: ಕಲ್ಲಿದ್ದಲು ಕೊರತೆಯಿಂದ ಆರ್‌ಟಿಪಿಎಸ್‌ನ ಮತ್ತೊಂದು ಘಟಕ ಬಂದ್ ಆಗಿದೆ. ಆರ್‌ಟಿಪಿಎಸ್‌ನ (ರಾಯಚೂರು ಥರ್ಮಲ್ ಪ್ಲ್ಯಾಂಟ್ ಸ್ಟೇಷನ್) 8ನೇ ಘಟಕದಿಂದ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ. ಪರಿಣಾಮ 3 ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಆರ್‌ಟಿಪಿಎಸ್ ಅಧಿಕಾರಿಗಳು ಮಾತ್ರ ಕಲ್ಲಿದ್ದಲು ಕೊರತೆ ಇಲ್ಲ. 8ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿದೆ ಎಂದು ಹೇಳುತ್ತಿದ್ದಾರೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ನಾಲ್ಕು ಘಟಕಗಳು ಬಂದ್ ಆಗಿದೆ. ನಿನ್ನೆಯಿಂದ (ಅಕ್ಟೋಬರ್ 10) ಮತ್ತೊಂದು ಘಟಕ ಬಂದ್ ಆಗಿದ್ದು, ಒಟ್ಟು ಐದು ಆರ್‌ಟಿಪಿಎಸ್‌ನ ಘಟಕ ಈಗ ಸ್ಥಗಿತವಾಗಿದೆ. ಸದ್ಯ ಕೇವಲ ಮೂರು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಲ್ಲಿದ್ದಲು ಕೊರತೆ ಇದ್ದರೂ, ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜ್ಯಕ್ಕೆ ನಮ್ಮ ರಾಯಚೂರು ಆರ್‌ಟಿಪಿಎಸ್ ಶಾಖೋತ್ಪನ್ನ ಘಟಕದಿಂದ ಶೇಕಡಾ 45 ರಷ್ಟು ವಿದ್ಯುತ್ ಪೂರೈಕೆ ಆಗುತ್ತಿತ್ತು. ಆದರೆ ಇದೀಗ ನಗರದಲ್ಲಿ ವಿದ್ಯುತ್ ಕಣ್ಣಾ ಮಚ್ಚಾಲೆ ಆಡುತ್ತಿದೆ. ಆರ್‌ಟಿಪಿಎಸ್ ಶಾಖೋತ್ಪನ್ನ ಘಟಕದಲ್ಲಿ ಕಲ್ಲಿದ್ದಲು ಕೊರತೆ ಇದಕ್ಕೆ ಕಾರಣ. ಸರ್ಕಾರ ಆರ್‌ಟಿಪಿಎಸ್ ಹಾಗೂ ವೈತಿಪಿಎಸ್ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಬೇರೆ ಬೇರೆ ಕಂಪನಿಗಳಿಂದ ವಿದ್ಯುತ್ ಸರಬರಾಜು ಮಾಡಿಕೊಂಡು ಅಲ್ಲೂ ಭ್ರಷ್ಟಾಚಾರ ಮಾಡಿವೆ. ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡದೆ ಹೋದರೆ ಇಡೀ ಕರ್ನಾಟಕ ಕತ್ತಲಲ್ಲಿ ಮುಳಗಲಿದೆ ಎಂದು ಹೋರಾಟಗಾರರಾದ ರಜಾಕ್ ಉಸ್ತಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಆರ್‌ಟಿಪಿಎಸ್ ಘಟಕದಲ್ಲಿನ 7 ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತ ; ಬೇಡಿಕೆ ಹೆಚ್ಚಾದರೂ ಪೂರೈಕೆಗೆ ಹಿಂದೇಟು
ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ: ಶಕ್ತಿನಗರ, YTPSನಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭ
Published On - 9:04 am, Mon, 11 October 21