Bharat Jodo Padyatra: ರಾಹುಲ್ ಗಾಂಧಿ ಕಾರ್ಯಕ್ರಮದ ವೇದಿಕೆ ಮೇಲೆ ಸ್ಥಳ ಸಿಗದೆ ಹಿಂದಿರುಗಿದ ನಟಿ ರಮ್ಯಾ

| Updated By: ಆಯೇಷಾ ಬಾನು

Updated on: Oct 23, 2022 | 3:45 PM

ಪಾದಯಾತ್ರೆ ಬಳಿಕ ಕಾರ್ಯಕ್ರಮದ ವೇದಿಕೆ ಮೇಲೆ ಬರಲು ನಟಿ ರಮ್ಯಾ ಇಚ್ಚಿಸಿದ್ದು ಭದ್ರತೆ ಸಮ್ಯಸ್ಯೆಯಿಂದಾಗಿ ರಮ್ಯಾರಿಗೆ ವೇದಿಕೆ ಮೇಲೆ ಅವಕಾಶ ನಿರಾಕರಿಸಲಾಗಿದೆ.ಇದರಿಂದ ಮನನೊಂದ ರಮ್ಯಾ ಸ್ಥಳದಿಂದ ಹಿಂದಿರುಗಿದರು.

Bharat Jodo Padyatra: ರಾಹುಲ್ ಗಾಂಧಿ ಕಾರ್ಯಕ್ರಮದ ವೇದಿಕೆ ಮೇಲೆ ಸ್ಥಳ ಸಿಗದೆ ಹಿಂದಿರುಗಿದ ನಟಿ ರಮ್ಯಾ
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ನಟಿ ರಮ್ಯಾ
Follow us on

ರಾಯಚೂರು: ರಾಯಚೂರಿನಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಮಾಜಿ ಸಂಸದೆ, ನಟಿ ರಮ್ಯಾ(Actress Ramya) ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ನಿನ್ನೆ ರಾಯಚೂರು ನಗರಕ್ಕೆ ಯಾತ್ರೆ ಕಾಲಿಡುತ್ತಿದ್ದಂತೆ, ನಟಿ ರಮ್ಯಾ ರಾಹುಲ್ ಗಾಂಧಿ(Rahul Gandhi) ಟೀಂ ಸೇರಿಕೊಂಡರು. ಈ ವೇಳೆ ಡಿಕೆ ಶಿವಕುಮಾರ್, ರಮ್ಯಾರ ಕೆನ್ನೆಗೆ ಖುಷಿಯಿಂದ ತಟ್ಟಿ ಬರಮಾಡಿಕೊಂಡರು. ಆಗ ರಾಹುಲ್ ಗಾಂಧಿ ಕೂಡ ರಮ್ಯಾರನ್ನ ಸ್ವಾಗತಿಸಿದರು. ಬಳಿಕ ರಮ್ಯಾ, ರಾಹುಲ್ ಗಾಂಧಿ ಡಿಕೆಶಿ, ಸಿದ್ದರಾಮಯ್ಯ ಜೊತೆ ಸುಮಾರು‌ ಒಂದು ಕಿ.ಮಿ ಹೆಚ್ಚೆ ಹಾಕಿದರು‌. ಆದ್ರೆ ಪಾದಯಾತ್ರೆ ಬಳಿಕ ಬಸವೇಶ್ವರ ಸರ್ಕಲ್​​ ಬಳಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ರಮ್ಯಾರಿಗೆ ಜಾಗ ನೀಡದ ಹಿನ್ನೆಲೆ ನಟಿ ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ.

ರಾಯಚೂರು ನಗರ ಬಸವೇಶ್ವರ ಸರ್ಕಲ್ ಬಳಿಯ ಮೈದಾನದಲ್ಲಿ ಕಾರ್ನರ್ ಸಂವಾದವಿತ್ತು. ಅಲ್ಲಿ ಸಹಸ್ರಾರು ಜನ ನೆರೆದಿದ್ದರು. ಕಾರ್ಯಕ್ರಮದ ವೇದಿಕೆ ಮೇಲೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು. ಈ ವೇಳೆ ನಟಿ ರಮ್ಯಾ ವೇದಿಕೆ ಮೇಲೆ ಆಗಮಿಸಲು ಮುಂದಾಗಿದ್ದಾಗ, ದೊಡ್ಡ ಹೈಡ್ರಾಮಾ ನಡೆದಿದೆ. ರಾಹುಲ್ ಗಾಂಧಿಗೆ ಉನ್ನತ ಪಟ್ಟದ ಭದ್ರತೆ ಇರೋದ್ರಿಂದ, ಗೆಸ್ಟ್ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶವಿತ್ತು. ಆಗ ನಟಿ ರಮ್ಯಾರ ಹೆಸರು ಲಿಸ್ಟ್ ನಲ್ಲಿ ಇರಲಿಲ್ಲವಂತೆ. ರಮ್ಯಾ ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಚಿವರು ಹೊಡೆಯಲಿಲ್ಲ ಎಂದ ಮಹಿಳೆ, ಆದ್ರೂ ಸೋಮಣ್ಣ ಕ್ಷಮೆಯಾಚಿಸಿದ್ದು ಏಕೆ?

ಆದರೆ, ಭದ್ರತಾ ಸಿಬ್ಬಂದಿ ಮಾತ್ರ ನಟಿ ರಮ್ಯಾಗೆ ಅವಕಾಶ ನೀಡಲಿಲ್ಲ. ಆಗ ಕೆರಳಿದ ರಮ್ಯಾ, ರಾಯಚೂರಿನ ಸ್ಥಳೀಯ ಮುಖಂಡರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಅನ್ನೊ ಆರೋಪಗಳು ಕೇಳಿ ಬಂದಿವೆ. ಇದಾದ ಬಳಿಕ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಟಿ ರಮ್ಯಾ ವೇದಿಕೆ ಮೇಲೆ ಅವಕಾಶ ಸಿಗದ ಹಿನ್ನೆಲೆ, ಬೇಸರಿಂದ ಅಲ್ಲಿಂದ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:45 pm, Sun, 23 October 22