ರಾಯಚೂರು: ಮಕ್ಕಳು ಇಷ್ಟಪಟ್ಟು ತಿನ್ನುವ ಚಾಕೊಲೇಟ್ನಲ್ಲಿ ಗಾಂಜಾ ಮಿಶ್ರಣ(Ganja Mixed Chocolate) ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಗಾಂಜಾ ಮಿಶ್ರಿತ ಚಾಕೊಲೇಟ್ ದಂಧೆ ಆರೋಪ ಹಿನ್ನೆಲೆ ರಾಯಚೂರು ನಗರದ 8 ಕಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾನ್ ಶಾಪ್, ಕಿರಾಣಿ ಸ್ಟೋರ್, ಬೇಕರಿ ಸೇರಿ 8 ಕಡೆ ರೇಡ್ ಮಾಡಿದ್ದಾರೆ. ಆದ್ರೆ ಸರ್ಚ್ ವಾರಂಟ್ ಇಲ್ಲದೇ ಶೋಧ ನಡೆಸಿದ್ದಾರೆಂದು ಅಂಗಡಿ ಮಾಲೀಕರು ಹಾಗೂ ಅಬಕಾರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ನಗರದಲ್ಲಿ ಚಾಕೊಲೇಟ್ ಮಾದರಿಯಲ್ಲೇ ಗಾಂಜಾ ಮಿಶ್ರಿತ ಚಾಕೊಲೇಟ್ ತಯಾರಿ ಮಾಡಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ. ಹೀಗಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಆಪರೇಷನ್ ನಡೆಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಯಾದಗಿರಿಯಲ್ಲಿ ಇದೇ ಮಾದರಿಯ ಗಾಂಜಾ ಚಾಕೊಲೇಟ್ ಸೀಜ್ ಮಾಡಲಾಗಿತ್ತು. ಈ ಹಿನ್ನೆಲೆ ರಾಯಚೂರಿನಲ್ಲಿ ದಂಧೆಕೋರರು ಅಲರ್ಟ್ ಆಗಿದ್ದಾರೆ. ಹಾಗೂ ಸರ್ಚ್ ವೇಳೆ ಅಂಗಡಿ ಮಾಲೀಕರಿಗೂ ಅಬಕಾರಿ ಸಿಬ್ಬಂದಿ ನಡುವೆ ಟಾಕ್ ವಾರ್ ನಡೆದಿದೆ. ತಮ್ಮ ಸಮುದಾಯ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು 1 ವಾರದೊಳಗೆ ಸರ್ವಪಕ್ಷ ಸಭೆ; ಸಿಎಂ ಬೊಮ್ಮಾಯಿ ಭರವಸೆ
ನಮಗೆ ಸಮುದಾಯ ಟಾರ್ಗೆಟ್ ಅಲ್ಲ, ದಂಧೆ ಟಾರ್ಗೆಟ್ ಎಂದು ಅಬಕಾರಿ ಟೀಂ ವ್ಯಾಪಾರಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಮತ್ತೊಂದು ಕಡೆ ಸಭೆ, ಸಮಾರಂಭಗಳಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ಗಳೇ ಹೈಲೈಟ್ ಅನ್ನೊ ಮಾಹಿತಿ ಸಿಕ್ಕಿದೆ. ಸಾಜೆಟ್, ಪಾಕೆಟ್ ಗಳಲ್ಲಿ ಗಾಂಜಾ ಮಾತ್ರೆಯೂ ಮಾರಾಟ ಮಾಡಲಾಗುತ್ತಿದೆಯಂತೆ. ವಿವಿಧ ಶಾಪ್ ಗಳಲ್ಲಿ ಒಂದು ಚಾಕಲೇಟ್ ಗೆ 50-60 ರೂ. ಬೆಲೆ ನಿಗದಿ ಮಾಡಲಾಗಿದೆಯಂತೆ. ಅಬಕಾರಿ ಇಲಾಖೆ ಕಳೆದೊಂದು ತಿಂಗಳಿನಿಂದ ದಂಧೆ ಮಾನಿಟರ್ ಮಾಡುತ್ತಿದ್ದಾರೆ. ಆದ್ರೆ ದಂಧೆಕೋರರು ತಪ್ಪಿಸಿಕೊಳ್ಳುತ್ತಿದ್ದಾರೆ. ಸದ್ಯ ಎಂಟು ಕಡೆ ದಾಳಿ ನಡೆಸಿದ್ದು ಅಬಕಾರಿ ಅಧಿಕಾರಿಗಳು ಬರಿಗೈಲಿ ವಾಪಸ್ಸಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ