ಆಟೋ ಚಾಲಕರ ತಲೆ ಮೇಲೆ ಬಿದ್ದ ಸ್ಟ್ರೀಟ್ ಲೈಟ್ ರಿಂಗ್.. ಮುಂದೇನಾಯ್ತು?

| Updated By: ಆಯೇಷಾ ಬಾನು

Updated on: Jun 15, 2020 | 4:25 PM

ರಾಯಚೂರು: ಆಟೋ ಚಾಲಕರಿಬ್ಬರ ಮೇಲೆ ಬೀದಿ ದೀಪದ ರಿಂಗ್​ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಐಬಿ ಕ್ರಾಸ್​ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರೂ ಆಟೋ ಚಾಲಕರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ. ಸುಮಾರು 30 ಅಡಿ ಎತ್ತರದಲ್ಲಿದ್ದ ಕಬ್ಬಿಣದ ರಿಂಗ್ ರಸ್ತೆಯ ವೃತ್ತದ ಬಳಿ ಇದ್ದ 4 ಬೀದಿ ದೀಪ​ಗಳ ಮಧ್ಯೆ ಅಳವಡಿಸಲಾಗಿತ್ತು. ಆದರೆ ಬಹಳಷ್ಟು ದಿನಗಳಿಂದ ಮಳೆ ಮತ್ತು […]

ಆಟೋ ಚಾಲಕರ ತಲೆ ಮೇಲೆ ಬಿದ್ದ ಸ್ಟ್ರೀಟ್ ಲೈಟ್ ರಿಂಗ್.. ಮುಂದೇನಾಯ್ತು?
Follow us on

ರಾಯಚೂರು: ಆಟೋ ಚಾಲಕರಿಬ್ಬರ ಮೇಲೆ ಬೀದಿ ದೀಪದ ರಿಂಗ್​ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಐಬಿ ಕ್ರಾಸ್​ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರೂ ಆಟೋ ಚಾಲಕರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ.

ಸುಮಾರು 30 ಅಡಿ ಎತ್ತರದಲ್ಲಿದ್ದ ಕಬ್ಬಿಣದ ರಿಂಗ್ ರಸ್ತೆಯ ವೃತ್ತದ ಬಳಿ ಇದ್ದ 4 ಬೀದಿ ದೀಪ​ಗಳ ಮಧ್ಯೆ ಅಳವಡಿಸಲಾಗಿತ್ತು. ಆದರೆ ಬಹಳಷ್ಟು ದಿನಗಳಿಂದ ಮಳೆ ಮತ್ತು ಗಾಳಿಗೆ ಅದು ತುಕ್ಕು ಹಿಡಿದಿತ್ತು. ಹಾಗಾಗಿ ಇಂದು ಕಡಿದು ಬಿದ್ದಿದೆ ಎಂದು ಸ್ಥಳೀಯರು ಹೇಳ್ತಿದ್ದಾರೆ. ಜೊತೆಗೆ ಇದರ ಬಗ್ಗೆ ಅರಿವಿದ್ದರೂ ಜೆಸ್ಕಾಂ ಸಿಬ್ಬಂದಿ ಅದನ್ನೂ ತಕ್ಷಣವೇ ಬದಲಾಯಿಸಿದೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವು ಸಹ ಹೊರಹಾಕಿದ್ದಾರೆ.

Published On - 3:12 pm, Mon, 15 June 20