Raichur News: ಕಲುಷಿತ ನೀರು ಸೇವಿಸಿದ್ದ ಬಾಲಕ ಸಾವು; 20ಕ್ಕೂ ಹೆಚ್ಚು ಜನ ಅಸ್ವಸ್ಥ
ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ. ಹನುಮೇಶ್(5) ಮೃತ ಬಾಲಕ.
ರಾಯಚೂರು: ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ದೇವದುರ್ಗ (Devadurga) ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ. ಹನುಮೇಶ್(5) ಮೃತ ಬಾಲಕ. ಇನ್ನು ಅಸ್ವಸ್ಥರಾದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೌದು ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕಳೆದ ಎರಡು ದಿನಗಳಿಂದ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಳ್ಳುತ್ತಿದ್ದು, ಜಿಲ್ಲೆಯ ಅರಕೇರಾ, ದೇವದುರ್ಗ, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನು ಈ ಘಟನೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ.
ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ 42 ಜನ ಅಸ್ವಸ್ಥ
ಹಾವೇರಿ: ಇದೇ ಮೇ. 24 ರಂದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಆಸ್ಪತ್ರೆ ಫುಲ್ ಆಗಿ ಹೋಗಿತ್ತು. ಎಲ್ಲಿ ನೋಡಿದ್ರೂ ನರಳಾಡುತ್ತಾ ಮಲಗಿರೋ ಜನ. ಇದಕ್ಕೆಲ್ಲ ಕಾರಣ ಮದುವೆ ಆರತಕ್ಷತೆ ಊಟ ಎನ್ನಲಾಗುತ್ತಿತ್ತು. ಮದುವೆ ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ 42 ಜನ ಅಸ್ವಸ್ಥರಾಗಿ ಆಸ್ಪತ್ರಗೆ ದಾಖಲಾಗಿದ್ದರು. ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಚಪ್ರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಳೆದ ಸೋಮವಾರ ಹರಿಹರ ತಾಲೂಕು ವಾಸನ ಎಂಬ ಗ್ರಾಮದಲ್ಲಿ ಮದುವೆ ನಡೆದಿತ್ತು. ಚಪ್ರದಹಳ್ಳಿ ಗ್ರಾಮದ ಶಂಕರಪ್ಪ ಹಿತ್ತಲಮನಿ ಎಂಬುವವರ ಪುತ್ರಿಯ ಮದುವೆ ಮುಗಿಸಿಕೊಂಡು ಸ್ವ ಗ್ರಾಮ ಚಪ್ರದಹಳ್ಳಿಗೆ ವಾಪಾಸಾಗಿದ್ದ ಗ್ರಾಮಸ್ಥರು ವಧುವಿನ ಮನೆಯಲ್ಲಿ ನಡೆದ ಆರಕ್ಷತೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮಕ್ಕೆ ಬಂದವರೆಲ್ಲ ಭರ್ಜರಿ ಊಟ ಸವಿದಿದ್ರು. ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಜನರಿಗೆ ನಿನ್ನೆ(ಮೇ.23) ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ:Snakebite: ಸಾವು ಯಾವಾಗ, ಹೇಗೆ, ಯಾರಿಗೆ ಬೇಕಾದರೂ ಬರಬಹುದು! ಹಾವು ಕಚ್ಚಿ ಹೆಡ್ ಕಾನ್ಸಟೇಬಲ್ ಸಾವು
ಹೌದು ಫುಡ್ ಪಾಯ್ಸನ್ ಉಂಟಾಗಿ ವಾಂತಿ ಬೇಧಿ ಕಾಣಿಸಿಕೊಂಡು 42 ಜನ ತೀವ್ರ ಅಸ್ವಸ್ಥಗೊಂಡಿದ್ರು. ತಕ್ಷಣ ಅಸ್ವಸ್ಥಗೊಂಡವರ ಕುಟುಂಬಸ್ಥರು ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ, ರಾತ್ರಿ ಸೂಕ್ತ ಚಿಕಿತ್ಸೆಯೇ ದೊರೆತಿಲ್ಲ. ಆಸ್ಪತ್ರೆಯಲ್ಲಿದ್ದ ಒಬ್ಬರೇ ನರ್ಸ್ ತಮ್ಮ ಕೈಲಾದಷ್ಟು ಚಿಕಿತ್ಸೆ ಕೊಟ್ಟಿದ್ದಾರೆ. ಈ ವೇಳೆ ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಾ ಅವರಿಗೆ ಕರೆ ಮಾಡಿದ್ರೂ ಸ್ಪಂದಿಸಿಲ್ಲ. ಜನರ ಒತ್ತಾಯದ ಮೇರೆಗೆ ರಟ್ಟಿಹಳ್ಳಿ ಪಕ್ಕದ ಹಳ್ಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡ್ತಿವಿ ಅಂದರೂ ರಟ್ಟಿಹಳ್ಳಿ ವೈದ್ಯೆ ಡಾ. ಪುಷ್ಪ ನಿರಾಕರಿಸಿದ್ದಾರೆ.ಇತ್ತ ವಿಷಯ ಗೊತ್ತಿದ್ದರೂ ಇಂದು(ಮೇ.24)ಬೆಳಿಗ್ಗೆ 11 ಗಂಟೆ ಆದ್ರು, ಚಿಕಿತ್ಸೆಗೆ ಬಾರದೇ ಡಾ.ಪುಷ್ಪ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಹಿನ್ನಲೆ ಆಕೆಯನ್ನ ಕೆಲಸದಿಂದ ವಜಾಗೊಳಿಸಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ