ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

| Updated By: ಆಯೇಷಾ ಬಾನು

Updated on: Dec 26, 2021 | 1:27 PM

ಮತಾಂತರ ತಿದ್ದುಪಡಿ ಬಿಲ್‌ ಮೇಲಿನ ಚರ್ಚೆ ಮಾಡುವ ವೇಳೆ, ಹಣದ ಆಮಿಷಕ್ಕೆ SC, STಯವರು ಮತಾಂತರವಾಗ್ತಿದ್ದಾರೆ ಎಂದು ಸದನದಲ್ಲಿ ಸ್ಪೀಕರ್, ಗೃಹ ಸಚಿವರು ನೀಡಿದ ಹೇಳಿಕೆ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ. ಆದ್ರೆ ಆರ್.ಮಾನಸಯ್ಯ ನೀಡಿದ ದೂರಿಗೆ ಪೊಲೀಸರಿಂದ ಹಿಂಬರಹ ನೀಡಲಾಗಿದೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು
ವಿಧಾನಸಭಾ ಕಲಾಪ
Follow us on

ರಾಯಚೂರು: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮತಾಂತರ ತಿದ್ದುಪಡಿ ಬಿಲ್‌ ಮೇಲಿನ ಚರ್ಚೆ ಮಾಡುವ ವೇಳೆ, ಹಣದ ಆಮಿಷಕ್ಕೆ SC, STಯವರು ಮತಾಂತರವಾಗ್ತಿದ್ದಾರೆ ಎಂದು ಸದನದಲ್ಲಿ ಸ್ಪೀಕರ್, ಗೃಹ ಸಚಿವರು ನೀಡಿದ ಹೇಳಿಕೆ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ. ಆದ್ರೆ ಆರ್.ಮಾನಸಯ್ಯ ನೀಡಿದ ದೂರಿಗೆ ಪೊಲೀಸರಿಂದ ಹಿಂಬರಹ ನೀಡಲಾಗಿದೆ. ದೂರಿನಲ್ಲಿ ನೀಡಿದ ಅಂಶಗಳು ಶಾಸಕಾಂಗ ಸಭೆಯಲ್ಲಿ ನಡೆದ ಕಾರ್ಯಕಲಾಪಗಳದ್ದು ದೂರು ನಮ್ಮ ಕಾರ್ಯವ್ಯಾಪ್ತಿಗೆ ಬರಲ್ಲವೆಂದು ಪೊಲೀಸರು ಹಿಂಬರಹ ನೀಡಿದ್ದಾರೆ. ಕಾಯ್ದೆಯಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದ ಹೆಸರು ಪ್ರಸ್ತಾಪಿಸಿ ಅವಮಾನ ಮಾಡಿದ್ದಾರೆ. ಸ್ಪೀಕರ್ ಮತ್ತು ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆರ್.ಮಾನಸಯ್ಯ ದೂರು ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ನಮ್ಮ ಹಿಡನ್ ಅಲ್ಲ, ಓಪನ್ ಅಜೆಂಡಾ: ಆರಗ ಜ್ಞಾನೇಂದ್ರ
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎನ್ನುವುದು ಹಿಡನ್ ಅಜೆಂಡಾ ಅಲ್ಲ, ಓಪನ್ ಅಜೆಂಡಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬಹುಚರ್ಚಿತ ಮತಾಂತರ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವಿರೋಧಿಗಳು ಹಲವು ಟೀಕೆ-ಟಿಪ್ಪಣಿ ಮಾಡಿದ್ದಾರೆ. ಇದು ಆರ್​ಎಸ್​ಎಸ್ ಕೂಸು, ಹಿಡನ್ ಅಜೆಂಡಾ ಎಂದೆಲ್ಲಾ ಹೇಳಿದ್ದಾರೆ. ಆದರೆ ಇದರಲ್ಲಿ ಹಿಡನ್ ಅಜೆಂಡಾ ಏನೂ ಇಲ್ಲ, ಇದು ಓಪನ್ ಅಜೆಂಡಾ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ ಅಂದಿದ್ವಿ, ಕಾಯ್ದೆ ತಂದಿದ್ದೇವೆ. ಒತ್ತಾಯ, ಆಮಿಷದ ಮೇಲೆ ಮತಾಂತರ ಮಾಡುವಂತಿಲ್ಲ ಎಂಬುದು ನಮ್ಮ ನಿಲುವು. ಎಂಟು ರಾಜ್ಯಗಳಲ್ಲಿ ಈಗಾಗಲೇ ಈ ಕಾಯ್ದೆ ಜಾರಿಯಲ್ಲಿದೆ. 9ನೆಯ ರಾಜ್ಯವಾಗಿ ಇದೀಗ ನಮ್ಮ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದೆ ಎಂದು ತಿಳಿಸಿದರು.

ಯಾವುದೇ ತನಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಅವಕಾಶವಿದೆ. ಆದರೆ ಒತ್ತಾಯದಿಂದ ಮತಾಂತರ ಮಾಡುವಂತಿಲ್ಲ. ಕೆಲವರು ಅವಕಾಶವನ್ನು ದುರುಪಯೋಗ ಮಾಡಿಕೊಂಡು ಮತಾಂತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಒತ್ತಾಯ, ಅಮಿಷದ ಮೇಲೆ ಮತಾಂತರ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮತಾಂತರವಾದರೆ ಮೂಲ ಸೌಲಭ್ಯಗಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಸ್ವಯಂ ಮತಾಂತರ ಆದವರು 30 ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ಜಿಲ್ಲಾಧಿಕಾರಿಗಳು ಪ್ರಚಾರ ಮಾಡ್ತಾರೆ ಹಾಗೂ ತನಿಖೆ ಮಾಡ್ತಾರೆ ಒತ್ತಡದಿಂದ ಆಗಿದ್ರೆ ಕ್ರಿಮಿನಲ್ ಕೇಸ್ ಬುಕ್ ಮಾಡಲು ತಿಳಿಸುತ್ತಾರೆ. ಒತ್ತಾಯ ಇಲ್ಲ ಅಂದ್ರೆ ಬೇರೆ ಇಲಾಖೆಗಳಿಗೆ ಅಗತ್ಯ ಕ್ರಮ ಜರುಗಿಸಲು ಸೂಚಿಸುತ್ತಾರೆ ಎಂದರು.

ಬುಡಕಟ್ಟು ಜನಾಂಗಗಳಿಗೆ ಸೇರಿದವರು ಮತಾಂತರ ಆದರೆ ಮೂಲ ಸೌಲಭ್ಯ ಕಳೆದುಕೊಳ್ಳಬೇಕಾಗುತ್ತದೆ. ಇದು ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ. ಅಮಿಷ ಅಥವಾ ಬಲವಂತದಲ್ಲಿ ಮತಾಂತರ ಆಗಬಾರದು. ನಮ್ಮ ವಿಧೇಯಕವು ಯಾವ ಧರ್ಮದ ವಿರುದ್ಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ ಸಹಕಾರವಿರುವುದು ಸತ್ಯ; ವಿಪಕ್ಷಗಳಿಗೆ ಯಡಿಯೂರಪ್ಪ ಪ್ರತ್ಯುತ್ತರ