ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ ಸಹಕಾರವಿರುವುದು ಸತ್ಯ; ವಿಪಕ್ಷಗಳಿಗೆ ಯಡಿಯೂರಪ್ಪ ಪ್ರತ್ಯುತ್ತರ

ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ ಸಹಕಾರವಿರುವುದು ಸತ್ಯ; ವಿಪಕ್ಷಗಳಿಗೆ ಯಡಿಯೂರಪ್ಪ ಪ್ರತ್ಯುತ್ತರ
ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

Karnataka Anti Conversion Bill 2021: ನಾವು ಒಗ್ಗಟ್ಟಾಗಿ ಮತಾಂತರ ನಿಷೇಧ ಬಿಲ್​ ಪಾಸ್ ಮಾಡಿದ್ದೇವೆ. ನಾನು ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿಯೂ ಆರ್​ಎಸ್​ಎಸ್ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಮ್ಮೆಯಿಂದ ಹೇಳಿದರು.

TV9kannada Web Team

| Edited By: Sushma Chakre

Dec 23, 2021 | 5:49 PM

ಬೆಳಗಾವಿ: ವಿರೋಧ ಪಕ್ಷಗಳ ವಿರೋಧದ ನಡುವೆಯೇ ವಿಧಾನಸಭಾ ಅಧಿವೇಶನದಲ್ಲಿ (Karnataka Assembly Session) ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಮತಾಂತರ ನಿಷೇಧ ಮಸೂದೆ (Anti Conversion Act) ಅಂಗೀಕಾರದ ನಂತರ ಸುವರ್ಣಸೌಧದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa), ವಿಧೇಯಕವನ್ನು ವಿರೋಧಿಸಿದವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. ಹಾಗೇ, ಈ ಮಸೂದೆ ಆರ್​ಎಸ್​ಎಸ್​ನ (RSS) ಕೂಸು ಎಂದು ಟೀಕಿಸಿರುವ ಕಾಂಗ್ರೆಸ್​ಗೆ ಪ್ರತ್ಯುತ್ತರ ನೀಡಿರುವ ಅವರು, ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ನ ಸಹಕಾರವಿದೆ ಎಂಬುದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ ಎಂದಿದ್ದಾರೆ.

ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಈ ವಿಧೇಯಕಕ್ಕೆ ಆರ್​ಎಸ್​ಎಸ್​ನವರ ಸಹಕಾರವೂ ಇದೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ವಿಧೇಯಕವನ್ನು ವಿರೋಧಿಸಿದವರಿಗೆ ಜನರು, ಸ್ವಾಮೀಜಿಗಳು ತಕ್ಕ ಪಾಠ ಕಲಿಸಬೇಕಿದೆ. ನಾವು ಒಗ್ಗಟ್ಟಾಗಿ ಮತಾಂತರ ನಿಷೇಧ ಬಿಲ್​ ಪಾಸ್ ಮಾಡಿದ್ದೇವೆ. ನಾನು ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿಯೂ ಆರ್​ಎಸ್​ಎಸ್ ಎಂದು ಹೆಮ್ಮೆಯಿಂದ ಹೇಳಿದರು.

ಆರ್​ಎಸ್​ಎಸ್​ನಿಂದ ಬಂದವರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಮತಾಂತರ ನಿಷೇಧ ವಿಧೇಯಕಕ್ಕೆ ಆರೆಸ್ಸೆಸ್​ ಸಹಕಾರವಿದೆ. ಇದರಲ್ಲಿ ಮುಚ್ಚುಮರೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದಲ್ಲಿ ಚರ್ಚೆ ನಡೆಸುವಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಮಾತನಾಡಿದ್ದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತ್ತು. ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್​. ಈಶ್ವರಪ್ಪ, ‘ನಾವೆಲ್ಲರೂ ಆರ್​ಎಸ್​ಎಸ್, ದೇಶಭಕ್ತಿಯ ಸಂಸ್ಕಾರ ಪಡೆದವರು​’ ಎಂದು ಘೋಷಿಸಿದ್ದಾರೆ. ಸಚಿವ ಈಶ್ವರಪ್ಪ ಅವರ ಮಾತಿಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗದ್ದಲದ ಮಧ್ಯೆಯೂ ಈಶ್ವರಪ್ಪ ಆರ್ಭಟ ಮುಂದುವರಿಸಿದರು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಎದುರು ನಿಂತು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಆರ್​ಎಸ್​ಎಸ್​ನವರ ಕೂಸು; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

Karnataka Anti Conversion Bill 2021: ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

Follow us on

Related Stories

Most Read Stories

Click on your DTH Provider to Add TV9 Kannada