Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂತರ ನಿಷೇಧ ಕಾಯ್ದೆ ನಮ್ಮ ಹಿಡನ್ ಅಲ್ಲ, ಓಪನ್ ಅಜೆಂಡಾ: ಆರಗ ಜ್ಞಾನೇಂದ್ರ

ಬುಡಕಟ್ಟು ಜನಾಂಗಗಳಿಗೆ ಸೇರಿದವರು ಮತಾಂತರ ಆದರೆ ಮೂಲ ಸೌಲಭ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ನಮ್ಮ ಹಿಡನ್ ಅಲ್ಲ, ಓಪನ್ ಅಜೆಂಡಾ: ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2021 | 6:51 PM

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎನ್ನುವುದು ಹಿಡನ್ ಅಜೆಂಡಾ ಅಲ್ಲ, ಓಪನ್ ಅಜೆಂಡಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬಹುಚರ್ಚಿತ ಮತಾಂತರ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವಿರೋಧಿಗಳು ಹಲವು ಟೀಕೆ-ಟಿಪ್ಪಣಿ ಮಾಡಿದ್ದಾರೆ. ಇದು ಆರ್​ಎಸ್​ಎಸ್ ಕೂಸು, ಹಿಡನ್ ಅಜೆಂಡಾ ಎಂದೆಲ್ಲಾ ಹೇಳಿದ್ದಾರೆ. ಆದರೆ ಇದರಲ್ಲಿ ಹಿಡನ್ ಅಜೆಂಡಾ ಏನೂ ಇಲ್ಲ, ಇದು ಓಪನ್ ಅಜೆಂಡಾ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ ಅಂದಿದ್ವಿ, ಕಾಯ್ದೆ ತಂದಿದ್ದೇವೆ. ಒತ್ತಾಯ, ಆಮಿಷದ ಮೇಲೆ ಮತಾಂತರ ಮಾಡುವಂತಿಲ್ಲ ಎಂಬುದು ನಮ್ಮ ನಿಲುವು. ಎಂಟು ರಾಜ್ಯಗಳಲ್ಲಿ ಈಗಾಗಲೇ ಈ ಕಾಯ್ದೆ ಜಾರಿಯಲ್ಲಿದೆ. 9ನೆಯ ರಾಜ್ಯವಾಗಿ ಇದೀಗ ನಮ್ಮ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದೆ ಎಂದು ತಿಳಿಸಿದರು.

ಯಾವುದೇ ತನಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಅವಕಾಶವಿದೆ. ಆದರೆ ಒತ್ತಾಯದಿಂದ ಮತಾಂತರ ಮಾಡುವಂತಿಲ್ಲ. ಕೆಲವರು ಅವಕಾಶವನ್ನು ದುರುಪಯೋಗ ಮಾಡಿಕೊಂಡು ಮತಾಂತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಒತ್ತಾಯ, ಅಮಿಷದ ಮೇಲೆ ಮತಾಂತರ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮತಾಂತರವಾದರೆ ಮೂಲ ಸೌಲಭ್ಯಗಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಸ್ವಯಂ ಮತಾಂತರ ಆದವರು 30 ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ಜಿಲ್ಲಾಧಿಕಾರಿಗಳು ಪ್ರಚಾರ ಮಾಡ್ತಾರೆ ಹಾಗೂ ತನಿಖೆ ಮಾಡ್ತಾರೆ ಒತ್ತಡದಿಂದ ಆಗಿದ್ರೆ ಕ್ರಿಮಿನಲ್ ಕೇಸ್ ಬುಕ್ ಮಾಡಲು ತಿಳಿಸುತ್ತಾರೆ. ಒತ್ತಾಯ ಇಲ್ಲ ಅಂದ್ರೆ ಬೇರೆ ಇಲಾಖೆಗಳಿಗೆ ಅಗತ್ಯ ಕ್ರಮ ಜರುಗಿಸಲು ಸೂಚಿಸುತ್ತಾರೆ ಎಂದರು.

ಬುಡಕಟ್ಟು ಜನಾಂಗಗಳಿಗೆ ಸೇರಿದವರು ಮತಾಂತರ ಆದರೆ ಮೂಲ ಸೌಲಭ್ಯ ಕಳೆದುಕೊಳ್ಳಬೇಕಾಗುತ್ತದೆ. ಇದು ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ. ಅಮಿಷ ಅಥವಾ ಬಲವಂತದಲ್ಲಿ ಮತಾಂತರ ಆಗಬಾರದು. ನಮ್ಮ ವಿಧೇಯಕವು ಯಾವ ಧರ್ಮದ ವಿರುದ್ಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ ಸಹಕಾರವಿರುವುದು ಸತ್ಯ; ವಿಪಕ್ಷಗಳಿಗೆ ಯಡಿಯೂರಪ್ಪ ಪ್ರತ್ಯುತ್ತರ