Raichur News: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತ; ಅಪ್ರಾಪ್ತೆಗೆ ಮದ್ವೆ ಮಾಡಲು ಖತರ್ನಾಕ್ ಪ್ಲ್ಯಾನ್ ‌ಮಾಡಿದ ಕುಟುಂಬಸ್ಥರು

|

Updated on: May 25, 2023 | 11:53 AM

ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದು ಹಲವು ವರ್ಷಗಳು ಕಳೆದರೂ ರಾಯಚೂರುಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಇನ್ನು ಜೀವಂತವಾಗಿದ್ದು, ಗ್ರಾಮೀಣ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿವೆ. ಅದರಂತೆ ಅದಕ್ಕೆ ಪ್ಲ್ಯಾನ್​ ಮಾಡಿದ್ದ ಕುಟುಂಬದ ವಿರುದ್ದ ದೂರು ದಾಖಲಿಸಿ, ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ.

Raichur News: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತ; ಅಪ್ರಾಪ್ತೆಗೆ ಮದ್ವೆ ಮಾಡಲು ಖತರ್ನಾಕ್ ಪ್ಲ್ಯಾನ್ ‌ಮಾಡಿದ ಕುಟುಂಬಸ್ಥರು
ರಾಯಚೂರು ಬಾಲ್ಯವಿವಾಹ
Follow us on

ರಾಯಚೂರು: ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದು ಹಲವು ವರ್ಷಗಳು ಕಳೆದರೂ ರಾಯಚೂರು(Raichur) ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಇನ್ನು ಜೀವಂತವಾಗಿದ್ದು, ಗ್ರಾಮೀಣ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿವೆ. ಇನ್ನು ಇಲ್ಲೊಂದು ಬಾಲ್ಯ ವಿವಾಹಕ್ಕಾಗಿ ಕುಟುಂಬಸ್ಥರು ಖತರ್ನಾಕ ಪ್ಲ್ಯಾನ್ ‌ಮಾಡಿದ್ದರು. ಹೌದು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದಲ್ಲಿ ಆಧಾರ ಕಾರ್ಡ್​ನಲ್ಲಿ ನಕಲಿ ಜನ್ಮ ದಿನಾಂಕ ಸೃಷ್ಟಿಸಿ, ವಿವಾಹಕ್ಕೆ ಯತ್ನಿಸಿದ್ದರು. ಅಸಲಿ ಅಧಾರ ಕಾರ್ಡ್​ನಂತೆ ಬಾಲಕಿಗೆ ಇನ್ನು 16 ವರ್ಷ ವಯಸ್ಸು. ನಕಲಿ ಆಧಾರ ಕಾರ್ಡ್​ನಲ್ಲಿ ಬಾಲಕಿಗೆ 18 ವರ್ಷವೆಂದು ಮಾರ್ಪಾಟು ಮಾಡಿ ಈ ಕೃತ್ಯಕ್ಕೆ ಕೈ ಹಾಕಿದ್ದರು.

ಅಮಂತ್ರಣ ಪತ್ರಿಕೆಯ ಜೊತೆ ಅದ್ದೂರಿ ಮದುವೆಗೆ ಸಿದ್ದತೆ

ಇನ್ನು ಕಳೆದ ಏಪ್ರಿಲ್​ನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದ 16 ವರ್ಷದ ಬಾಲಕಿಗೆ ಗಲಗ ಗ್ರಾಮದ ಯುವಕ ವಿನೋದ ಕುಮಾರ್ ಎಂಬುವವನ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು. ಇದರ ಜೊತೆಗೆ 4 ಜೋಡಿಯ ಮದುವೆಗೆ ಸಿದ್ದತೆ ನಡೆಸಿದ್ದ ಕುಟುಂಬಸ್ಥರು. ಇಂದು‌ 25-05-2023 ರಂದು, 8-30 ರಿಂದ 9:30 ರ ಶುಭ ಮುಹೂರ್ತದಲ್ಲಿ ಬಾಲ್ಯ ವಿವಾಹ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.

ಇದನ್ನೂ ಓದಿ:ಬಾಲ್ಯವಿವಾಹ ತಡೆ, ಅಸ್ಸಾಂನಾದ್ಯಂತ 1,800 ಮಂದಿ ಬಂಧನ; ಹಿಮಂತ ಬಿಸ್ವಾ ಶರ್ಮಾ

ಅಧಿಕಾರಿಗಳ ಸಮಯಪ್ರಜ್ಞೆಯಿಂದ ಓರ್ವ ಬಾಲಕಿ ರಕ್ಷಣೆ

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪೊಲೀಸರು ಸೇರಿ ಬಾಲ್ಯವಿವಾಹ ನಡೆಯುತ್ತಿದ್ದ ದೇವದುರ್ಗದ ಗಲಗ ಗ್ರಾಮಕ್ಕೆ ಭೇಟಿ ನೀಡಿ. ಬಾಲ್ಯ ವಿವಾಹವನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಬಳಿಕ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನ ರಾಯಚೂರಿನ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಮಾಡಲಾಗಿದೆ.

ಕಾಯಿದೆಯಲ್ಲಿ ಏನಿದೆ?

ಶಿಕ್ಷಣ, ಕಂದಾಯ, ಪಂಚಾಯತ್‌ರಾಜ್, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯು ಬಾಲ್ಯ ವಿವಾಹ ತಡೆಯಲು ಅವುಗಳನ್ನು ಗುರುತಿಸುವುದು, ಕಂಡುಬಂದರೆ ತಕ್ಷಣ ನಿಲ್ಲುಸುವುದು, ಮಕ್ಕಳ ರಕ್ಷಣೆ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ, ಮಕ್ಕಳ ಪುನರ್ವಸತಿ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಕ್ರಮಬದ್ಧ ಕಾರ್ಯ ವಿಧಾನ (ಎಸ್‌ಓಪಿ) ಜಾರಿಗೆ ತರಲಾಗಿದೆ. ಪ್ರತಿ ಬಾಲ್ಯ ವಿವಾಹವು ಅನುರ್ಜಿತವಾಗುತ್ತದೆ.

ಇದನ್ನೂ ಓದಿ:Ibrahim Sutar : ‘ನಾನು ಬಾಲ್ಯವಿವಾಹಿತ, ಘಟಪ್ರಭಾದ ಮರೇಂಬಿ ಕೈಹಿಡಿದಾಗ ನನಗೆ ಬರೀ ಹದಿನಾಲ್ಕು’

ಪ್ರತಿ ಪೊಲೀಸ್ ಅಧಿಕಾರಿ ತನ್ನ ವ್ಯಾಪಿಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ 2 ವರ್ಷವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ. ಕಾಯಿದೆ ತಿದ್ದುಪಡಿ ಬಳಿಕ ಪುರುಷರ ಜೊತೆಗೆ ಮಹಿಳೆಯರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ