ರಾಯಚೂರು: ರಾಯಚೂರನ್ನು (Raichur) ತೆಲಂಗಾಣಕ್ಕೆ (Telangana) ಸೇರಿಸೊ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮಾತನಾಡಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (K Chandrashekar Rao) ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ರಾಯಚೂರಿನಲ್ಲಿ ತಿರುಗೇಟು ನೀಡಿದರು. ತೆಲಂಗಾಣದ ಸಮಸ್ಯೆ ಡೈವರ್ಟ್ ಮಾಡಲು ಈ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಹಿಂದುಳಿದಿದೆ ಅಂತ ಹೋರಾಟ ಮಾಡಿ, ಪ್ರತ್ಯೇಕ ರಾಜ್ಯ ತೆಗೆದುಕೊಂಡಿದ್ದಾರೆ. ಇನ್ನೂ ಅದು ಹಿಂದುಳಿದಿದೆ ಎಂದು ವಾಗ್ದಾಳಿ ಮಾಡಿದರು.
ತೆಲಂಗಾಣ ಹಿಂದುಳಿದಿರುವ ವಿಷಯವನ್ನು ಬಿಟ್ಟು ಈ ಹೇಳಿಕೆ ಕೊಟ್ಟಿದ್ದಾರೆ. ನಾವೂ ರಾಯಚೂರನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ. ನಮ್ಮ ಒಂದಿಂಚು ಜಾಗ ಕೊಡಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಆಚರಿಸೊ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳ ಸಭೆ ನಡೀತಿದೆ. ಅದು ಮುಕ್ತಾಯ ಆದ ಬಳಿಕ ತಿಳಿಸುತ್ತೇನೆ ಎಂದು ಹೇಳಿದರು.
Published On - 3:10 pm, Sat, 27 August 22