ರಾಯಚೂರು ಜಿ.ಪಂ.ನಲ್ಲಿ ಭ್ರಷ್ಟಾಚಾರದ ಕಡತ ನಾಪತ್ತೆ: ಅಧಿಕಾರಿಗಳ ಮೇಲೆ ಅನುಮಾನ
ರಾಯಚೂರು: ಜಿಲ್ಲಾ ಪಂಚಾಯತಿ ಅಂದ್ಮೇಲೆ ಆ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಅಷ್ಟೂ ಮಾಹಿತಿ ಇರುತ್ತೆ. ಆದ್ರೆ ಅಭಿವೃದ್ಧಿ, ಯೋಜನೆಗಳ ಹೆಸ್ರಲ್ಲಿ ಅಧಿಕಾರಿಗಳು ಮಾತ್ರ ಕಳ್ಳಾಟ ಆಡ್ತಾರೆ. ಇಂಥ ಭ್ರಷ್ಟ ಅಧಿಕಾರಿಗಳ ಮಾಹಿತಿ ಇದ್ದ ಕಡತವೇ ನಾಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಕಡತ ನಾಪತ್ತೆ: ರಾಯಚೂರು ಜಿಲ್ಲಾ ಪಂಚಾಯಿತ್ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಹತ್ವದ ಕಡತಗಳು ನಾಪತ್ತೆಯಾಗಿವೆ. ರಾಯಚೂರು ತಾಲೂಕಿನ ಚಂದ್ರಬಂಡ ಗ್ರಾಮ ಪಂಚಾಯಿತಿಯಲ್ಲಿ 2015ನೇ ಸಾಲಿನಲ್ಲಿ ಭಾರಿ ಅಕ್ರಮ ನಡೆದಿತ್ತು. ಪಂಚಾಯತಿ […]
ರಾಯಚೂರು: ಜಿಲ್ಲಾ ಪಂಚಾಯತಿ ಅಂದ್ಮೇಲೆ ಆ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಅಷ್ಟೂ ಮಾಹಿತಿ ಇರುತ್ತೆ. ಆದ್ರೆ ಅಭಿವೃದ್ಧಿ, ಯೋಜನೆಗಳ ಹೆಸ್ರಲ್ಲಿ ಅಧಿಕಾರಿಗಳು ಮಾತ್ರ ಕಳ್ಳಾಟ ಆಡ್ತಾರೆ. ಇಂಥ ಭ್ರಷ್ಟ ಅಧಿಕಾರಿಗಳ ಮಾಹಿತಿ ಇದ್ದ ಕಡತವೇ ನಾಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ.
ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಕಡತ ನಾಪತ್ತೆ: ರಾಯಚೂರು ಜಿಲ್ಲಾ ಪಂಚಾಯಿತ್ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಹತ್ವದ ಕಡತಗಳು ನಾಪತ್ತೆಯಾಗಿವೆ. ರಾಯಚೂರು ತಾಲೂಕಿನ ಚಂದ್ರಬಂಡ ಗ್ರಾಮ ಪಂಚಾಯಿತಿಯಲ್ಲಿ 2015ನೇ ಸಾಲಿನಲ್ಲಿ ಭಾರಿ ಅಕ್ರಮ ನಡೆದಿತ್ತು. ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರಿಗೆ ಕಾಣದಂತೆ ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೇ 13 ಮತ್ತು 14ನೇ ಹಣಕಾಸಿನ ಯೋಜನೆಯಡಿ 28 ಲಕ್ಷ ರೂಪಾಯಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಎಲ್ಲಾ ಅಕ್ರಮವೂ ಬಟಾ ಬಯಲಾಗಿತ್ತು.
ಜಿಲ್ಲಾ ಪಂಚಾಯತಿಗೆ ಅಕ್ರಮದ ತನಿಖಾ ವರದಿ ಸಲ್ಲಿಸಲಾಗಿತ್ತು. ಆದ್ರೆ ಇಂದಿಗೂ ಹಣ ಜೇಬಿಗಿಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನ ಸಂಪರ್ಕಿಸಿದ್ರೆ, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತವೇ ಕಾಣುತ್ತಿಲ್ಲವೆಂಬ ಸಬೂಬು ನೀಡ್ತಿದ್ದಾರಂತೆ. ಈ ಮೂಲಕ ಭ್ರಷ್ಟಾಚಾರದ ಹಗರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗ್ತಿದ್ದು, ಕೂಡಲೇ ಜಿಲ್ಲಾ ಪಂಚಾಯತ್ ಸಿಇಒ ಕ್ರಮ ಕೈಗೊಳ್ಬೇಕು ಅಂತಿದ್ದಾರೆ ಸ್ಥಳೀಯರು.
ಅಷ್ಟೇ ಅಲ್ದೇ ಚಂದ್ರಬಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣವೂ ಪಾವತಿಸದೇ ವಂಚಿಸಲಾಗಿದ್ಯಂತೆ. ಕೂಲಿ ಮಾಡದೇ ಇರುವ ನೂರಾರು ನಕಲಿ ಕಾರ್ಮಿಕರ ಹೆಸರಲ್ಲಿ ಕೂಲಿ ಹಣ ಪಾವತಿಸಿ ಅಕ್ರಮ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಹಿರಿಯ ಅಧಿಕಾರಿಗಳ ತಂಡ ನಡೆಸಿದ ತನಿಖೆಯಲ್ಲಿ ಎಲ್ಲವೂ ಬಯಲಾಗಿತ್ತು. ಆದ್ರೆ ಈ ರೀತಿ ಕಾರ್ಮಿಕರಿಗೆ ಪಾವತಿಸಬೇಕಿದ್ದ ಹಣವೂ ಸಹ ಚಂದ್ರಬಂಡ ಪಂಚಾಯತಿ ಅಧಿಕಾರಿಗಳು ಜೇಬಿಗಿಳಿಸಿದ್ರು. ಹೀಗಾಗಿ ಕೂಡಲೇ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿ ಅಂತಿದ್ದಾರೆ ಕಾರ್ಮಿಕರು.
ಸದ್ಯ ಜಿಲ್ಲಾ ಪಂಚಾಯತಿಯಲ್ಲೇ ಅಕ್ರಮ ನಡೀತಿದ್ದು, ಭ್ರಷ್ಟಾಚಾರ ಮುಚ್ಚಿ ಹಾಕೋಕೇ ಅಧಿಕಾರಿಗಳೇ ಮುಂದಾಗಿದ್ರಾ ಅನ್ನೋ ಅನುಮಾನ ಮೂಡಿದೆ. ಹೀಗಾಗಿ ಸಮಗ್ರ ತನಿಖೆ ನಡೀಬೇಕಿದೆ.